September 8, 2024

ಗುಣಮಟ್ಟದ ಹೆಲ್ಮೆಟ್ ಧರಿಸಯವಂತೆ ಒತ್ತಾಯಿಸಿ ಪೊಲೀಸರಿಂದ ಜಾಗೃತಿ

0
ಗುಣಮಟ್ಟದ ಹೆಲ್ಮೆಟ್ ಧರಿಸಯವಂತೆ ಒತ್ತಾಯಿಸಿ ಪೊಲೀಸರಿಂದ ಜಾಗೃತಿ

ಗುಣಮಟ್ಟದ ಹೆಲ್ಮೆಟ್ ಧರಿಸಯವಂತೆ ಒತ್ತಾಯಿಸಿ ಪೊಲೀಸರಿಂದ ಜಾಗೃತಿ

ಚಿಕ್ಕಮಗಳೂರು: ಗುಣಮಟ್ಟದ ಹೆಲ್ಮೆಟ್ ಧರಿಸಿಬಂದ ದ್ವಿಚಕ್ರವಾಹನ ಸವಾರರಿಗೆ ಸಂಚಾರಿ ಪೋಲಿಸರು ದ್ವಿಚಕ್ರವಾಹನಸವಾರರಿಗೆ ಹೂನೀಡಿ ಅಭಿನಂದಿಸಿದರು.

ಚಿಕ್ಕಮಗಳೂರು ನಗರದಾದ್ಯಂತ ಐ.ಎಸ್.ಐ ಮಾರ್ಕ್ ಇಲ್ಲದ ಸುರಕ್ಷತೆಯಿಲ್ಲದ ಅರ್ಧ ಹೆಲ್ಮೆಟ್‌ಗಳನ್ನು ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುವ ಸವಾರರಿಗೆ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ನಿರ್ದೇಶನದಂತೆ ಸಂಚಾರಿ ಪೋಲಿಸರು ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಕಾರ್ಯಚರಣೆ ನಡೆಸಿದರು.

ನಗರದ ವಿವಿಧ ವೃತ್ತಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೋಲೀಸರು ಸುಮಾರು ೪೦೦ ಕ್ಕೂ ಹೆಚ್ಚು ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದುಕೊಂಡು ಸವಾರರಿಗೆ ಐ. ಎಸ್. ಐ ಮಾರ್ಕ್ ಇರುವಂತಹ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣ ಸ್ಥಳದಲ್ಲಿಯೇ ಐ. ಎಸ್. ಐ ಮಾರ್ಕ್ ಇರುವಂತಹ ಉತ್ತಮ ಗುಣಮಟ್ಟದ ಹೆಲ್ಮೆಟ್‌ನ್ನು ಖರೀದಿಸಿ ಬಂದಂತಹ ಸವಾರರಿಗೆ ಹೂವನ್ನು ನೀಡಿ ಅಭಿನಂದನೆಯನ್ನು ಸಲ್ಲಿಸಿದರು.

ಗುಣಮಟ್ಟವಿಲ್ಲದ ಹೆಲ್ಮೆಟ್ ಧರಿಸುವ ಬೈಕ್ ಸವಾರರ ವಿರುದ್ದ ಕ್ರಮ, ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಹಾಗೂ ಹಾಲ್ಫ್ ಹೆಲ್ಮೆಟ್ ಮತ್ತು ಐ. ಎಸ್. ಐ ಮಾರ್ಕ್ ಇಲ್ಲದ ಉತ್ತಮ ಗುಣಮಟ್ಟದಲ್ಲದ ಹೆಲ್ಮೆಟ್ ಧರಿಸಿ ಸವಾರಿ ಮಾಡುವ ಸವಾರರು ಅಪಘಾತದಲ್ಲಿ ತಲೆಗೆ ತೀವ್ರತರಹದ ಗಾಯಗಳುಂಟಾಗಿ ಮರಣ ಹೊಂದುತ್ತಿರುವುದರಿಂದ ಸವಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಚರಣೆ ನಡೆಸಲಿದ್ದಾರೆ.

ಮುಂದಿನ ದಿನಗಳಲ್ಲಿ ಹಾಲ್ಫ್ ಹೆಲ್ಮೆಟ್ ಮತ್ತು ಐ. ಎಸ್. ಐ ಮಾರ್ಕ್ ಇಲ್ಲದ ಉತ್ತಮ ಗುಣಮಟ್ಟದಲ್ಲದ ಹೆಲ್ಮೆಟ್ ಧರಿಸಿ ಸವಾರಿ ಮಾಡುವ ಸವಾರರು ಮೇಲೆ ಭಾರತೀಯ ಮೋಟಾರ್ ವಾಹನಗಳ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದು ಪೋಲಿಸ್ ವರಿಷ್ಟಾಧಿಕಾರಿ ಉಮಾಪ್ರಶಾಂತ್ ತಿಳಿಸಿದ್ದಾರೆ.

Awareness by the police to force them to wear quality helmets

About Author

Leave a Reply

Your email address will not be published. Required fields are marked *

You may have missed