September 19, 2024

ಜೈನಮುನಿ ಹತ್ಯೆ ಖಂಡಿಸಿ ಜೈನ್ ಸಮಾಜದಿಂದ ಮೌನ ಮೆರವಣಿಗೆ

0
ಜೈನಮುನಿ ಹತ್ಯೆ ಖಂಡಿಸಿ ಜೈನ್ ಸಮಾಜದಿಂದ ಮೌನ ಮೆರವಣಿಗೆ

ಜೈನಮುನಿ ಹತ್ಯೆ ಖಂಡಿಸಿ ಜೈನ್ ಸಮಾಜದಿಂದ ಮೌನ ಮೆರವಣಿಗೆ

ಚಿಕ್ಕಮಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹೀರೆಕೋಡಿ ಗ್ರಾಮದ ನಂದಿ ಪರ್ವತ ಜೈನ್ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿದ್ದ ಪರಮಪೂಜ್ಯ ಆಚಾರ್ಯ-೧೦೮ ಶ್ರೀಕಾಮಕುಮಾರನಂದಿಮುನಿ ಮಹಾರಾಜರನ್ನು ಜು.೭ ರಂದು ದುಷ್ಕರ್ಮಿಗಳು ಹತ್ಯೆ ಮಾಡಿರುವುದನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಇಂದು ಜೈನ್ ಸಮಾಜವತಿಯಿಂದ ಮೌನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸೋಮವಾರ ತಾಲ್ಲೂಕಿ ಕಛೇರಿ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಎಂ.ಜಿ ರಸ್ತೆ ಮೂಲಕ ಸಾಗಿ ಅಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜೈನ ಮುನಿಯನ್ನು ಹತ್ಯೆ ಮಾಡಿರುವ ಹಂತಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಾಗೂ ಅಹಿಂಸೆ, ತ್ಯಾಗ, ಬದುಕು ಬದುಕಲು ಬಿಡು ಎನ್ನುವ ತತ್ವವನ್ನು ಪ್ರತಿಪಾದಿಸುತ್ತಿದ್ದ ಶಾಂತಿ ಪ್ರಿಯರೂ ಆಗಿರುವ ಜೈನ ಮುನಿಯನ್ನು ಹತ್ಯೆ ಮಾಡಿರುವುದನ್ನು ಮನವಿಯಲ್ಲಿ ಖಂಡಿಸಿದ್ದಾರೆ.
ಇಂತಹ ಹೀನ ಕೃತ್ಯಗಳು ಮರುಕಳಿಸದಂತೆ ಜೈನ ಸಮುದಾಯಕ್ಕೆ ಸರ್ಕಾರ ರಕ್ಷಣೆ ನೀಡಬೇಕು, ಜೈನ ಬಸದಿಗಳು, ಮಠಗಳು, ಸಾಧುಸಂತರು, ಮಾತಾಜಿಗಳು ಮತ್ತು ಅವರು ವಾಸ್ತವ್ಯವಿರುವ ಆಶ್ರಮ ಹಾಗೂ ವಿಹಾರದ ಸಂದರ್ಭದಲ್ಲಿ ಸೂಕ್ತ ಮುನ್ನಚ್ಚರಿಕೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯ ನೇತೃತ್ವವನ್ನು ತೇರಾಪಂಥ್ ಸಭಾ ಅಧ್ಯಕ್ಷ ಹಾಗೂ ಜೈನ ಸಂಘದ ಅಧ್ಯಕ್ಷ ಕಾತಿಲಾಲ ಜೈನ್, ತಾರಾಚಂದ್ ಜೈನ್, ಜಿ.ಎನ್ ಚರಿತ್ರ, ಮೋಹನ್‌ಕುಮಾರ್, ಗೌತಮ್ ಗಾದಿಯಾ, ವಿಪುಲ್, ಗೌತಮ್ ಚಂದ್ ಹಾಗೂ ಮಹಿಳಾ ಮಂಡಲ, ಯುವ ಪರಿಷದ್, ಮೂರ್ತಿ ಪೂಜ ಚಂಗ್ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ವಹಿಸಿದ್ದರು.

Silent march by Jain community to condemn the killing of Jain Muni

About Author

Leave a Reply

Your email address will not be published. Required fields are marked *

You may have missed