September 16, 2024

ನಿಗಧಿತ ಅವಧಿಯಲ್ಲಿ ಗುರಿ ಸಾಧಿಸಲು ಅಧಿಕಾರಿಗಳಿಗೆ ಸಚಿವರ ಸೂಚನೆ

0
ತರೀಕೆರೆ ತಾಲ್ಲೂಕು ಲಿಂಗದ ಹಳ್ಳಿ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆ

ತರೀಕೆರೆ ತಾಲ್ಲೂಕು ಲಿಂಗದ ಹಳ್ಳಿ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆ

ಚಿಕ್ಕಮಗಳೂರು: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ವಿಳಂಬ ಮಾಡದೆ ಅರ್ಹ ಫಲಾನುಭವಿಗಳಿಗೆ ತಲುಪಿಸಿ ನಿಗಧಿತ ಸಮಯಕ್ಕೆ ಗುರಿ ಸಾಧಿಸುವಂತೆ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ತರೀಕೆರೆ ತಾಲ್ಲೂಕು ಲಿಂಗದ ಹಳ್ಳಿ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಡಿಯುವ ನೀರು, ರಸ್ತೆ ಹಾಗೂ ವಸತಿ ಕಾಮಗಾರಿಗಳಿಗೆ ಸರ್ಕಾರ ನೀಡಿರುವ ಅನುಧಾನವನ್ನು ಬಳಸಿಕೊಂಡು ಶೀಘ್ರವಾಗಿ ಕಾಮಗಾರಿಗಳು ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು ಎಂದರು.

ನಿವೇಶನಕ್ಕೆ ಜಾಗದ ಕೊರತೆಯಾಗಿರುವ ಪ್ರದೇಶಗಳಲ್ಲಿ ಜಾಗ ಗುರುತಿಸಿ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸಬೇಕು, ಹಾಗೂ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಬೇಕು. ತರೀಕೆರೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಕ್ರಮ ವಹಿಸಿ ಪೂರ್ಣಗೊಳಿಸಲು ತಿಳಿಸಿದರು. ೨ ಲೈನ್‌ಗಳ ಜೊತೆಗೆ ೪ ಲೈನ್‌ಗಳ ಅಂದಾಜು ಪಟ್ಟಿ ರೆಡಿ ಮಾಡಿ ೧೦ ದಿನಗಳ ಒಳಗಾಗಿ ಸಲ್ಲಿಸಿ ಎಂದರು.

ವಿವಿಧ ಇಲಾಖೆಗಳಲ್ಲಿ ಲಭ್ಯ ವಿರುವ ಅನುಧಾನವನ್ನು ಬಳಸಿಕೊಂಡು ಹಾಗೂ ಪೂರ್ಣಗೊಳಿಸಿರುವ ಕಾಮಗಾರಿಗಳ ಅನುಧಾನ ನೀಡಿ ನಂತರ ಕಾಮಗಾರಿಗಳು ಕ್ವಾಲಿಟಿಯಿಂದ ಕೂಡಿರಬೇಕು ಕಳಪೆ ಕಾಮಗಾರಿಗಳು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ನೇರ ಹೊಣೆಗಾರರು ಅವರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದರು

ತರೀಕೆರೆ ಅಜ್ಜಂಪುರ ತಾಲ್ಲೂಕುಗಳಲ್ಲಿ ರಸ್ತೆಗಳು, ಮನೆಗಳು ಹಾಗೂ ಸೇತುವೆಗಳಿಗೆ ಹಾನಿ ಆಗಿರುವ ಪ್ರದೇಶಗಳಲ್ಲಿ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದರು. Sಈಅ ಮತ್ತು ೧೫ ನೇ ಹಣಕಾಸು ಯೋಜನೆಯಲ್ಲಿ ಲಭ್ಯವಿರುವ ಹಾಗೂ ಈಗಲೇ ಪ್ರಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಾಗೂ ಸರ್ಕಾರದ ಮಟ್ಟದಲ್ಲಿ ವಿವಿಧ ಇಲಾಖೆಗಳ ಬಗ್ಗೆ ಕಂಟಿಂಗ್ ಇರುವ ಪ್ರೊಪಜೆಲ್‌ಗಳ ಮಾಹಿತಿ ನೀಡಿದರೆ ಅವುಗಳ ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕುಡಿಯುವ ನೀರಿನ ಕಾಮಗಾರಿಗಳಿಗೆ ಅನುಧಾನ ಕೊರತೆ ಇರುವುದಿಲ್ಲ. ಅತಿವೃಷ್ಠಿಯಿಂದ ಹೆಚ್ಚಾಗಿ ಹಾನಿಯಾಗಿರುವ ಕಾಮಗಾರಿಗೆ ವಿಶೇಷ ಪ್ಯಾಕೇಜ್‌ನಲ್ಲಿ ಸೇರಿಸಿ ಅನುಧಾನ ನೀಡಲಾಗುವುದು. ವಿವಿಧ ಇಲಾಖೆಗಳ ಸಿಬ್ಬಂದಿ ಕೊರತೆ ಇದ್ದರೆ ಆಯಾಯ ಇಲಾಖೆಗಳ ಮುಖ್ಯಸ್ಥರಿಗೆ ವರದಿ ನೀಡಲು ತಿಳಿಸಿದರು.

ಮಳೆಯಿಂದ ಹಾನಿಯಾಗಿರುವ ಬೆಳೆಗಳು ಹಾಗೂ ಅದಕ್ಕೆ ಸರಿಯಾದ ಇತರೆ ಬೆಳೆಗಳಿಗೆ ಮುಂದಾಗಲು ಕ್ರಮ. ರಸಗೊಬ್ಬರ ಕೊರತೆಯಾಗದಂತೆ ಮುಂದಾಗಬೇಕು. ಅಮೃತ ಮಹಲ್ ಕಾವಲಿ ಬಗ್ಗೆ ಸಂಪೂರ್ಣ ವರದಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಹಾಸ್ಟಲ್ , ಸರ್ಕಾರಿ ಕಟ್ಟಡಗಳ ಬಗ್ಗೆ ಮೇಲಾಧಿಕಾರಿಗಳ ಮೂಲಕ ಆಯಾಯ ಇಲಾಖೆಗೆ ಸಲ್ಲಿಸಲು ಹೇಳಿದರು.

ತರೀಕೆರೆ ಶಾಸಕರಾದ ಜಿ.ಹೆಚ್. ಶೀನಿವಾಸ್ ಅವರು ಮಾತನಾಡಿ ಅಜ್ಜಂಪುರ, ತರೀಕೆರೆ ತಾಲ್ಲೂಕುಗಳಲ್ಲಿ ಮಳೆಯಿಂದ ಮನೆಗಳು, ರಸ್ತೆ, ಸೇತುವೆ ಹಾನಿಯಾಗಿದ್ದು, ನಿವೇಶನಗಳ ಕೊರತೆ ಹಾಗೂ ಕೆಲ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕೊರತೆಯ ಬಗ್ಗೆ. ಅಧಿಕಾರಿಗಳು ಹೆಚ್ಚು ಜಾಗೃತ ವಹಿಸಬೇಕು. ಉಸ್ತುವಾರಿ ಸಚಿವರು ಎಲ್ಲಾ ತಾಲ್ಲುಕುಗಳಿಗೆ ಭೇಟಿ ನೀಡುತ್ತಿರುವುದು ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಹೆಚ್ಚು ಹೆಚ್ಚು ಭೇಟಿ ನೀಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಪುರಸಭೆ ಅಧ್ಯಕ್ಷೆ ಕಮಲ ರಾಜೇಂದ್ರ, ಹಾಗೂ ಜಿಲ್ಲಾ ಹಾಗೂ ತಾಲ್ಲೂಕ್ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Minister’s instructions to the officials to achieve the target within the stipulated period

 

About Author

Leave a Reply

Your email address will not be published. Required fields are marked *