September 19, 2024

ಮಲೆನಾಡಿನಲ್ಲಿ ಮಳೆಗೆ ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತ

0
ಮಲೆನಾಡಿನಲ್ಲಿ ಮಳೆಗೆ ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತ

ಮಲೆನಾಡಿನಲ್ಲಿ ಮಳೆಗೆ ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ರಗಳೆ ನಿಂತಿಲ್ಲ. ಕೆಲವು ದಿನಗಳ ಹಿಂದೆ ಮಳೆಗಾಗಿ ಪ್ರಾರ್ಥಿಸು ತ್ತಿದ್ದ ಕೈಗಳು ಇಂದು ಮಳೆ ನಿಂತರೇ ಸಾಕು ಎಂದು ಕೈಮುಗಿಯುತ್ತಿವೆ. ಅಕ್ಷರಸಹ ಮಲೆನಾಡು ಮಳೆಯ ನಾಡಾಗಿ ಪರಿವರ್ತನೆಯಾಗಿದ್ದು, ಎಲ್ಲಿ ನೋಡಿದರು ಮಳೆ ನೀರು ಸಂಭ್ರಮಿಸುತ್ತಿದೆ. ಹಳ್ಳಕೊಳ್ಳ, ನದಿ, ಕೆರೆಕಟ್ಟೆ ಗಳು ಉಕ್ಕಿ ಹರಿಯುತ್ತಿವೆ.

ಕಳೆದ ಕೆಲವು ದಿನಗಳಿಂದ ಕಾಫಿನಾಡಿನಾದ್ಯಂತ ನಿರಂತರ ಮಳೆಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ ನದಿ ಅಬ್ಬರಿಸುತ್ತಿದ್ದು, ಕೊಪ್ಪ, ನರಸಿಂಹರಾಜಪುರ, ಹರಿಹರಪುರ ನದಿಪಾತ್ರದ ಗದ್ದೆ ಅಡಿಕೆ ತೋಟಗಳು ಜಲಾವೃತಗೊಂಡಿವೆ. ಭತ್ತ ನಾಟಿ ಮಾಡಿದ್ದ ಗದ್ದೆಗಳು ನದಿ ನೀರಿನಲ್ಲಿ ಮುಳುಗಿದೆ.

ಮಳೆಯ ಅಬ್ಬರಕ್ಕೆ ಮೂಡಿಗೆರೆ ತಾಲೂಕು ಸಾಲುಮರ ಗ್ರಾಮದ ಈರಯ್ಯ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಅನೇಕ ಮನೆಗಳು ಕುಸಿದಿವೆ. ಮೂಡಿಗೆರೆ ತಾಲೂಕು ಚಾರ್ಮಾಡಿಘಾಟಿ ಪ್ರದೇಶದ ಕೆಲವು ಕಡೆಗಳಲ್ಲಿ ಗುಡ್ಡ ಕುಸಿಯುತ್ತಿದೆ. ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದ ಕೆಲವು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಗುಡ್ಡ ಕುಸಿದಿದೆ. ಮುಂಜಾಗೃತ ಕ್ರಮವಾಗಿ ಬ್ಯಾರಿಕೇಟ್‌ಗಳನ್ನು ಅಳವಡಿಸಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಮಾರ್ಗದಲ್ಲಿ ಜನ ಮತ್ತು ವಾಹನ ಸಂಚಾರವನ್ನು ಸದ್ಯ ತಡೆಹಿಡಿಯಲಾಗಿದ್ದು, ಗುಡ್ಡ ಕುಸಿತದ ಮಣ್ಣನ್ನು ಜೆಸಿಬಿ ಮೂಲಕ ತೆರ ವು ಮಾಡಲಾಗಿದೆ.

ಕಡೂರು ತಾಲೂಕು ಸಖರಾಯಪಟ್ಟಣ ಸುತ್ತಮುತ್ತ ಬಾರೀ ಮಳೆಯಾಗಿದ್ದು, ಹೊಲ ಅಡಿಕೆ ತೋಟಗಳು ಜಲಾವೃತಗೊಂಡಿವೆ. ಕಳೆದ ೧೫ದಿನಗಳ ಹಿಂದೆ ಬರಿದಾಗಿದ್ದ ಮದಗದ ಕೆರೆ ಮುಕ್ಕಾಲು ಭಾಗ ಭರ್ತಿಯಾ ಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಶೃಂಗೇರಿ, ಕಳಸ, ಮೂಡಿಗೆರೆ, ನರಸಿಂಹರಾಜಪುರ ಸುತ್ತ ಮುತ್ತಲ ಜನರನ್ನು ಆತಂಕಕ್ಕೀಡು ಮಾಡಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಆಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಹಾಗೂ ಅಲ್ಲಿನ ತಾಲೂಕು ಆಡಳಿತ ಮುಂಜಾಗೃತ ಕ್ರಮ ಕೈಗೊಂಡಿದೆ.

ಶೃಂಗೇರಿ ಶಾರದಾಂಭೆ ದೇವಸ್ಥಾನದ ಬಳಿ ತುಂಗಾ ನದಿ ನೆರೆ ಆತಂಕವನ್ನು ಸೃಷ್ಟಿಸಿದ್ದು, ಕಪ್ಪೆ ಶಂಕರ ದೇವ ಸ್ಥಾನ ಸೇರಿದಂತೆ ಗುರುನಿವಾಸಕ್ಕೆ ತೆರಳುವ ಮಾರ್ಗದಲ್ಲಿನ ತೆಂಗಿನ ತೋಟ ಸಂಪೂರ್ಣ ಜಲಾವೃತಗೊಂ ಡಿದೆ. ಸಂಧ್ಯಾವಂದನ ಮಂಟಪ ಮುಳುಗಡೆಯಾಗಿದೆ.

ಚಾರ್ಮಾಡಿಘಾಟಿ ಪ್ರದೇಶ ಹಾಗೂ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಸಾಗುವ ಮಾರ್ಗದಲ್ಲಿ ಅಲ್ಲಲ್ಲಿ ಜಲಪಾತಗಳು ಸೃಷ್ಟಿಯಾಗಿವೆ. ದತ್ತಪೀಠಕ್ಕೆ ತೆರಳುವ ಮಾರ್ಗಮಧ್ಯೆಯಲ್ಲಿರುವ ಹೊನ್ನಮ್ಮನ ಹಳ್ಳ ಉಕ್ಕಿ ಹರಿಯುತ್ತಿದೆ. ಮಲೆನಾಡಿನಲ್ಲಿರುವ ಜಲಪಾತಗಳಿಗೆ ಜೀವಕಳೆ ಬಂದಿದ್ದು, ಮೈದುಂಬಿ ಹರಿಯುತ್ತಿವೆ.

ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗಿದೆ. ಕಡೂರು, ತರೀಕೆರೆ, ಬೀರೂರು, ಅಜ್ಜಂಪುರ ಭಾಗದಲ್ಲಿಯೂ ಮಳೆಯಾಗಿದೆ. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ನಿರಂತರ ಮಳೆಯಿಂದ ಜನರು ರೋಸಿ ಹೋಗಿದ್ದಾರೆ.

Hill collapse on the way to Mullayanagiri area due to rain in the hills

About Author

Leave a Reply

Your email address will not be published. Required fields are marked *

You may have missed