September 7, 2024

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

0
ಬಕ್ರೀದ್ ಹಬ್ಬದ ಅಂಗವಾಗಿ ಗುರುವಾರ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಬಕ್ರೀದ್ ಹಬ್ಬದ ಅಂಗವಾಗಿ ಗುರುವಾರ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು: ಬಕ್ರೀದ್ ಹಬ್ಬದ ಅಂಗವಾಗಿ ಗುರುವಾರ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು, ಮುಸ್ಲಿಂ ಬಾಂಧವರಿಗೆ ಶುಭಾಷಯ ಕೋರಿದರು.

ಮುಸ್ಲಿಂ ಬಾಂಧವರಿಗೆ ಶುಭಾಷಯ ಕೋರಿದ ಶಾಸಕ ಹೆಚ್.ಡಿ ತಮ್ಮಯ್ಯ ಕ್ಷೇತ್ರದಲ್ಲಿ ಜನತೆ ನೆಮ್ಮದಿ ಶಾಂತಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡುವಂತೆ ಭಗವಂತನಲ್ಲಿ ಪ್ರಾರ್ಥಸುತ್ತೇನೆ ಎಂದು ಹೇಳಿದರು.

ಕೃಷಿ ಅವಲಂಬಿತ ಕುಟುಂಬಗಳಿಗೆ ಮಳೆ-ಬೆಳೆ ಚನ್ನಾಗಿ ಕರುಣಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಸುವುದರ ಜೊತೆಗೆ ಭಾರತ ಒಂದು ವಿವಿಧ ಸಮುದಾಯದ ಸಾಂಸ್ಕೃತಿಕ ರಾಷ್ಟ್ರವಾಗಿದ್ದು, ಸರ್ವ ಧರ್ಮೀಯರು ಶಾಂತಿ-ಸೌಹಾರ್ಧದಿಂದ ಬದುಕಲಿ ಎಂದು ಹಾರೈಸಿದರು.

’ರಘುಪತಿ ರಾಘವ ರಾಜಾರಾಂ ಪತೀತ ಪಾವನ ಸೀತಾ ರಾಂ’ ಎಂಬ ಮಹಾತ್ಮಾ ಗಾಂಧಿಯವರ ಗೀತೆಯನ್ನು ಹಾಡುವ ಮೂಲಕ ಎಲ್ಲರೂ ಒಂದೇ ಎಂಬ ಭಾವನೆ ಬೆಳೆಯಲಿ ಎಂದು ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಅತ್ಯಂತ ಸಂತೋಷದಿಂದ ಪ್ರೀತಿಯಿಂದ ಸಡಗರ ಸಭ್ರಮದೊಂದಿಗೆ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಮೊದಲು ಶುಭಾಷಯ ಕೋರಿ ಭಗವಂತ ಸರ್ವರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.

ಭಾರತದಲ್ಲಿ ಸ್ನೇಹಜೀವಿಗಳು ವಸುದೈವ ಕುಟುಂಬಕಂ ನನ್ನದು ಸಾಮರಸ್ಯದ ಬದುಕಿನಲ್ಲಿ ನಾವೆಲ್ಲಾ ಇಲ್ಲಿ ಸೇರಿದ್ದೇವೆ ಭಾವೈಕ್ಯತೆಯನ್ನು ಪ್ರಪಂಚಕ್ಕೆ ಸಾರಿದ ರಾಷ್ಟ್ರ ಭಾರತ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪುರವರ ನಡಿಯಂತೆ ಬದುಕಬೇಕೆಂದು ಕರೆ ಕೊಟ್ಟರು.

ಸಾಮರಸ್ಯದ ಬದುಕು ಇಂದು ಪ್ರಪಂಚಕ್ಕೆ ಬೇಕಾಗಿದೆ ಭಾರತ ದೇಶ ಜಾತ್ಯಾತೀತ ಸುಂದರ ನಾಡಾಗಿದೆ ಸಂತ ಶಿಶುನಾಳ ಶರೀಫರು ಇಡೀ ನಾಡಿಗೆ ತತ್ವ ಪದಗಳ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬಗ್ಗೆ ಜನ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ನಮ್ಮ ಧರ್ಮವನ್ನು ಗೌರವಿಸಿದಂತೆ ಇನ್ನೊಂದು ಧರ್ಮದ ಆಚರಣೆಗಳನ್ನು ಗೌರವಿಸಿದಾಗ ಮಾತ್ರ ಸಾಮರಸ್ಯ ಕಾಣಲು ಸಾಧ್ಯ ಎಂದು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಮುಸ್ಲಿಂ ಸಮುದಾಯದ ವಿವಿಧ ಮಸೀದಿಗಳ ಧಾರ್ಮಿಕ ಗುರುಗಳು ಭಾಗವಹಿಸಿದ್ದರು.

Mass prayer at Eidgah Maidan on Thursday as part of Bakrid festival

 

About Author

Leave a Reply

Your email address will not be published. Required fields are marked *

You may have missed