September 19, 2024

ಸಿಡಿಎ ಅಧ್ಯಕ್ಷಗಾದಿಗೆ ರಾಮಚಂದ್ರ ನೇಮಿಸಲು ಹಿರೇಮಗಳೂರು ಗ್ರಾಮಸ್ಥರ ಆಗ್ರಹ

0
ಕಾಂಗ್ರೆಸ್ ಮುಖಂಡ ಹೆಚ್.ಎಸ್ ಜಗದೀಶ್ ಪತ್ರಿಕಾಗೋಷ್ಠಿ

ಕಾಂಗ್ರೆಸ್ ಮುಖಂಡ ಹೆಚ್.ಎಸ್ ಜಗದೀಶ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸಾಮಾಜಿಕ ನ್ಯಾಯದಂತೆ ಹಿರೇಮಗಳೂರು ರಾಮಚಂದ್ರ ಅವರನ್ನು ಆಯ್ಕೆ ಮಾಡುವಂತೆ ಶಾಸಕ ಹೆಚ್.ಡಿ ತಮ್ಮಯ್ಯನವರಿಗೆ ಹೃದಯ ಸ್ಪರ್ಶಿ ಮನವಿ ನೀಡುವುದಾಗಿ ಹಿರೇಮಗಳೂರು ಗ್ರಾಮಸ್ಥರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಂಗ್ರೆಸ್ ಮುಖಂಡ ಹೆಚ್.ಎಸ್ ಜಗದೀಶ್ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಪರಿಣಾಮ ರಾಜ್ಯ ಸರ್ಕಾರ ಅಧಿಕಾರದಲ್ಲಿದ್ದು ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಸರ್ಕಾರ ದಲಿತರ ಬಗ್ಗೆ ಕಾಳಜಿವಹಿಸಿದ್ದು, ಹಿರೇಮಗಳೂರು ರಾಮಚಂದ್ರರವರು ಪಕ್ಷದ ಪದಾಧಿಕಾರಿಯಾಗಿ ಹಲವು ಹುದ್ದೆಗಳಲ್ಲಿ ದುಡಿದಿದ್ದಾರೆ. ಈ ಹಿಂದೆ ೨೦೦೨ ಸರಕಾರದಲ್ಲಿ ಸಿ.ಡಿ.ಎ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿಯಾಗಿದ್ದರು ಮತ್ತು ಪುನಃ ೨೦೧೩ ಸರಕಾರದಲ್ಲಿ ಪೈಪೋಟಿ ನಡೆಸಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದರು ಎಂದು ತಿಳಿಸಿದರು.
ಪ್ರಸ್ತುತ ೨೦೨೩ ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಸಿ.ಡಿ.ಎ ಹುದ್ದೆಯ ಅಧ್ಯಕ್ಷ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು, ಹಿರೇಮಗಳೂರಿನ ಮತಗಟ್ಟೆ ಸಂಖ್ಯೆ ೧೩೭ ರಲ್ಲಿ ೧೪೭೬ ಮತಗಳಲ್ಲಿ ೧೧೧೭ ಚಲಾವಣೆಯಾಗಿದ್ದು, ಕಾಂಗ್ರೆಸ್ಸಿಗೆ ೭೮೮ ಮತಗಳು ಬಂದಿದ್ದು, ಅತಿ ಹೆಚ್ಚು ಮತ ನೀಡಿರುವ ಪರಿಶಿಷ್ಟರು ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಆದುದರಿಂದ ಸ್ಥಳೀಯ ಕಾಂಗ್ರೆಸ್ ಮುಖಂಡ ಹಿರೇಮಗಳೂರು ರಾಮಚಂದ್ರರವರಿಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮುಂದಿನ ಚುನಾವಣೆಗಳು ಹಾಗೂ ಪಕ್ಷ, ಸಮುದಾಯದ ಹಿತದೃಷ್ಠಿಯಿಂದ ಅನುಕೂಲವಾಗಲಿದೆ ಎಂದು ಸಲಹೆ ಮಾಡಿದರು.

ಸಿ.ಡಿ.ಎ ಅಧ್ಯಕ್ಷ ಹುದ್ದೆಗೆ ಅಲ್ಪಸಂಖ್ಯಾತರಿಗೆ ಎರಡು ಬಾರಿ, ಕುರುಬರಿಗೆ, ಒಕ್ಕಲಿಗರಿಗೆ ಈ ಹಿಂದೆ ಪ್ರಾತಿನಿಧ್ಯ ನೀಡಿದ್ದು ಈ ಭಾರಿ ಪರಿಶಿಷ್ಟ ಜಾತಿಯವರಾದ ರಾಮಚಂದ್ರಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರೇಮಗಳೂರು ಗ್ರಾಮಸ್ಥರಾದ ಚಂದ್ರು, ಶಾಂತಕುಮಾರ್, ಯೋಗೀಶ್, ರಮೇಶ್, ಮೋಹನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Hiremagaluru villagers demand to appoint Ramachandra as CDA president

About Author

Leave a Reply

Your email address will not be published. Required fields are marked *

You may have missed