September 16, 2024

ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಪುಣ್ಯ ತಿಥಿ ಅಂಗವಾಗಿ ಬಿಜೆಪಿ ಪಕ್ಷದ ಯುವ ಮೋರ್ಚಾ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ

0
ಬಿಜೆಪಿ ಪಕ್ಷದ ಯುವ ಮೋರ್ಚಾ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ

ಬಿಜೆಪಿ ಪಕ್ಷದ ಯುವ ಮೋರ್ಚಾ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ

ಚಿಕ್ಕಮಗಳೂರು:  ಭಾರತೀಯ ಜನತಾ ಪಾರ್ಟಿ ೯ ವರ್ಷ ಆಡಳಿತವನ್ನು ಪೂರೈಸಿದ ಹಿನ್ನಲೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಪುಣ್ಯ ತಿಥಿ ಅಂಗವಾಗಿ ಬಿಜೆಪಿ ಪಕ್ಷದ ಯುವ ಮೋರ್ಚಾ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,

ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ಕುಮಾರ್ ಮಾತನಾಡಿ ಇಡೀ ಜಗತ್ತಿನಲ್ಲಿ ಅತ್ಯಂತ ಸುದ್ಧಿಯಲ್ಲಿರುವ ಭಾರತ ದೇಶದಲ್ಲಿ ವಿಶ್ವಮಾನ್ಯ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಉತ್ತಮವಾದ ಜನಾಭಿಮಾನವನ್ನು ಹೊಂದುವುದರ ಜೊತೆಗೆ ಜಗತ್ತಿಗೆ ಬೇಕಾದ ದಷ್ಟಿಕೋನವನ್ನು ನೀಡುತ್ತಿರುವುದು ನರೇಂದ್ರ ಮೋದಿಯವರ ಸರ್ಕಾರ ಎಂದರು.

ಹೆಮ್ಮರವಾಗಿ ಬೆಳೆದಿರುವ ಸರ್ಕಾರದ ಬುಡದ ಹಿಂದೆ ಕಥೆ ಇದೆ, ಜೂ.೨೩ ರಂದು ಆಚರಿಸಲಾಗುವ ಬಲಿದಾನ ದಿನದ ಮೂಲ ಕಾರಣಕರ್ತರಾದ ಕಾಶ್ಮೀರವನ್ನು ಉಳಿಸಲು ಹೋರಾಟ ಮಾಡಿದ ಪ್ರಥಮರಾದ ಶ್ಯಾಮ ಪ್ರಸಾದ್ ರವರ ಬಲಿದಾನ ನೋಡಲಾಗುತ್ತಿದೆ, ಸ್ವಾತಂತ್ರ್ಯದ ನಂತರದ ದಿನಗಳಲ್ಲಿ, ರಾಜ ಹರಿಸಿಂಗ್ ಕಾಶ್ಮೀರ ಭಾರತದ ಜೊತೆ ಸೇರುತ್ತದೆ ಎಂಬ ಪತ್ರವನ್ನು ನೀಡಿದಾಗ, ಅದಕ್ಕೆ ಹಲವು ನಿಬಂಧನೆಗಳನ್ನೇರಿ ವಿಶೇಷ ಸ್ಥಾನ ಮಾನವನ್ನು ನೀಡುವುದಾಗಿ ನೆಹರೂರವರು ಹೇಳಿ, ದೇಶದ ಒಳಗಿರುವ ಕಾಶ್ಮೀರಕ್ಕೆ ಹೋಗಲು ವಿಸಾ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಯಿತು ಎಂದರು.

ದೇಶದ ಭಾಗವಾದ ಜಮ್ಮ ಮತ್ತು ಕಾಶ್ಮೀರಕ್ಕೆ ವಿಸಾ ಪಡೆಯುವ ಅವಶ್ಯಕತೆ ಇಲ್ಲವೆಂದು ಆಗಿನ ಜನ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮುಖರ್ಜಿರವರು ಹೋರಾಟವನ್ನು ಮಾಡಿ ವಿಸಾ ಇಲ್ಲದೆ ಕಾಶ್ಮೀರ ಪ್ರವೇಶ ಮಾಡಲು ಹಿಂದಿನ ಪ್ರಧಾನಿ ಅಟಲ್‌ಜಿ, ಗುರುದತ್ತ, ಮುದೋಲ್ ಮಹಾರಾಜ್ ಸೇರಿದಂತೆ ೫ ಜನರ ತಂಡ ಕಾಶ್ಮೀರವನ್ನು ಪ್ರವೇಶ ಮಾಡಲಾಯಿತು, ಅಂತಹ ಸಂದರ್ಭದಲ್ಲಿ ಶ್ಯಾಮ್ ಪ್ರಸಾದ್ ರವರನ್ನು ಬಂಧಿಸಿ ಒಂದು ಮನೆಯಲ್ಲಿ ಇರಿಸಿ, ಅವರ ಆರೋಗ್ಯಕ್ಕೆ ಸರಿಹೊಂದದ ಸೂಜಿಮದ್ದು ನೀಡಲಾಯಿತು ಎಂದರು.

ಶ್ಯಾಮ್ ಪ್ರಸಾದ್ ಮುಖರ್ಜಿರವರು ಈ ಇಂಜೆಕ್ಷನ್ ನನಗೆ ಆಗುವುದಿಲ್ಲ ಎಂದು ಹೇಳಿದರು ಸಹ ಸ್ಟ್ರೆಪ್ರೋ ಮೈಸಿನ್ ಎಂಬ ಇಂಜೆಕ್ಷನನ್ನು ಡಾ. ಮೋಹಮದ್ ರವರು ಅವರಿಗೆ ನೀಡುತ್ತಾರೆ, ಇಂಜೆಕ್ಷನ್ ಪ್ರಭಾವದಿಂದ ದೇಹದ ಪರಿಸ್ಥಿತಿ ವ್ಯತ್ಯಾಸಗೊಳ್ಳುತ್ತದೆ, ಜೊತೆಯಲ್ಲಿದ್ದ ಸಹಚರ ಗುರುದತ್ತ ರವರು ಅವರನ್ನು ಆಸ್ಪತ್ರೆಗೆ ಕರೆಯೊಯುವಂತೆ ತಿಳಿಸಲಾಗುತ್ತದೆ, ಆ ಜಾಗದಿಂದ ೧೦ ಕಿ.ಲೋ ಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ತೆರಳುವುದರೊಳಗಾಗಿ ಅವರ ದೇಹಾಂತ್ಯವಾಗುತ್ತದೆ ಎಂದರು.

ಕಾಶ್ಮೀರಕ್ಕಾಗಿ ತನ್ನನ್ನು ತಾನು ಬಲಿಕೊಟ್ಟ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿರವರು ಇಂಗ್ಲೀಷ್, ಗಣೀತ, ರಸಾಯನ ಶಾಸ್ತ್ರದಲ್ಲಿ ಉನ್ನತಮಟ್ಟದ ಅಧ್ಯಯನವನ್ನು ಮಾಡಿದ್ದಾರೆ, ಅತ್ಯಂತ ಪ್ರಭಾವಿ ನಾಯಕನಾಗಿ, ವಕೀಲನಾಗಿ, ತನ್ನ ಜನತೆಗಾಗಿ ಬಾಂಗ್ಲ ಮತ್ತು ಪಂಜಾಬ್‌ನ ಸ್ವಾತಂತ್ರ್ಯ ಹೋರಾಟ ಪ್ರಾರಂಭದಲ್ಲಿ ವಿಭಜನೆ ಪ್ರಾರಂಭವಾದಾಗ ಬಾಂಗ್ಲವನ್ನು ತುಂಡು ಮಾಡಲು ಹೋರಟಾಗ ಅದನ್ನು ಉಳಿಸಿದವರು ಶ್ಯಾಮ್ ಪ್ರಸಾದ್ ರವರು ಅದೇ ರೀತಿಯಲ್ಲಿ ಕಾಶ್ಮೀರಕ್ಕಾಗಿ ಬಲಿದಾನವನ್ನು ಮಾಡಿದರು ಎಂದರು.

ಉನ್ನತವಾದ ಸಾಧನೆ ಮಾಡಿರುವ ಸರ್ಕಾರ, ಸಂಸ್ಥೆ ಅಥವಾ ವ್ಯಕ್ತಿ ಅಡಿಪಾಯವೇ ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್‌ದಯಾಳ್, ಅಟಲ್‌ಜಿ, ಅದ್ವಾನಿ ರಂತಹ ಮಹಾನ್ ನಾಯಕರು, ಇಂತಹ ಗಟ್ಟಿಯಾದ ತಳಪಾಯವನ್ನು ಮುನ್ನಡೆಸುವ ಕೆಲಸ ಮಾಡಬೇಕಿದೆ, ಭಾರತೀಯ ಕಾಶ್ಮೀರ ಆರಂಭವಾಗಿದ್ದು ಕಾಶಈರವನ್ನು ಉಳಿಸುವ ಸಲುವಾಗಿ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್ ಮಾತನಾಡಿ ಪಕ್ಷದ ಹಿರಿಯರಾದ ಶ್ಯಾಮ ಪ್ರಸಾದ್ ರವರ ಸೃತಿ ದಿನವನ್ನು ಆಚರಣೆಯನ್ನು ಮಾಡಲಾಗುತ್ತಿದ್ದರು, ಅವರ ನೆನಪಿಗಾಗಿ ಕೆಲವು ವಾರ್ಡ್‌ಗಳಲ್ಲಿ ಶಶಿ ನೆಡುವ ಕಾರ್ಯವನ್ನು ಮಾಡಲಾಗುತ್ತಿದ್ದು, ಅವರ ಆದರ್ಶಗಳನ್ನು ಪಾಲಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುವ ಮೋರ್ಚಾದ ಪಾತ್ರ ಅತಿಮುಖ್ಯವಾಗಿದ್ದು, ನಮ್ಮ ವಿರುದ್ಧ ಅಪಪ್ರಚಾರ ಮಾಡಿ ಸೋಲಿಸಲಾಗಿದ್ದು, ಬೂತ್ ಮಟ್ಟದ ಪ್ರತಿ ಮನೆಗಳಿಗೆ ಬೇಟಿ ನೀಡುವುದರ ಮೂಲಕ ಪ್ರಧಾನ ಮಂತ್ರಿಗಳ ಕಾರ್ಯಗಳ ಬಗ್ಗೆ ತಿಳಿಸುವುದರ ಮೂಲಕ ೨೦೨೪ರ ಚುನಾವಣೆಯಲ್ಲಿ ಮತ್ತೋಮ್ಮೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾಗುವಂತೆ ಯುವ ಮೋರ್ಚಾ ಪದಾಧಿಕಾರಿಗಳು ಸಹಕಾರ ನೀಡಬೇಕೆಂದು ತಿಳಿಸಿದರು.

ಬಿಜೆಪಿ ಮುಖಂಡ ಸುಧೀರ್ ಮಾತನಾಡಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ರವರನ್ನು ನೆನಪು ಮಾಡಿಕೊಳ್ಳುವ ಸೃತಿ ದಿನ, ಅವರನ್ನು ನೆನಪು ಮಾಡಿಕೊಳ್ಳುವುದು ಕಾರ್ಯಕರ್ತರ ಕರ್ತವ್ಯ, ೧೯೦೧ರಲ್ಲಿ ಪಶ್ಚಿಮ ಬಂಗಾಲದ ಕುಟುಂಬದಲ್ಲಿ ಜನಿಸಿದ ಅವರು, ಬಾಲ್ಯದಿಂದಲೇ ಅತ್ಯಂತ ಚಾಣಾಕ್ಷ ಮತ್ತು ವಿದ್ಯಾಭ್ಯಾಸದಲ್ಲಿ ಕಾಲಜಿಯನ್ನು ಹೊಂದಿದವರು, ಪಶ್ಚಿಮ ಬಂಗಾಲದ ಕಲ್ಕತ್ತ ಯೂನಿವರ್ಸಿಟಿಯಲ್ಲಿ ತಮ್ಮ ೩೨ನೇ ವಯಸ್ಸಿನಲ್ಲಿ ಉಪಕುಲಪತಿಗಳಾಗಿ ನೇಮಕ ಗೋಳ್ಳುತ್ತಾರೆ, ಇತಿಹಾಸದಲ್ಲೇ ಅತ್ಯಂತ ಕಿರಿಯ ಕುಲಪತಿ ಎಂದರೇ ಶ್ಯಾಮ ಪ್ರಸಾದ್ ಮುಖರ್ಜಿ ರವರು ಎಂದರು.

ಎಂ.ಎ ಪದವಿ ಮುಗಿಸಿ, ನಂತರ ಇಂಗ್ಲೇಡ್‌ನಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪಡೆದು ದೇಶಕ್ಕೆ ಬಂದ ಅವರು ಸ್ವಾತಂತ್ರ ಪೂರ್ವದಲ್ಲಿ ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದ ಅವರು ನೆಹರೂ ರವರ ಸರ್ಕಾರ ಬಂದ ನಂತರ ಅವರನ್ನು ಕೈಗಾರಿಕಾ ಮತ್ತು ಔದ್ಯೋಗಿಕ ಮಂತ್ರಿಯನ್ನಾಗಿ ನಿಯೋಜನೆ ಮಾಡಲಾಗುತ್ತದೆ, ಆ ಸಂದರ್ಭದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನವನ್ನಾಗಿ ದೇಶ ವಿಭಜನೆ ಮಾಡುವ ಸಂದರ್ಭದಲ್ಲಿ ಮನನೊಂದ ಅವರು ನಾಲ್ಕು ಭಾಗಗಳಲ್ಲಿ ನಾಲ್ಕು ಖಾರ್ಕಾನೆಗಳನ್ನು ಸೃಷ್ಟಿಸಿ ಉದ್ಯೋಗ ಸೃಷ್ಟಿಕರ್ತರಾಗುತ್ತಾರೆ ಎಂದರು.

ಕಾಶ್ಮೀರದಲ್ಲಿ ೩೭೦ ವಿಧಿಯ ರದ್ಧತಿ ಮಾಡಲು ಮೂಲ ಕಾರ್ಯಕರ್ತರು ಶ್ಯಾಮ ಪ್ರಸಾದ್ ಮುಖರ್ಜಿರವರು, ಅಕ್ಟೋಬರ್ ೨೧ನೇ ತಾರೀಖು ಭಾರತೀಯ ಯುವ ಸಂಘವನ್ನು ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗುತ್ತಾರೆ, ಅದೇ ದಿನ ಭಾರತೀಯ ಜನ ಸಂಘ ಉದ್ಘಾಟನೆ ನಡೆಯುತ್ತದೆ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಕಾಶ್ಮೀರ ಚಳುವಳಿ ಮಾಡಿ ಕಾನಪುರದ ಪ್ರಥಮ ಜನ ಸಂಘದ ರಾಷ್ಟ್ರೀಯ ಸಮ್ಮೇಳನದಲ್ಲಿ, ನಮ್ಮ ದೇಶಕ್ಕೆ ದೋ ನಿಶಾನ್, ದೋ ಪ್ರಧಾನ್, ದೋ ವಿಧಾನ್ ನಹಿ ಚಲೇಗ ಎಂಬ ಘೋಷಣೆಯೊಂದಿಗೆ ೧೯೫೧ ರಿಂದ ಜನಸಂಘದ ಎಲ್ಲಾ ಪ್ರನಾಳಿಕೆಯ ರದ್ಧತಿಗಾಗಿ ಹೋರಾಟ ನಡೆಸುತ್ತಾರೆ ಎಂದರು.

ಮೇ ತಿಂಗಳಿನಲ್ಲಿ ಶ್ಯಾಮ್ ಪ್ರಸಾದ್ ರವರು ಕಾಶ್ಮೀರಕ್ಕೆ ತೆರಳುವಾಗ ವಿಸಾ ತೆಗೆದುಕೊಳ್ಳುವ ಪದ್ಧತಿ ಇದ್ದ ಸಂದರ್ಭದಲ್ಲಿ ವಿಸಾ ತೆಗೆದುಕೊಳ್ಳದೆ ಕಾಶ್ಮೀರಕ್ಕೆ ಹೋದ ಸಂದರ್ಭದಲ್ಲಿ ಕಾಶ್ಮೀರ ಪೊಲೀಸರು ಅವರನ್ನು ಬಂಧಿಸಲಾಗುತ್ತದೆ, ಸ್ವಾತಂತ್ರ ನಂತರ ಕಾಶ್ಮೀರಕ್ಕಾಗಿ, ದೇಶದ ಒಗ್ಗಟ್ಟಿಗಾಗಿ ಜೀವ ಬಲಿಯಾಗಿದೆ ಎಂದಾದರೆ ಅದು ಶ್ಯಾಮ್ ಪ್ರಸಾದ್ ಮುಖರ್ಜಿ ಅವರದ್ದು ಎಂದರು.

ಯುವ ಮೋರ್ಚಾ ಅವರನ್ನು ಸೃತಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮೊದಲ ಮತ್ತು ಎರಡನೇ ರಾಷ್ಟ್ರೀಯ ಅಧ್ಯಕ್ಷರನ್ನು ಯಾವುದೇ ತನಿಖೆ ಇಲ್ಲದೆ ಕಳೆದುಕೊಂಡ ಪಕ್ಷ ಅಂದಿನ ಭಾರತೀಯ ಜನ ಸಂಘ ಮತ್ತು ಇಂದಿನ ಭಾರತೀಯ ಜನತಾ ಪಾರ್ಟಿ, ವಿಚಾರಧಾರೆಯನ್ನು ಇಟ್ಟುಕೊಂಡ ಪಾರ್ಟಿ ಬಿಜೆಪಿ, ಪ್ರತಿ ಬೂತ್‌ಗಳಲ್ಲಿಯೂ ಶ್ಯಾಮ ಪ್ರಸಾದ್ ರವರ ವಿಚಾರ ಧಾರೆಯನ್ನು ಯುವ ಮೋರ್ಚಾ ಕಾರ್ಯಕರ್ತರು ತಲುಪಿಸಬೇಕು ಎಂದರು

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್‌ಕೋಟ್ಯಾನ್ ಮಾತನಾಡಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವಿಶೇಷ ಕಾರ್ಯಕ್ರಮಗಳನ್ನು ಮಾಡುವಲ್ಲಿ ಮುಂದಿರುತ್ತದೆ, ಅದರಂತೆ ಇಂದು ಸಮ ಮುಖರ್ಜಿ ರವರ ಸೃತಿ ದಿನವನ್ನು ಆಚರಣೆ ಮಾಡಲಾಗುತ್ತಿದೆ, ಕೇವಲ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ತಯಾರು ಮಾಡದೆ ಚುನಾವಣೆ ಪೂರ್ವದಲ್ಲಿಯೂ ಕಾರ್ಯಕರ್ತರ ಬಗ್ಗೆ ಕಾಳಜಿವಹಿಸಿ ಅವರನ್ನು ಗಟ್ಟಿಗೊಳಿಸು ಉದ್ದೇಶ ಈ ಕಾರ್ಯಕ್ರಮದಾಗಿದೆ ಎಂದರು.

ಕೇಂದ್ರ ಸರ್ಕಾರದ ಮೇಲೆ ಹೊರಿಸಲಾಗುತ್ತಿರುವ ಇಲ್ಲಸಲ್ಲದ ಆರೋಪಗಳಿಗೆ ದಿಟ್ಟ ಉತ್ತರವನ್ನು ನೀಡುವಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಮುಂದಾಗಬೇಕು, ಈಗಿನ ರಾಜ್ಯ ಸರ್ಕಾರದ ನ್ಯೂನತೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ನಮ್ಮ ನಡೆಯನ್ನು ಮುಂದುವರಿಸಬೇಕು, ಮುಂದೆ ಬರುವ ೨೪ರ ಚುನಾವಣೆಯಲ್ಲಿ ಯುವ ಮೋರ್ಚಾ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವನ್ನು ಹೊಂದಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಉಪಾಧ್ಯಕ್ಷ ನಾಗಣ್ಣ, ಬಿಜೆಪಿ ಮುಖಂಡರಾದ ಹೆಚ್.ಎಸ್.ಪುಟ್ಟಸ್ವಾಮಿ, ರಾಜೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Plantation program led by Yuva Morcha of BJP party

About Author

Leave a Reply

Your email address will not be published. Required fields are marked *