September 16, 2024

ಅಹಂಕಾರದ ಮನೋಭಾವನೆ ನಮ್ಮ ಏಳಿಗೆಗೆ ತೊಡಕಾಗಲಿದೆ

0
ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಸಂಯುಕ್ತಾ ಶ್ರಯದಲ್ಲಿ ಇಲ್ಲಿನ ಸರ್ಕಾರಿ ನೌಕರರ ಸಂಘದ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ

ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಸಂಯುಕ್ತಾ ಶ್ರಯದಲ್ಲಿ ಇಲ್ಲಿನ ಸರ್ಕಾರಿ ನೌಕರರ ಸಂಘದ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ

ಚಿಕ್ಕಮಗಳೂರು: ನಾನು, ನನ್ನಿಂದ, ನನಗಾಗಿ ಎಂಬ ಅಹಂಕಾರದ ಮನೋಭಾವನೆ ನಮ್ಮ ಏಳಿಗೆಗೆ ತೊಡಕಾಗಲಿದೆ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಸಂಯುಕ್ತಾ ಶ್ರಯದಲ್ಲಿ ಇಲ್ಲಿನ ಸರ್ಕಾರಿ ನೌಕರರ ಸಂಘದ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು, ನನ್ನಿಂದ, ನನಗಾಗಿ ಎಂಬ ಮನೋಭಾವನೆಯಿಂದ ಹೊರಗೆ ಬರಬೇಕು. ನಾವು, ನಮ್ಮಿಂದ, ನಮಗಾಗಿ ಎಂಬ ಭಾವನೆಯನ್ನು ಬೆಳೆಸಿಕೊಳ್ಳೇಬೇಕು. ಆಗ ಮಾತ್ರ ಎಲ್ಲರ ಏಳಿಗೆ ಸಾಧ್ಯವಾಗಲಿದೆ ಎಂದರು.

ನಾನು, ರಾಜಕೀಯ ಕುಟುಂಬದಿಂದ ಬಂದವನಲ್ಲ, ಆರಂಭದಲ್ಲಿ ಹಾಗೂ ನಂತರದಲ್ಲಿ ಹಂತ ಹಂತವಾಗಿ ಈ ಮಟ್ಟಕ್ಕೆ ಬರಲು ಕಾರಣರಾದವರು ಪತ್ರಕರ್ತರು ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಗೆ ಸಂಬಂಽದಂತೆ ಪತ್ರಕರ್ತರು ಹಲವು ಸಲಹೆ ನೀಡಿದ್ದಾರೆ. ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಸಚಿವರು, ಈ ಜಿಲ್ಲೆಯಲ್ಲಿ ಜನಪರ ಕೆಲಸ ಮಾಡುವ ಉತ್ಸಾಹಿ ಶಾಸಕರು, ಕಾಂಗ್ರೆಸ್‌ನ ಪ್ರಭಾವಿ ಮುಖಂಡರು ಇದ್ದಾರೆ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಮಾತನಾಡಿ, ದೇಶ, ರಾಜ್ಯವನ್ನು ಕಟ್ಟುವುದರಲ್ಲಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ನಾವಿಡುವ ಹೆಜ್ಜೆ ಗುರುತುಗಳನ್ನು ಆ ಸಮಾಜ ಅನುಕರಣೆ ಮಾಡುತ್ತದೆ. ಪತ್ರಿಕಾ ರಂಗದಿಂದಾಗಿ ಸಾಮಾಜಿಕ ನ್ಯಾಯ ಸಿಗುತ್ತದೆ. ಅದ್ದರಿಂದ ಜವಬ್ದಾರಿ ಹೆಚ್ಚಿರುತ್ತದೆ. ಬೇರೆಯವರಿಗೆ ತೊಂದರೆ ನೀಡಬಾರದು, ನಾವು ಅವರಿಗಿಂತ ಎತ್ತರದಲ್ಲಿ ಬೆಳೆಯಬೇಕೆಂಬ ಮನೋಭಾವನೆಯನ್ನು ಹೊಂದಬೇಕು ಎಂದು ಹೇಳಿದರು.

ಒಳ್ಳೆಯ ಕೆಲಸಗಳು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿಲ್ಲ. ಅದರ ಬದಲು ತಪ್ಪು ಹೆಚ್ಚು ವೈಭವೀಕರಿಸಲಾಗುತ್ತಿದೆ. ರಾಜಕಾರಣ ಬೇರೆ, ಪ್ರೀತಿಯ ವಿಸ್ವಾಸ ಬೇರೆ, ಕಾರ್ಯಕರ್ತರ ನಡುವೆ ದ್ವೇಷ, ಹುಟ್ಟು ಹಾಕುವ ಕೆಲಸ ಆಗಬಾರದು ಎಂದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಆಗಸ್ಟ್ ೧೫ ರವರೆಗೆ ಸಾಮಾನ್ಯ ವರ್ಗಾವಣೆ ನಡೆಯಲಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕ ಅಧಿಕಾರಿಗಳನ್ನು ಜಿಲ್ಲೆಗೆ ತರುವ ಕೆಲಸ ನಡೆಸಲಾಗುವುದು. ಅವರು ಜನರಿಗೆ ಗೌರವ ಕೊಡಬೇಕು. ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು.

ಕೊಪ್ಪದ ಗೌರಿ ಗದ್ದೆ ಆಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿ ಮಾತನಾಡಿ, ಪತ್ರಿಕೋದ್ಯಮ ಒಂದು ಜವಬ್ದಾರಿ. ಸಮಾಜದಲ್ಲಿ ಬದಲಾವಣೆ ಮಾಡುವ ತಾಕತ್ತು ಇರುವುದು ಪತ್ರಿಕೋದ್ಯಮಕ್ಕೆ ಹಾಗೂ ರಾಜಕಾರಣಕ್ಕೆ. ಸತ್ಯವನ್ನು ಹೇಳಬೇಕಾದರೆ ಧೈರ್ಯ ಬೇಕು ಎಂದರು.

ಪತ್ರಕರ್ತರು, ಪಾರದರ್ಶಕತೆ ಸರಿಯಾದ ರೀತಿಯಲ್ಲಿ ಬಳಸಬೇಕು. ಆಗ ಮಾತ್ರ ಎಲ್ಲರೂ ಹೆಚ್ಚಿನ ಗೌರವ ಕೊಡುತ್ತಾರೆ ಎಂದು ಹೇಳಿದರು.

ಆರೋಗ್ಯ ಕೊಟ್ಟಿರುವ ವೈದ್ಯರು, ಪ್ರಪಂಚವನ್ನು ಆಂತರಿಕವಾಗಿ ಸಾಮಾಜಿಕವಾಗಿ ಶುದ್ಧಿ ಮಾಡಿದವರು ಪತ್ರಿಕೋದ್ಯಮಿ, ವಿದ್ಯೆ ಹೇಳಿಕೊಟ್ಟ ಗುರುಗಳು, ಜೀವನ ಹೇಳಿಕೊಟ್ಟ ತಾಯಿ, ನಡತೆ ಹೇಳಿಕೊಟ್ಟ ಗುರು, ಈ ಋಣ ಮರೆಯಲು ಸಾಧ್ಯವಿಲ್ಲ ಎಂದರು.

ತೊಂದರೆಯಲ್ಲಿರುವ ೫ ಮಕ್ಕಳಿಗೆ ಅದರಲ್ಲಿ ಹೆಣ್ಣು ಮಕ್ಕಳಾಗಿದ್ದರೆ, ಅವರ ಮದುವೆ ತನಕ, ಗಂಡು ಮಕ್ಕಳು ಆಗಿದ್ದರೆ, ಉದ್ಯೋಗ ಸಿಗುವವರೆಗೆ ಶಿಕ್ಷಣ ನೀಡಲು ನಮ್ಮ ಆಶ್ರಮ ಸಿದ್ಧವಿದೆ ಎಂದು ಹೇಳಿದರು.

ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿದರು. ಕಡೂರು ಶಾಸಕ ಕೆ.ಎಸ್. ಆನಂದ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಉಪಸ್ಥಿತರಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಪತ್ರಕರ್ತರನ್ನು ಸನ್ಮಾನಿಸಲಾಯಿತು.

An attitude of ego will hinder our prosperity

About Author

Leave a Reply

Your email address will not be published. Required fields are marked *