September 19, 2024

ದಾನಗಳಲ್ಲಿ ಶ್ರೇಷ್ಠವಾದ ರಕ್ತದಾನ ಮಾಡಿ ಜೀವ ಉಳಿಸಿ : ಡಾ|| ಮುರುಳೀಧರ್

0
ದ ಬ್ಲಾಸಮ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಭಿರ

ದ ಬ್ಲಾಸಮ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಭಿರ

ಚಿಕ್ಕಮಗಳೂರು: ಹೆಚ್ಚುತ್ತಿರುವ ನಾಗರೀಕತೆ ಪರಿಣಾಮದಿಂದಾಗಿ ಅಷ್ಟೇ ವೇಗಗತಿಯಲ್ಲಿ ರಸ್ತೆ ಅಪಘಾತಗಳು ನಡೆಯುತ್ತಿದ್ದು, ಗಾಯಗೊಂಡವರ ಜೀವ ಉಳಿಸಲು ರಕ್ತದಾನ ಮಹಾದಾನವಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಹಿರಿಯ ತಜ್ಞರಾದ ಡಾ|| ಮುರುಳೀಧರ ತಿಳಿಸಿದರು.

ಅವರು ಇಂದು ಹೊರ ವಲಯದಲ್ಲಿ ಇರುವ ದ ಬ್ಲಾಸಮ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು.ಆಧುನಿಕ ಜೀವ ಶೈಲಿಯಿಂದ ಹೊಸ ಹೊಸ ಖಾಯಿಲೆಗಳು, ಅನೇಕ ತರಹದ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿರುವುದರಿಂದ ಗಣನೀಯವಾಗಿ ರಕ್ತದ ಬೇಡಿಕೆ ಹೆಚ್ಚಾಗುತ್ತಿದೆ. ಕೃತಕ ರಕ್ತ ತಯಾರು ಮಾಡಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ದಾನಿಗಳ ಮೂಲಕವೇ ರಕ್ತ ಸಂಗ್ರಹಿಸಬೇಕಾಗಿದೆ ಎಂದು ಹೇಳಿದರು.

ರಕ್ತದಾನ ನಿರಂತರವಾಗಿ ನಡೆಯುವಂತಹ ಒಂದು ಕಾರ್ಯಕ್ರಮ ರೆಡ್‌ಕ್ರಾಸ್, ರೋಟರಿ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಸಾರ್ವಜನಿಕರ ಹಾಗೂ ಅಪಘಾತಕ್ಕೊಳಗಾದವರ ಜೀವ ಕಾಪಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪ್ರತಿ ತಿಂಗಳು ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಬ್ಲಾಸಂರೆಸಾರ್ಟ್ ಮಾಲೀಕರಲ್ಲಿ ಮನವಿ ಮಾಡಿದಾಗ ಅವರು ಸ್ಪಂದಿಸಿ ನಡೆಸಿಕೊಡುವುದಾಗಿ ಭರವಸೆ ನೀಡಿದರೆಂದು ಹೇಳಿದರು.

೧೮ ವರ್ಷ ಮೇಲ್ಪಟ್ಟ ಎಲ್ಲರೂ ರಕ್ತದಾನ ಮಾಡಲು ಅರ್ಹರಾಗಿದ್ದು, ಒಬ್ಬರು ನೀಡಿದ ರಕ್ತದಾನದಿಂದ ಮೂವರ ಜೀವ ಉಳಿಸಲು ಸಾಧ್ಯವಾಗುತ್ತದೆ ಯಾವುದೇ ಖಾಯಿಲೆಗಳಿಲ್ಲದ ಯುವಕ ಯುವತಿಯರು ೩ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ರಕ್ತದಾನ ಮಾಡುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಘಾತ ಸಂಭವಿಸುವುದನ್ನು ತಡೆಯುತ್ತದೆ. ಜೊತೆಗೆ ಹೊಸ ರಕ್ತ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ರಕ್ತದಾನ ಮಾಡಿದ ವ್ಯಕ್ತಿಯಲ್ಲಿ ಹೆಚ್.ಐ.ವಿ, ಸಕ್ಕರೆ ಖಾಯಿಲೆ ಅಂಶ ಇರುವುದು ಕಂಡುಬಂದರೆ ಅಂತವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆಸ್ಪತ್ರೆಗೆ ಕರೆಸಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಇಂತಹ ಪ್ರಯೋಜನಗಳು ದೊರೆಯಲಿವೆ ಎಂದು ವಿವರಿಸಿದರು.
ಹೆಚ್ಚುತ್ತಿರುವ ಜೀವನ ಶೈಲಿಯಿಂದ ಏರುತ್ತಿರುವ ನಾಗರೀಕತೆ ಪರಿಣಾಮದಿಂದಾಗಿ ಧೂಮಪಾನ, ಮದ್ಯಪಾನ. ಅಧಿಕ ಆಹಾರ ಸೇವನೆ, ವ್ಯಾಯಾಮ ಇಲ್ಲದೇ ಇರುವುದು ಮುಂತಾದ ಒತ್ತಡಗಳಿಂದ ಖಾಯಿಲೆಗಳು ಹೆಚ್ಚಾಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ನಾಗರೀಕನು ಮಿತ ಆಹಾರ, ಮಿತ ವ್ಯಾಯಾಮ, ಒತ್ತಡವಿಲ್ಲದ ಸರಳ ಜೀವನ ನಡೆಸಲು ಸಹಕಾರವಾಗಲಿದೆ. ಜೀರ್ಣವಾಗದ ಅನ್ನ ನೂರು ಖಾಯಿಲೆಗೆ ಸಮವಾಗಿದ್ದು, ಎಲ್ಲರೂ ಇದನ್ನು ಪಾಲಿಸುವಂತೆ ಸಲಹೆ ನೀಡಿದರು.
ದ ಬ್ಲಾಸಮ್ ರೆಸಾರ್ಟ್ ಮಾಲೀಕರಾದ ಮಂಜುನಾಥ್ ಬಾಲಕೃಷ್ಣ ರಕ್ತದಾನ ಮಾಡಿ ಮಾತನಾಡಿ ಇಂದು ರಕ್ತದ ಅವಶ್ಯಕತೆ ತುಂಬಾ ಇರುವುದರಿಂದ ರಕ್ತದಾನಿಗಳ ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಮೊಬೈಲ್ ಸಂಖ್ಯೆ ಇರುವಂತೆ ರಕ್ತದ ಗುಂಪು ನಮೂದಾಗಿದ್ದರೆ ಅಪಘಾತ ನಡೆದ ಸಂದರ್ಭದಲ್ಲಿ ಅಂತಹ ವ್ಯಕ್ತಿಯ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ನಮ್ಮ ರೆಸಾರ್ಟ್ ವತಯಿಂದ ಸುತ್ತ ಮುತ್ತಲ ಗ್ರಾಮಸ್ಥರಿಗೆ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲ ಆಗುವಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಧುಮೇಹ ಮತ್ತು ಕಣ್ಣುಗಳ ತಪಾಸಣೆ, ಅಂಗವಿಕಲರಿಗೆ ಅನುಕೂಲ ಆಗುವಂತೆ ಕೃತಕ ಕಾಲು ಜೋಡಣಾ ಶಿಬಿರಗಳನ್ನು ಆಯೋಜನೆ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಡಾ. ಶಶಿಕಲಾ, ಡಾ. ಮೋನಿಶಾ, ಸಿಬ್ಬಂದಿಗಳಾದ ಶಿವರಾಜ್, ದಿವಾಕರ್, ಮಧುಕುಮಾರ್, ಬ್ಲಾಸಮ್ ರೆಸಾರ್ಟ್‌ನ ಸರೋಜಾರಾಜಗೋಪಾಲ್, ಜಯಪ್ರಭ, ನಿತಿನ್‌ಮಂಜುನಾಥ್, ವ್ಯವಸ್ಥಾಪಕರಾದ ನಂಜಪ್ಪ, ಸಿಬ್ಬಂದಿಗಳಾದ ಪ್ರವೀಣ್, ಸತೀಶ್, ಅಕ್ಷಯ್, ಸೋಮಣ್ಣ, ಪೂರ್ಣಚ, ಲೋಹಿತ್, ಯೋಗೀಶ್, ಕುಟುಂಬದ ಎಲ್ಲಾ ಸದಸ್ಯರು ಭಾಗವಹಿಸಿ ರಕ್ತದಾನಿಗಳಿಗೆ ಶುಭ ಹಾರೈಸಿದರು.

A blood donation camp organized at The Blossom Resort

 

About Author

Leave a Reply

Your email address will not be published. Required fields are marked *

You may have missed