September 19, 2024

ಪ್ಲಾಂಟೇಷನ್ ಸಿಬ್ಬಂದಿಗಳಿಗೆ ಶೇ.17.05 ರಷ್ಟು ವೇತನ ಹೆಚ್ಚಳ

0
ಕೇರಳ ರಾಜ್ಯದ ಕೊಚ್ಚಿಯಲ್ಲಿ ನಡೆದ ವೇತನ ಒಪ್ಪಂದ ಮಾತುಕತೆಯಲ್ಲಿ ದಿ ಯುನೈಟೆಡ್ ಪ್ಲಾಂಟರ್‍ಸ್ ಅಸೋಷಿಯೇಷನ್ ಆಫ್ ಸದರನ್ ಇಂಡಿಯಾ (ಉಪಾಸಿ) ಹಾಗೂ ಮೂರು ರಾಜ್ಯಗಳ ಮಾಲೀಕರ ಸಂಘಟನೆಗಳಾದ ಕೆಪಿಎ, ಎಪಿಕೆ ಹಾಗೂ ಪಿಎಟಿ ಸಂಘಟನೆಗಳೊಂದಿಗೆ ಈ ಒಪ್ಪಂದ

ಕೇರಳ ರಾಜ್ಯದ ಕೊಚ್ಚಿಯಲ್ಲಿ ನಡೆದ ವೇತನ ಒಪ್ಪಂದ ಮಾತುಕತೆಯಲ್ಲಿ ದಿ ಯುನೈಟೆಡ್ ಪ್ಲಾಂಟರ್‍ಸ್ ಅಸೋಷಿಯೇಷನ್ ಆಫ್ ಸದರನ್ ಇಂಡಿಯಾ (ಉಪಾಸಿ) ಹಾಗೂ ಮೂರು ರಾಜ್ಯಗಳ ಮಾಲೀಕರ ಸಂಘಟನೆಗಳಾದ ಕೆಪಿಎ, ಎಪಿಕೆ ಹಾಗೂ ಪಿಎಟಿ ಸಂಘಟನೆಗಳೊಂದಿಗೆ ಈ ಒಪ್ಪಂದ

ಚಿಕ್ಕಮಗಳೂರು: ದಕ್ಷಿಣ ಭಾರತದ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಕಾಫಿ, ಟೀ, ರಬ್ಬರ್ ಪ್ಲಾಂಟೇಷನ್ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ (ಸ್ಟಾಪ್ಸ್ ನೌಕರರು) ಜನವರಿ ೨೦೨೩ ರಿಂದ ಅನ್ವಯವಾಗುವಂತೆ ಶೇ. ೧೭.೦೫ ರಷ್ಟು ವೇತನ ಹೆಚ್ಚಳವಾಗಿದೆ ಎಂದು ದಿ ಎಸ್ಟೇಟ್ಸ್ ಸ್ಟಾಪ್ಸ್ ಯೂನಿಯನ್ ಆಫ್ ಸೌತ್ ಇಂಡಿಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು ಕೇರಳ ರಾಜ್ಯದ ಕೊಚ್ಚಿಯಲ್ಲಿ ನಡೆದ ವೇತನ ಒಪ್ಪಂದ ಮಾತುಕತೆಯಲ್ಲಿ ದಿ ಯುನೈಟೆಡ್ ಪ್ಲಾಂಟರ್‍ಸ್ ಅಸೋಷಿಯೇಷನ್ ಆಫ್ ಸದರನ್ ಇಂಡಿಯಾ (ಉಪಾಸಿ) ಹಾಗೂ ಮೂರು ರಾಜ್ಯಗಳ ಮಾಲೀಕರ ಸಂಘಟನೆಗಳಾದ ಕೆಪಿಎ, ಎಪಿಕೆ ಹಾಗೂ ಪಿಎಟಿ ಸಂಘಟನೆಗಳೊಂದಿಗೆ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ ೨೦೨೨ ರ ಮೂಲ ವೇತನ ಹಾಗೂ ತುಟ್ಟಿ ಭತ್ಯೆ ಸೇರಿದಂತೆ ಇರುವ ಸಂಬಳಕ್ಕೆ ಶೇ. ೧೭.೦೫ ರಷ್ಟು ಹೆಚ್ಚಳವಾಗಿದ್ದು, ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ರೂ. ೧೭,೭೧೫ ಮೂಲ ವೇತನ ಹಾಗೂ ತುಟ್ಟಿ ಭತ್ಯೆಗಳು ಸಿಗಲಿವೆ. ವೇತನದೊಂದಿಗೆ ಇನ್ನಿತರೆ ಸೌಲಭ್ಯಗಳಾದ ವಾರ್ಷಿಕ ಬಡ್ತಿ, ರಜೆ ಸಂಬಳಗಳು, ವಾರ್ಷಿಕ ರಜೆಗಳ ಪ್ರವಾಸ ಭತ್ಯೆ, ಕೆಲಸ ಸಮಯದಲ್ಲಿ ನೀಡುವ ಭತ್ಯೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

೧೯೪೭ ರಿಂದ ಇದುವರೆಗೂ ೨೩ ಕ್ಕೂ ಹೆಚ್ಚು ವೇತನ ಹಾಗೂ ಇತರೆ ಒಪ್ಪಂದಗಳನ್ನು ಸ್ಟಾಪ್ ಯೂನಿಯನ್ ಹಾಗೂ ಉಪಾಸಿ ಸಂಘಟನೆಗಳ ಮಧ್ಯೆ ನಡೆಯುತ್ತಿದ್ದು, ಇದೊಂದು ದೀರ್ಘ ಕಾಲದ ಪ್ಲಾಂಟೇಷನ್ ಕೈಗಾರಿಕೆಯ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದ್ದಾರೆ.

ಈ ಒಪ್ಪಂದಕ್ಕೆ ಸ್ಟಾಪ್ ಯೂನಿಯನ್‌ನ ಕಾರ್ಯಾಧ್ಯಕ್ಷರಾದ ಪಿ.ಆರ್.ತೋಮಸ್, ಪ್ರಧಾನ ಕಾರ್ಯದರ್ಶಿ ಎಂ.ಸಿ,ಶಿವಾನಂದಸ್ವಾಮಿ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಉಪಾಸಿ ಅಧ್ಯಕ್ಷರಾದ ಜೆಪ್ರಿ ರೆಬೆಲ್ಲೋ, ಉಪಾಧ್ಯಕ್ಷರಾದ ಸಿ.ಶ್ರೀಧರನ್ ಸೇರಿದಂತೆ ಮೂರು ರಾಜ್ಯಗಳ ಅಧ್ಯಕ್ಷರುಗಳು ಸಹಿ ಹಾಕಿರುತ್ತಾರೆ.

17.05% increase in wages for plantation staff

About Author

Leave a Reply

Your email address will not be published. Required fields are marked *

You may have missed