September 19, 2024

ರಾಷ್ಟ್ರಮಟ್ಟದಲ್ಲಿ ರ್‍ಯಾಂಕ್ ಪಡೆದ ಆಕಾಶ್ ಅಭಿನಂದನೆ ಸಲ್ಲಿಕೆ

0
Nationally ranked Akash congratulation submission

Nationally ranked Akash congratulation submission

ಚಿಕ್ಕಮಗಳೂರು: ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ೨೧೦ನೇ ಹಾಗೂ ರಾಜ್ಯಕ್ಕೆ ಐದನೇ ರ್‍ಯಾಂಕ್ ಪಡೆದ ಎ.ಎಲ್.ಆಕಾಶ್ ಅವರಿಗೆ ನಗರದ ಖಾಸಗೀ ಹೋಟೆಲ್‌ನಲ್ಲಿ ಶನಿವಾರ ಮೈಸೂರು ಶ್ರೀ ನಾಲ್ವಡಿ ಕೃಷ್ಣರಾಜ್ ಒಡೆಯರ್ ಪ್ರತಿಷ್ಟಾನ, ಕನ್ನಡಪರ ಸಂಘಟನೆ ಹಾಗೂ ವಿವಿಧ ಪಕ್ಷದ ಮುಖಂಡರುಗಳು ಗೌರವಿಸಿದರು.

ಅಭಿನಂದನೆ ಸಲ್ಲಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಅಗ್ಗಡಲು ಎಂಬ ಒಂದು ಸಣ್ಣ ಹಳ್ಳಿಯ ಸಾಮಾನ್ಯ ಕುಟುಂಬದಿಂದ ಜನಿಸಿದ ಆಕಾಶ್ ಎಂಬುವವರು ಸತತ ಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಇಂದು ಅತ್ಯುತ್ತಮ ರ್‍ಯಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಎಂದರು.

ವಿದ್ಯೆ ಯಾರ ಸ್ವತ್ತಲ್ಲ ಎಂಬುದನ್ನು ಹಿಂದುಳಿದ ಕುಟುಂಬದಿಂದ ಬಂದಿರುವ ಆಕಾಶ್ ದೃಢಪಡಿಸಿದ್ದಾರೆ. ಸಾಧನೆ ಮಾಡಲು ಎಂದಿಗೂ ಬಡತನ ಅಡ್ಡಿ ಬರೋಲ್ಲ. ಶಿಸ್ತು, ಸಂಯಮ ಹಾಗೂ ಉನ್ನತ ನಡತೆ ಹೊಂದಿದರೆ ಗಗನಕ್ಕೇತ್ತರ ಬೆಳೆಯಬಹುದು ಎಂದು ತಿಳಿಸಿದರು.

ಹಿರಿಯರ ಮಾರ್ಗದರ್ಶನದೊಂದಿಗೆ ಜೀವನದಲ್ಲಿ ನಂಬಿಕೆ, ಆತ್ಮವಿಶ್ವಾಸ ಹಾಗೂ ಶ್ರಮಪಡುವ ಹುಮಸ್ಸು ಹೊಂದಿದರೆ ಯಶಸ್ಸು ಶತಸಿದ್ಧ ಎನ್ನುವುದಕ್ಕೆ ಆಕಾಶ್ ಉದಾಹರಣೆಯಾಗಿದ್ದಾರೆ. ಇಂತಹ ರೀತಿಯಲ್ಲಿ ಪ್ರತಿ ಯೊಬ್ಬ ವಿದ್ಯಾರ್ಥಿಗಳು ಸಾಧನೆ ಮಾಡಿದರೆ ದೇಶಕ್ಕೂ ಕೀರ್ತಿ ತಂದಾಗುತ್ತದೆ ಎಂದು ಕಿವಿಮಾತು ಹೇಳಿದರು.

ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ ಮಾತನಾಡಿ ರಾಷ್ಟ್ರಮಟ್ಟದಲ್ಲಿ ರ್‍ಯಾಂಕ್ ಪಡೆದು ಕೊಂಡಿರುವ ಅವರು ಆಯಾ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ಉನ್ನತಮಟ್ಟದಲ್ಲಿ ಯಶಸ್ಸು ಕಂಡಿರುವ ಆಕಾಶ್ ಅವರಿಗೆ ಪ್ರತಿಯೊಂದು ಹೆಜ್ಜೆಯಲ್ಲೂ ಗೆಲುವು ಸಿಗುವಂತಾಗಲಿ. ಮುಂದಿನ ಅವರ ಎಲ್ಲಾ ರೂಪುರೇಷೆಗಳು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಕೋರಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸಹಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಪ್ರಾಸ್ತಾವಿಕ ಮಾತ ನಾಡಿ ಆಕಾಶ್ ಜೀವನದಲ್ಲಿ ನಡೆದು ಹಾದಿಯನ್ನು ಸವಿವರವಾಗಿ ವಿವರಿಸಿದರು

.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಎ.ಎಂ.ಶಕುಂತಾಲ, ಬಿ.ಟಿ.ಪರಮೇಶ್, ಪ್ರತಿಷ್ಟಾನದ ಅಧ್ಯಕ್ಷ ಮಾವಿನಕೆರೆ ದಯಾನಂದ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಆರ್.ನಂಜೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಸವಿನಮನೆ ಬೈರೇಗೌಡ, ದಲಿತ ಮುಖಂಡ ದುರ್ಗೇಶ್, ಆಕಾಶ್ ಪೋಷಕರಾದ ಎ.ಎಂ.ಪ್ರೇಮ ಲಕ್ಷ್ಮಣಗೌಡ ಉಪಸ್ಥಿತರಿದ್ದರು.

Nationally ranked Akash congratulation submission

About Author

Leave a Reply

Your email address will not be published. Required fields are marked *

You may have missed