September 19, 2024

ಸಾಯಿ ಸೇವೆ ಒಂದು ಶಕ್ತಿಯುತ ಸಾಧನ’ ಕುರಿತಂತೆ ಪ್ರಧಾನ ಉಪನ್ಯಾಸ

0
ಶ್ರೀಸತ್ಯ ಸಾಯಿ ಸೇವಾಸಮಿತಿ ನಗರದ ಮಧುವನ ಬಡಾವಣೆಯ ಶ್ರೀಸಾಯಿ ಮಂದಿರದಲ್ಲಿ ’ಸಾಯಿ ಸೇವೆ ಒಂದು ಶಕ್ತಿಯುತ ಸಾಧನ’ ಕುರಿತಂತೆ ಆಯೋಜಿಸಿದ್ದ ಅಧ್ಯಯನ ಗೋಷ್ಠಿ

ಶ್ರೀಸತ್ಯ ಸಾಯಿ ಸೇವಾಸಮಿತಿ ನಗರದ ಮಧುವನ ಬಡಾವಣೆಯ ಶ್ರೀಸಾಯಿ ಮಂದಿರದಲ್ಲಿ ’ಸಾಯಿ ಸೇವೆ ಒಂದು ಶಕ್ತಿಯುತ ಸಾಧನ’ ಕುರಿತಂತೆ ಆಯೋಜಿಸಿದ್ದ ಅಧ್ಯಯನ ಗೋಷ್ಠಿ

ಚಿಕ್ಕಮಗಳೂರು:  ಸೇವೆ ದೈವಿಕ ಉದ್ದೇಶದ ಕರ್ತವ್ಯ. ಸೇವೆ ಅದೃಷ್ಟವಷ್ಟೇ ಅಲ್ಲ ಅವಕಾಶ. ಮನಸ್ಸನ್ನು ಭಗವಂತನಲ್ಲಿ ಒಂದಾಗಿಸುವುದೇ ನಿಜವಾದ ಸೇವೆ ಎಂದು ಕರ್ನಾಟಕರಾಜ್ಯ ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳ ಎಜ್ಯುಕೇರ್ ರಾಜ್ಯಸಂಯೋಜಕ ದಾವಣಗೆರೆಯ ಜಗನ್ನಾಥ ನಾಡಿಗೇರ್ ನುಡಿದರು.

ಶ್ರೀಸತ್ಯ ಸಾಯಿ ಸೇವಾಸಮಿತಿ ನಗರದ ಮಧುವನ ಬಡಾವಣೆಯ ಶ್ರೀಸಾಯಿ ಮಂದಿರದಲ್ಲಿ ’ಸಾಯಿ ಸೇವೆ ಒಂದು ಶಕ್ತಿಯುತ ಸಾಧನ’ ಕುರಿತಂತೆ ಆಯೋಜಿಸಿದ್ದ ಅಧ್ಯಯನ ಗೋಷ್ಠಿಯಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿ ಸಂವಾದಿಸಿದರು.

ಸೇವೆ ದೈವಿಕ ಉದ್ದೇಶದ ಕರ್ತವ್ಯ. ಸೇವೆಗಳಲ್ಲಿ ಪ್ರಮುಖವಾಗಿ ಮೂರುವಿಧಗಳಿವೆ. ದೈಹಿಕಸೇವೆ, ಮಾನಸಿಕಸೇವೆ ಮತ್ತು ಆಧ್ಯಾತ್ಮಿಕಸೇವೆ. ಮಾಡುವ ಸೇವೆ ಭಗವಂತನಿಗೆ ಸಮರ್ಪಿತವಾಗಲು ಶಕ್ತಿಯುತವಾದ ಸಾಧನಗಳನ್ನು ಅನುಸರಿಸಿದರೆ ಪರಿಣಾಮಕಾರಿಯಾಗಿರುತ್ತದೆ. ಶಿಸ್ತು, ಶರಣಾಗತಿ ಎಲ್ಲದರಲ್ಲೂ ದೇವರನ್ನೆ ಕಾಣುವ ಸ್ವಭಾವದಿಂದ ನಿರ್ವಹಿಸುವ ಸೇವೆ ಪರಿಣಾಮಕಾರಿ ಹಾಗೂ ಪ್ರಭಾವಶಾಲಿಯಾದ ಸ್ವಾಮಿ ಸೇವೆ ಎಂದವರು ಅಭಿಪ್ರಾಯಿಸಿದರು.

ದೈಹಿಕಸೇವೆಯಲ್ಲಿ ಶಿಸ್ತು ಮುಖ್ಯವಾಗುತ್ತದೆ. ಸಮಯಪ್ರಜ್ಞೆ, ಅಚ್ಚುಕಟ್ಟುತನ, ನಾಯಕನ ಅನುಸರಣೆ ಮುಖ್ಯವಾಗುತ್ತದೆ. ಮಾನಸಿಕ ಸೇವೆಯಲ್ಲಿ ಶರಣಾಗತಿಯ ಭಾವ ಬಹುಮುಖ್ಯ. ಭಗವಂತನಲ್ಲಿ ಅಪಾರ ನಂಬಿಕೆ-ಭಕ್ತಿ ಇರಬೇಕು.

ಆಧ್ಯಾತ್ಮಿಕಸೇವೆಯಲ್ಲಿ ಚರಾಚರಸೃಷ್ಟಿಯಲ್ಲಿ ಭಗವಂತನನ್ನೆ ಕಾಣಬೇಕು. ನಾನು-ನನ್ನದು ಎಂಬುದು ಸೊನ್ನೆಯಾಗಬೇಕು. ಸೇವೆ ಅದೃಷ್ಟವಷ್ಟೇ ಅಲ್ಲ ಅವಕಾಶ ಎಂದು ಪರಿಭಾವಿಸಿದರೆ ಅದು ನಿಜವಾದ ಶಕ್ತಿಯುತ ಸಾಧನವೆನಿಸಿಕೊಳ್ಳುತ್ತದೆ ಎಂದು ನಾಡಿಗೇರ್ ಬಣ್ಣಿಸಿದರು.

ಭಗವಂತನಲ್ಲಿ ಒಂದಾಗುವ ರಸಾನುಭ ಪಡೆಯುವುದೇ ಸಾಧನೆ. ಸೇವೆಯ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ದೇವರಿಗೆ ಸಮೀಪವಾಗಬೇಕು. ಮನಸ್ಸನ್ನು ಭಗವಂತನಲ್ಲಿ ಒಂದಾಗಿಸುವುದೇ ನಿಜವಾದ ಸೇವೆ. ಆಗ ಅನುಭವ, ರುಚಿ, ಖುಷಿ ಸೇವೆಯಿಂದ ನಮ್ಮದಾಗುತ್ತದೆ. ದ್ವೇಷವನ್ನು ಮರೆತು ಪ್ರೀತಿಯಿಂದ ಅಶಕ್ತರಿಗೆ-ಅಗತ್ಯವಿರುವವರಿಗೆ ಸೇವೆ ನೀಡುವ ಮನೋಭಾವ ನಮ್ಮದಾಗಬೇಕು ಎಂದವರು ವಿವರಿಸಿದರು.

ಅಣುವನ್ನು ಅನಂತದಲ್ಲಿ ಒಂದು ಮಾಡಲು ಬಂದವರು ಸತ್ಯಸಾಯಿ ಭಗವಾನರು. ಭಗವಂತನ ವಿವಿಧ ಅವತಾರಗಳಲ್ಲಿ ಸತ್ಯಸಾಯಿಬಾಬಾ ಅವರದು ವೈವಿಧ್ಯಮಯವಾದ ಜನರಿಗೆ ಸಮೀಪವಾದ ಅವತಾರ. ರಾಮ-ಕೃಷ್ಣರೊಂದಿಗೆ ಅನೇಕ ಸಂಗತಿಗಳನ್ನು ಇಲ್ಲಿ ಸಮೀಕರಿಸಲು ಸಾಧ್ಯವಾಗದು. ಭಕ್ತರ ಮನದಾಳದ ಇಂಗಿತವನ್ನು ತಾಯಿಗಿಂತ ಹೆಚ್ಚಾಗಿ ಅರ್ಥಮಾಡಿಕೊಳ್ಳುವ ಗುಣ ಸ್ವಾಮಿಯವರಲ್ಲಿ ಕಾಣಬಹುದಿತ್ತೆಂದು ಜಗನ್ನಾಥ್‌ನಾಡಿಗೇರ್ ನುಡಿದರು.

ಕಳೆದ ೧೫ವರ್ಷಗಳಿಂದ ಶ್ರೀಸಾಯಿ ಸಮಿತಿಯ ರುದ್ರತಂಡವನ್ನು ಕಟ್ಟಿ ತರಬೇತಿ ನೀಡಿ ಮನೆ-ಮನಗಳಲ್ಲಿ ರುದ್ರಪಠಣಕ್ಕೆ ಕಾರಣೀಭೂತರಾದ ಶ್ರೀರಘುನಾಥ ಅವಧಾನಿ ಅವರಿಗೆ ಇದೇ ಸಂದರ್ಭದಲ್ಲಿ ವಾಸು ನೇತೃತ್ವದಲ್ಲಿ ಗುರುವಂದನೆ ಸಲ್ಲಿಸಲಾಯಿತು.

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸೇವಾ ಕ್ಷೇತ್ರದ ಬಿ.ಪಿ.ಭೋಜೇಗೌಡ ವಂದಿಸಿದರು. ಸಮಾರಂಭಕ್ಕೆ ಮುನ್ನ ಭಜನೆ, ಸತ್‌ಕೀರ್ತನೆ ನಡೆಸಲಾಯಿತು. ಮಹಾಮಂಗಳಾರತಿಯೊಂದಿಗೆ ಕಾರ್‍ಯಕ್ರಮ ಸಮಾಪನಗೊಂಡಿತು.ಶ್ರೀಸತ್ಯಸಾಯಿ ಸೇವಾಟ್ರಸ್ಟ್ ಅಧ್ಯಕ್ಷ ಎಂ.ಆರ್.ನಾಗರಾಜ, ಮಾಜಿಅಧ್ಯಕ್ಷರಾದ ಶ್ರೀನಿವಾಸಲು ಮತ್ತು ಅಂಕೋಲೇಕರ್, ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ನೇತೃತ್ವದಲ್ಲಿ ಜಗನ್ನಾಥನಾಡಿಗೇರ್‌ರನ್ನು ಗೌರವಿಸಲಾಯಿತು

Study Conference on ‘Sai Seva a Powerful Tool’

About Author

Leave a Reply

Your email address will not be published. Required fields are marked *

You may have missed