September 16, 2024

ವಿದ್ಯಾರ್ಥಿ ಜೀವನದಿಂದಲೇ ಮಾದಕ ವಸ್ತುಗಳಿಂದ ದೂರವಿರಿ

0
ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮವ

ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮವ

ಚಿಕ್ಕಮಗಳೂರು: ಮಕ್ಕಳು ವಿದ್ಯಾರ್ಥಿದೆಸೆಯಿದಲೇ ಮಾದಕ ವಸ್ತುಗಳು ಹಾಗೂ ದುಶ್ಚಟದ ವ್ಯಸನಗಳಿಗೆ ಬಲಿಯಾಗದೇ ಆರೋಗ್ಯಪೂರ್ಣ ಬದುಕು ನಡೆಸಲು ಮುಂದಾದರೆ ಮಾತ್ರ ಸದೃಢ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎ.ಎನ್.ಸೋಮ ಹೇಳಿದರು.

ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕದಡಿ ನಗರದ ಹೌಸಿಂಗ್ ಬೋರ್ಡ್ ಸಮೀಪ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯೌವ್ವನದ ಹಾದಿಯಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಆಕರ್ಷಣೆಗಳು ಸೆಳೆಯಲಿದೆ. ಮಾದಕ ವಸ್ತುಗಳ ಸೇವನೆ, ಧೂಮಪಾನದಂತಹ ಅನೇಕ ಕೆಟ್ಟ ಅಭ್ಯಾಸಗಳು ಮೂಡಲಿದೆ. ಯಾವುದು ಸರಿ, ತಪ್ಪು ಎಂಬ ಆಲೋಚನೆಗಳನ್ನು ಹೊಂದುವ ಮೂಲಕ ದೃಢವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜೀವನದಲ್ಲಿ ಮಾದಕ ವ್ಯಸನಗಳಿಗೆ ಬಲಿಯಾದರೆ ಹೊರಬರಲು ಕಷ್ಟಸಾಧ್ಯವಿದೆ. ದೃಢ ಮನಸ್ಸು ಹೊಂದುವ ವ್ಯಕ್ತಿಗೆ ಗುಣಪಡಿಸಬಹುದು. ಆದರೆ ಮಾನಸಿಕ ಹಾಗೂ ಖಿನ್ನತೆಯಿಂದ ಒಳಗಾಗುವ ವ್ಯಕ್ತಿಗಳಿಗೆ ಸ್ವಲ್ಪ ಕಷ್ಟಸಾಧ್ಯವಾ ದರೂ ಚಿಕಿತ್ಸೆಗೊಳಪಡಿಸಿದರೆ ಮುಂದಿನ ದಿನಗಳಲ್ಲಿ ಎಂದಿಗೂ ಮಾದಕ ವಸ್ತುಗಳ ಸೇವನೆಗೆ ಮುಂದಾಗದಂತೆ ಕ್ರಮ ವಹಿಸಬಹುದು ಎಂದು ಹೇಳಿದರು.

ಮುಂದಿನ ಪೀಳಿಗೆಯಲ್ಲಿ ವೈದ್ಯರು ಹಾಗೂ ಇಂಜಿನಿಯರಾಗಲೆಂಬ ಕನಸನ್ನು ಹೊತ್ತುಕೊಂಡು ಪೋಷಕರು ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳುಹಿಸುತ್ತಾರೆ. ಕೆಲವರ ಸಹವಾಸದೋಷದಿಂದ ಯುವಪೀಳಿಗೆ ಈ ವ್ಯಸನ ದತ್ತ ಕಾಲುಡುತ್ತಿರುವುದು ಆತಂಕ ವಿಷಯ. ಇದು ಕೇವಲ ಕ್ಷಣಮಾತ್ರದ ಅಮಲನ್ನು ತೋರುವ ಮೂಲಕ ಪೂರ್ಣಪ್ರಮಾಣದ ಆರೋಗ್ಯ ಹಾಳು ಮಾಡಲಿದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ|| ಕೆ.ಎಸ್.ವಿನಯ್‌ಕುಮಾರ್ ಮಾತನಾಡಿ ಕೆಲವು ಮಂದಿ ಹಲವಾರು ವರ್ಷಗಳಿಂದ ಬೀಡಿ, ಸಿಂಗರೇಟ್, ತಂಬಾಕು ಸೇರಿದಂತೆ ವಿವಿಧ ರೀತಿಯ ಮತ್ತೇರಿಸುವ ವಸ್ತುಗಳನ್ನು ನಿತ್ಯರೂಢಿ ಮಾಡಿಕೊಂಡಿದ್ದು ಒಂದೆರಡು ದಿನಗಳು ಇಲ್ಲವಾದರೂ ಏನನ್ನು ಕಳೆದುಕೊಂಡಂತೆ ವರ್ತಿಸುತ್ತಾರೆ. ಇಂತಹ ಸೇವನೆಯಿಂದ ಹೊರಬರಲು ಸೂಕ್ತ ಚಿಕಿತ್ಸೆ ಅತ್ಯವಶ್ಯ ಎಂದು ಸಲಹೆ ನೀಡಿದರು.

ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಗೆ ದಾಸರಾಗಬಾರದು. ಇತರೇಳುವ ಮಾತುಗಳಿಗೆ ವ್ಯಸನಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ಸಂಪೂರ್ಣ ಬದುಕು ದುಸ್ತರವಾಗಲಿದೆ. ಅದೇ ರೀತಿ ಸಮಾಜದಲ್ಲಿ ಯಾರೇ ವ್ಯಸನಿಗಳಿದ್ದರೂ ಅಂತಹವರನ್ನು ನೋಡಿ ಅಪಹಾಸ್ಯ ಪಡುವ ಬದಲು ತಿದ್ದುವ ಕೆಲಸದಲ್ಲಿ ನಿರತರಾಗಬೇಕು ಎಂದು ತಿಳಿಸಿದರು.

ಚಿಕಿತ್ಸಾ ಮನಶಾಸ್ತ್ರ ತಜ್ಞ ನವೀನ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಮಾದಕ ವಸ್ತುಗಳು ಸಮಾಜದಲ್ಲಿ ಮೂರು ಹಂತಗಳಲ್ಲಿ ಹರಡಿಕೊಂಡಿದೆ. ಕಾನೂನಿನಡಿಯಲ್ಲಿ ಸಿಗರೇಟ್-ಬೀಡಿ, ಅಕ್ರಮದಡಿಯಲ್ಲಿ ಗಾಂಜಾ ಹಾಗೂ ವೈದ್ಯರ ಸಲಹೆ ಇಲ್ಲದೇ ಮೆಡಿಕಲ್‌ಗಳಲ್ಲಿ ದೊರೆಯುವಂತಹ ಕಾಪ್‌ಸೀರಾಪ್, ನಿದ್ದೆ ಮಾತ್ರೆಗಳಾಗಿದ್ದು ಇವುಗಳಿಂದ ಆದಷ್ಟು ದೂರವಿರುವ ಮೂಲಕ ಸುಸ್ಥಿರ ಜೀವನಕ್ಕೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ|| ಸೀಮಾ, ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಎಂ.ಪಿ.ರಾಜೇಂದ್ರ, ಶಾಲಾಬಿವೃದ್ದಿ ಸಮಿತಿ ಅಧ್ಯಕ್ಷ ದೇವೇಂದ್ರನಾಥ್ ಜೈನ್, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಬೇಬಿ, ಜಲಜಾ, ಉಪನ್ಯಾಸಕಿ ಶಾರದಾ ಮತ್ತಿತರರು ಉಪಸ್ಥಿತರಿದ್ದರು.

International Day Against Drug Abuse and Trafficking

 

About Author

Leave a Reply

Your email address will not be published. Required fields are marked *