September 19, 2024

ಸಣ್ಣ ಸಮುದಾಯಗಳ ತಮ್ಮ ಹಕ್ಕು ಪಡೆಲು ಸಂಘಟಿತರಾಗಬೇಕು

0
ತಮಿಳು ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸನ್ಮಾನ ಸಭೆ

ತಮಿಳು ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸನ್ಮಾನ ಸಭೆ

ಚಿಕ್ಕಮಗಳೂರು: ಸಣ್ಣ ಸಣ್ಣ ಸಮುದಾಯಗಳ ಜನ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಬೇಕೆಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಭಾನುವಾರ ನಗರದ ತಮಿಳು ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಾಗುವುದಿಲ್ಲ. ಎರಡು ಕೈ ಸೇರಿದರೇ ಮಾತ್ರ ಚಪ್ಪಾಳೆ ತಟ್ಟಲು ಸಾಧ್ಯವಾಗುತ್ತದೆ. ಅದೇ ರೀತಿ ಹತ್ತಾರು, ನೂರಾರು ಕೈಗಳು ಒಂದಾದರೇ, ಮಾತ್ರ ಹಕ್ಕುಗಳನ್ನು ಪಡೆದು ಕೊಳ್ಳಲು ಸಾಧ್ಯವಾಗುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರಬಹುದಾಗಿದೆ ಎಂದು ಕಿವಿ ಮಾತು ಹೇಳಿದರು.

ಸಂಘಟಿತ ಹೋರಾಟ ಯಾವುದೇ ಕಾರಣಕ್ಕೂ ಸ್ವಾರ್ಥಕ್ಕಾಗಿ ಇರಬಾರದು. ಆ ರೀತಿ ಆದರೆ, ಆ ಸಮು ದಾಯಗಳ ಏಳಿಗೆಯಾಗುವುದಿಲ್ಲ. ನಮ್ಮ ಹೋರಾಟ ಬಡವರು, ಅಸಹಾಯಕರು, ದೀನ, ದುರ್ಬರ ಪರ ವಾಗಿರಬೇಕು ಹಾಗಾದಾಗ ಮಾತ್ರ ಆ ಸಮುದಾಯ ಉನ್ನತಿ ಹೊಂದುತ್ತದೆ ಎಂದು ಕಿವಿ ಮಾತು ಹೇಳಿದರು.

ತಮಿಳು ಸಮುದಾಯದ ಜನ ಬಹಳ ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ಸ್ವಾಭಿಮಾನದಿಂದ ಬದು ಕುವವರು. ಸಮುದಾಯದಲ್ಲಿ ಕಾರ್ಮಿಕರೇ ಹೆಚ್ಚಾಗಿದ್ದು, ಆ ಹಿನ್ನಲೆಯಲ್ಲಿ ಕಾರ್ಮಿಕರು ಎಲ್ಲಾ ಸೌಲಭ್ಯ ಗಳನ್ನು ಪಡದುಕೊಳ್ಳಲು ಮುಂದಾಗಬೇಕೆಂದು ಸಲಹೆ ನೀಡಿ ತಮಿಳು ಸಮುದಾಯ ಗಟ್ಟಿಯಾಗಬೇಕಾದರೇ ಆ ಸಮಾಜದಲ್ಲಿರುವ ಎಲ್ಲಾ ಸಂಘಗಳು ಒಗ್ಗೂಡಿ ಒಂದೇ ಸಂಘವನ್ನು ಸ್ಥಾಪಿಸಬೇಕು. ಆ ರೀತಿ ಮಾಡಿದರೇ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಹಿನ್ನಲೆಯಲ್ಲಿ ಎಲ್ಲರೂ ಒಗ್ಗೂಡಬೇಕು. ಸಂಘಟಿತರಾಗಿ ಕೆಲಸ ಮಾಡಬೇಕು ಎಂದ ಶಾಸಕರು, ತಮಿಳು ಸಂಘಕ್ಕೆ ನಗರದಲ್ಲಿ ನಿವೇಶನ ಒದಗಿಸುವುದರ ಜೊತೆಗೆ ಸುಸಜ್ಜಿತವಾದ ಸಮುದಾಯ ಭವನ ವನ್ನು ಸಹ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ನಾನು ಬರೀ ಶಾಸಕನಾಗಲು ಇಷ್ಟ ಪಡುವುದಿಲ್ಲ ಅದರ ಬದಲು ಜನ ಸೇವಕನಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಎಲ್ಲಾ ವರ್ಗದ ಜನರ ಪ್ರೀತಿ, ವಿಶ್ವಾಸಗಳಿಸುತ್ತೇನೆ ಎಂದು ತಿಳಿಸಿದ ಅವರು, ತಮಿಳು ಸಮಾಜದ ಆರಾಧ್ಯದೈವ ಕುಮಾರಗಿರಿಯ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ತಮಿಳು ಸಂಘದ ಮುಖಂಡ ವಿಜಯಕುಮಾರ್ ಮಾತನಾಡಿ, ತಮಿಳು ಸಂಘ ಸ್ಥಾಪನೆಯಾಗಿ ೧೬ವರ್ಷ ಕಳೆದಿದೆ. ಅನೇಕ ಬೇಡಿಕೆಗಳನ್ನು ಈ ಹಿಂದಿನ ಶಾಸಕರ ಮುಂದಿಟ್ಟಿದ್ದು ಯಾವುದೇ ಬೇಡಿಕೆಗಳು ಈಡೇ ರಿಲ್ಲ. ನೂತನ ಶಾಸಕರಾದ ಎಚ್.ಡಿ.ತಮ್ಮಯ್ಯ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಸಂಘಕ್ಕೆ ನಿವೇಶದ ಅಗತ್ಯವಿದ್ದು ಅಲ್ಲಂಪುರ ಗ್ರಾಮದಲ್ಲಿ ನಿವೇಶವನ್ನು ಗುರುತಿಸಲಾಗಿದೆ. ಜಾಗದ ಸಂಬಂಧ ದಾಖಲಾತಿಗಳು ಇದ್ದು, ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡುವಂತೆ ತಿಳಿಸಿದ ಅವರು, ಕುಮಾರ ಗಿರಿಯ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಭಿವೃದ್ದಿ ಆದ್ಯತೆ ನೀಡಿ ಕೆಲಸ ಮಾಡುವಂತೆ ತಿಳಿಸಿದರು.

ನಗರದಲ್ಲಿ ತಮಿಳು ಶಾಲೆ ನೂರು ವರ್ಷಗಳ ಇತಿಹಾಸವಿದೆ. ಶಾಲೆಯಲ್ಲಿ ಆಂಗ್ಲಮಾಧ್ಯಮ ತರಗತಿ ಯನ್ನು ತೆರೆಯುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದ್ದು, ಅದನ್ನು ತಡೆ ಹಿಡಿಯಲಾಗಿದೆ. ವಿದ್ಯಾರ್ಥಿ ಗಳ ಭವಿಷ್ಯದ ದೃಷ್ಟಿಯಿಂದ ಆಂಗ್ಲಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ೧೬ ರಿಂದ ೧೭ ಸಾವಿರ ಜನಸಂಖ್ಯೆ ಇದೆ. ಹಾಗೇ ಜಿಲ್ಲೆಯಲ್ಲಿ ೭೦ಸಾವಿರ ಜನ ಇದ್ದು, ತಮಿಳು ಜನಾಂಗದವರಿಗೆ ರಾಜಕೀಯವಾಗಿ ಆದ್ಯತೆ ನೀಡಬೇಕು ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ನೀಡಿ ನಾಮನಿರ್ದೇಶಿತ ಸ್ಥಾನಗಳ ಆಯ್ಕೆ ಸಂದರ್ಭದಲ್ಲಿ ತಮಿಳು ಜನಾಂಗದವರನ್ನು ಪರಿಗಣಿಸಬೇ ಕೆಂದು ಒತ್ತಾಯಿಸಿದರು.ಸಂಘದ ಜಿ.ರಘು ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಮಣ್ಣ, ಸಹ ಕಾರ್ಯದರ್ಶಿ ಕೆ.ಕುಮಾರ್, ಭರತ್ ಚೆಟ್ಟಿಯಾರ್, ಅಣ್ಣವೇಲು, ಲಕ್ಷ್ಮೀ, ಸರವಣ, ಕೇಶವ, ಅರಿವು ಅಳಗನ್, ಎಂ. ಶಿವಕುಮಾರ್ ಉಪಸ್ಥಿತರಿದ್ದರು.

Small communities should organize to get their rights

 

About Author

Leave a Reply

Your email address will not be published. Required fields are marked *

You may have missed