September 19, 2024

ಬಿ.ಕೆ ಹರಿಪ್ರಸಾದ್ ಗೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಸಂಘಟಿತ ಹೋರಾಟ

0
ಬಿ.ಕೆ ಹರಿಪ್ರಸಾದ್ ಗೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಸಂಘಟಿತ ಹೋರಾಟ ಪತ್ರಿಕಾಗೋಷ್ಠಿ

ಬಿ.ಕೆ ಹರಿಪ್ರಸಾದ್ ಗೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಸಂಘಟಿತ ಹೋರಾಟ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ರವರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಎಂ ಸತೀಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ೧೯೭೭ ರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ರಾಜಕಾರಣ ಮಾಡುತ್ತಿರುವ ಬಿಲ್ಲವ, ಈಳವ ಸಮಾಜದ ೨೬ ಉಪ ಪಂಗಡಗಳ ನಾಯಕರಾಗಿರುವ ಬಿ.ಕೆ ಹರಿಪ್ರಸಾದ್‌ಗೆ ಪಕ್ಷದ ಸಿದ್ದಾಂತ ನಡುವೆ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ ಅಂಶುಮಂತ್‌ರವರನ್ನು ಸಂಘಟನೆಯ ಸುಮಾರು ೫೦ ಜನ ಸದಸ್ಯರು, ಪದಾಧಿಕಾರಿಗಳು ಭೇಟಿ ಮಾಡಿ ಮನವಿ ನೀಡಿ ಬಿ.ಕೆ ಹರಿಪ್ರಸಾದ್‌ರವರಿಗೆ ಮಂತ್ರಿಸ್ಥಾನ ನೀಡಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ಹರಿಪ್ರಸಾದ್‌ಗೆ ಸಚಿವಸ್ಥಾನ ನೀಡದಿರುವುದರಿಂದ ಸಮಾಜಕ್ಕೆ ಅನ್ಯಾಯವಾಗಿದೆ ಆದ್ದರಿಂದ ಸಾಮಾಜಿಕ ನ್ಯಾಯವನ್ನು ಕೋರುತ್ತಾ ಸಮಾಜದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉಡುಪಿ, ಚಿಕ್ಕಮಗಳೂರು, ಮಂಗಳೂರು, ಕೊಡಗು ಜಿಲ್ಲೆಗಳನ್ನು ಬಿ.ಕೆ.ಹರಿಪ್ರಸಾದ್ ಪ್ರತಿನಿಧಿಸುತ್ತಿದ್ದಾರೆ ಎಂದುಹೇಳಿದರು.

ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟ, ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘ, ಜಿಲ್ಲಾ ಆರ್ಯ ಈಡಿಗ ಸಂಘ, ಜಿಲ್ಲಾ ನಾರಾಯಣಗುರು ಸಮಿತಿ, ಜಿಲ್ಲೆಯ ತಾಲ್ಲೂಕಿನ ಹೋಬಳಿಯ ಗ್ರಾಮದ ಬಿಲ್ಲವ ಈಡಿಗ, ಈಳವ ಸಮಾಜಗಳ ಮೂಲಕ ಬಿ.ಕೆ ಹರಿಪ್ರಸಾದ್‌ರವರಿಗೆ ಮಂತ್ರಿ ಸ್ಥಾನವನ್ನು ನೀಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ವಾಸುಪೂಜಾರಿ, ಸದಾಶಿವ, ಸುರೇಶ್, ಸಂಜೀವ, ಕೃಷ್ಣಪ್ಪ, ಗುಣಶೇಖರ್ ಮತ್ತಿತರರಿದ್ದರು.

Organized struggle for ministerial position in the government

About Author

Leave a Reply

Your email address will not be published. Required fields are marked *

You may have missed