September 19, 2024

ಜೆವಿಎಸ್ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ

0
ಜೆವಿಎಸ್ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ

ಜೆವಿಎಸ್ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ

ಚಿಕ್ಕಮಗಳೂರು: ವಿದ್ಯಾರ್ಥಿಗಳು ಗುರು-ಹಿರಿಯರ ಮತ್ತು ಪೋಷಕರ ಮಾರ್ಗದರ್ಶನ ಪಡೆದು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಯಬೇಕೆಂದು ಮರ್ಲೆಯ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ನಗರದ ಜಿಲ್ಲಾ ಒಕ್ಕಲಿಗರ ಸಮುದಾಯದಲ್ಲಿ ಜೆವಿಎಸ್ ಶಾಲೆ ವತಿಯಿಂದ ಏರ್ಪಡಿಸಲಾಗಿದ್ದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಅಕ್ಷರ ಜ್ಞಾನ ಉಂಟಾಗಬೇಕೆಂಬ ನಿಟ್ಟಿನಿಂದ ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿರುವ ಅಕ್ಷರ ಅಭ್ಯಾಸವನ್ನು ಜೆವಿಎಸ್ ಶಾಲೆಯಿಂದ ಹಮ್ಮಿಕೊಂಡಿರುವುದು ಎಲ್ಲರಿಗೂ ಮಾದರಿ ಆಗುವಂತದ್ದು, ವೈಜ್ಞಾನಿಕ ಆಧಾರದ ಮೇಲೆ ಧರ್ಮದ ಪ್ರಕಾರ ಮಗು ಗರ್ಭಾವಸ್ಥೆಯಲ್ಲಿ ಇರುವ ೬ ತಿಂಗಳಲ್ಲಿ ಪರಿಪೂರ್ಣ ಚಿತ್ರಣ, ೭ನೇ ತಿಂಗಳಿಗೆ ಜ್ಞಾನ ಉಂಟಾಗುತ್ತದೆ, ಅಂತಹ ಸಂದರ್ಭದಲ್ಲಿ ಹಿರಿಯರು ಶ್ರೀಮಂತ ಮಾಡಿ ಹರಸಲಾಗುತ್ತದೆ ಎಂದರು.

ಭಾರತೀಯ ಸಂಸ್ಕೃತಿಯ ಸನಾತನ ಧರ್ಮವು ಇಡೀ ಜಗತ್ತಿಗೆ ಜ್ಞಾನವನ್ನುಂಟು ಮಾಡುತ್ತದೆ, ನಮ್ಮ ಸಂಸ್ಕೃತಿ, ಪರಂಪರೆ, ನಾಗರೀಕತೆಯನ್ನು ಕೆಳಮಟ್ಟದಿಂದಲೂ ವರ್ಣೀಸುವವರು ಪರಕೀಯರು, ಯಾವುದೇ ಮತ ಸಿದ್ಧಾಂತವಿದ್ದರು, ನಾವು ಭಾರತೀಯರು ಎಂದು ಹೆಮ್ಮೆ ಪಡಬೇಕು, ಎಲ್ಲಿ ನಿಶ್ಯಬ್ಧ, ನಿರ್ಮಲ ಇರುತ್ತದೆಯೋ ಅಲ್ಲಿ ಭಗವಾನ್ ಬ್ರಹ್ಮ ಇರುತ್ತಾರೆ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ ಜೆವಿಎಸ್ ಶಾಲೆಯನ್ನು ಸಮಾಜ ಸೇವೆ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ, ನಮ್ಮ ಶಾಲೆಯಲ್ಲಿ ಎಲ್ಲಾ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಆಧುನಿಕ ಕಾಲಕ್ಕೆ ತಕ್ಕಂತೆ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸುವುದರ ಜತೆಗೆ ನುರಿತ ಶಿಕ್ಷಕರಿಂದ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಸರ್ಕಾರ ಬಡ ಮಕ್ಕಳು ಸಹ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ಅನುಕೂಲ ಆಗುವಂತೆ ಪ್ರಾರಂಭಿಸಿದ್ದರು ಈಗ ಅದನ್ನು ನಿಲ್ಲಿಸಲಾಗಿದೆ, ಅದನ್ನು ಮತ್ತೆ ಪ್ರಾರಂಭಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಉಪಾಧ್ಯಕ್ಷ ಲಕ್ಷ್ಮಣಗೌಡ, ಶಾಲಾ ಕಾರ್ಯದರ್ಶಿ ಕೆ.ಕೆ.ಮನುಕುಮಾರ್, ಮುಖ್ಯ ಶಿಕ್ಷಕ ವಿಜಿತ್, ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕ ರಾಜು ಉಪಸ್ಥಿತರಿದ್ದರು.

Literacy program for children in JVS school

About Author

Leave a Reply

Your email address will not be published. Required fields are marked *

You may have missed