September 19, 2024

ಜೆಡಿಎಸ್ ಜೊತೆ ಮೈತ್ರಿ ಕುರಿತಂತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ನಡೆದಿಲ್ಲ.

0
c t ravi

c t ravi

ಚಿಕ್ಕಮಗಳೂರು: ಜೆಡಿಎಸ್ ಜೊತೆ ಮೈತ್ರಿ ಕುರಿತಂತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮೇಲ್ಮಟ್ಟದಲ್ಲಿ ಆಗಿದ್ದರೇ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರ ಮೊದಲು, ರಾಜಕಾರಣ ನೆಕ್ಟ್ಸ್, ಪರ್ಸನ್ ಲಾಸ್ಟ್ ಎಂಬ ತತ್ವದಲ್ಲಿ ನಂಬಿಕೆ ಇಟ್ಟವರು. ನೇಷನ್ ಫಸ್ಟ್ ಎಂಬ ತತ್ವದ ಮೇಲೆ ಯಾರು ಬೇಕಾ ದರೂ ನಮ್ಮ ಜೊತೆ ಬರಬಹುದು ಎಂದರು.

ರಾಜಕಾರಣ ಹರಿಯುವ ನೀರು, ಇಲ್ಲಿ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ. ನರೇಂದ್ರ ಮೋದಿಯವರ ರಾಷ್ಟ್ರಹಿತ ಹಾಗೂ ಜನಪರ ಕೆಲಸ ಮೆಚ್ಚಿ ಯಾರು ಬೇಕಾದರೂ ಬರಬಹುದು. ನಾವು ಯಾರನ್ನು ದೂರವಿಟ್ಟು ರಾಜ ಕಾರಣ ಮಾಡುವ ಸಿದ್ದಾಂತದ ಮೇಲೆ ನಂಬಿಕೆ ಇಟ್ಟವರಲ್ಲ ಎಂದು ಹೇಳಿದರು.

ನರಿಗಳು ಘೀಳಿಟ್ಟರೇ ಕಾಡಿನ ರಾಜ ಬೆದರುವುದಿಲ್ಲ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನಭಿಷಕ್ತ ರಾಜನಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಜನರ ಹೃದಯದಲ್ಲಿ ಸ್ಥಾನ ಪಡೆದ ಸಾಮ್ರಾಟ. ನರಿಗಳು ಘೀಳಿಟ್ಟರೇ ಹೃದಯ ಸಮ್ರಾಟ ಸಿಂಹ ಬೆದರುವುದುಂಟಾ ಎಂದರು.

ನೂರು ವಿಪಕ್ಷಗಳಿಗೆ ಭಯ ಇದೆ ಅದಕ್ಕೆ ಒಂದಾಗಿವೆ. ಅವರ ಒಗ್ಗಟ್ಟಿನಲ್ಲಿ ದೇಶದ ಹಿತದೃಷ್ಟಿಯಿಂದಲ್ಲ. ಅವರಿಗೆ ಹೆದರುವ ಅಗತ್ಯವು ಇಲ್ಲ. ನರಿಗಳ ಸಂಖ್ಯೆ ಕಡಿಮೆಯಾಗಿವೆ. ಅಪರೂಪಕ್ಕೆ ಸಿಗುತ್ತವೆ. ಈ ಮೊದಲು ಮಲೆ ನಾಡಿನ ಗದ್ದೆ ಬಯಲಿನಲ್ಲಿ ಈ ನರಿಗಳು ಇರುತ್ತಿದ್ದವು ಎಂದು ಪರೋಕ್ಷವಾಗಿ ಎಡಪಂಥೀಯವಾಗಿಗಳ ವಿರುದ್ಧ ಹರಿಹಾಯ್ದರು.

ವಿಪಕ್ಷನಾಯಕ ಆಯ್ಕೆಯಾಗದಿರುವುದು ಕಾಂಗ್ರೆಸ್ ಅವರಿಗೆ ಒಳ್ಳೆಯದಾಯಿತಲ್ಲ. ಅವರಿಗೇಕೆ ಭಯ. ವಿಪಕ್ಷ ನಾಯಕ ಇದ್ದಿದ್ದರೇ ಅರ್ಕಾವತಿ ಪ್ರಕರಣ ಹೊರ ತೆಗೆಯುತ್ತಿದ್ದರು. ಈಗ ಕಾಂಗ್ರೆಸ್‌ನವರು ನಿಶ್ಚಂತೆಯಿಂದ ಇರಬ ಹುದಲ್ಲ ಛೇಡಿಸಿದ ಅವರು, ವಿಪಕ್ಷ ನಾಯಕ ಇದಿದ್ದರೇ ಅರ್ಕಾವತಿ ಖದೀಮರು ಯಾರು ಎಂದರೇ ತಡಬಡಿ ಸಬೇಕಿತ್ತು ಎಂದರು.

ಅರ್ಕಾವತಿ ಪ್ರಕರಣದ ಬಗ್ಗೆ ಹತ್ತಾರು ಬಾರಿ ಕೇಳಿದ್ದೇನೆ ಈವರೆಗೂ ಉತ್ತರ ಕೊಟ್ಟಿಲ್ಲ. ಈ ಹಗರಣದಲ್ಲಿ ಇದ್ದ ಮೂವರದಲ್ಲಿ ಕದ್ದವರು ಯಾರು ಎಂದು ಪ್ರಶ್ನಿಸಿದ ಅವರು, ೮ಸಾವಿರ ಕೋಟಿ ಹೊಡೆದವರು ಯಾರೆಂದು ಕೇಳುತ್ತಲೇ ಇದ್ದೇನೆ. ಉತ್ತರ ಕೊಡುವ ಧೈರ್ಯ ಅವರಿಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಪಕ್ಷನಾಯಕ ಚರ್ಚೆ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಇಂತಹ ಸುದ್ದಿಗಳು ಸುಮ್ಮನೆ ಹರಿದಾಡುವುದಿಲ್ಲ. ಅದಕ್ಕೆಲ್ಲ ಕಾರಣವಿರುತ್ತದೆ. ಈಗ ಅದರ ಬಗ್ಗೆ ವಿಶ್ಲೇಷಣೆ ಬೇಡ ಎಂದು ಹೇಳಿದರು.

There is no discussion at our stage about alliance with JDS

About Author

Leave a Reply

Your email address will not be published. Required fields are marked *

You may have missed