September 20, 2024

ನಗರದಲ್ಲಿ ಪ್ಲಾಸ್ಟಿಕ್ ಮಾರುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ

0
ನಗರದ ಸಂಗೀತ ಸ್ಟೋರ್ ಮತ್ತು ದೇವಿ ಸ್ಟೋರ್‌ನಲ್ಲಿ ೬೦೦ ಕೆ.ಜಿ ಪ್ಲಾಸ್ಟಿಕ್‌ನ್ನು ವಶ

ನಗರದ ಸಂಗೀತ ಸ್ಟೋರ್ ಮತ್ತು ದೇವಿ ಸ್ಟೋರ್‌ನಲ್ಲಿ ೬೦೦ ಕೆ.ಜಿ ಪ್ಲಾಸ್ಟಿಕ್‌ನ್ನು ವಶ

ಚಿಕ್ಕಮಗಳೂರು: : ನಗರದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಕಳೆದ ಒಂದೂವರೆ ವರ್ಷದಿಂದ ಜಾಗೃತಿ ಮೂಡಿಸುತ್ತಿದ್ದರೂ ಕೆಲ ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ, ಇದು ಕೊನೆಯ ಎಚ್ಚರಿಕೆಯಾಗಿದ್ದು, ಪ್ಲಾಸ್ಟಿಕ್ ಬಳಸುವ ಗ್ರಾಹಕರ ಮೇಲು ದಂಡ ವಿಧಿಸುವ ಮೂಲಕ ಸೂಕ್ತ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಎಚ್ಚರಿಸಿದರು.

ಅವರು ಇಂದು ನಗರದ ಸಂಗೀತ ಸ್ಟೋರ್ ಮತ್ತು ದೇವಿ ಸ್ಟೋರ್‌ಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಆಧರಿಸಿ ನಗರಸಭೆ ವತಿಯಿಂದ ದಾಳಿ ಮಾಡಿ ಸುಮಾರು ೬೦೦ ಕೆ.ಜಿ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು ವರ್ತಕರ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲಿಸಿ ಅಂಗಡಿ ಪರವಾನಗಿ ರದ್ದುಮಾಡಲಾಗುವುದೆಂದು ಹೇಳಿದರು.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರೊಂದಿಗೆ ಶಾಸಕರುಗಳಾದ ಹೆಚ್.ಡಿ ತಮ್ಮಯ್ಯ , ಟಿ.ಡಿ ರಾಜೇಗೌಡ ಸಹಿತ ತಾವೂ ಸೇರಿ ಚರ್ಚಿಸಿದ್ದು ೫೦೦ ಎಂ.ಎಲ್ ನಿಂದ ೨ ಲೀಟರ್ ನೀರಿನ ಗಾಜಿನ ಬಾಟಲ್‌ಗಳಲ್ಲಿ ಸರಬರಾಜು ಮಾಡಲು ನಗರಸಭೆ ನಿರ್ಧರಿಸಿದ್ದು, ಪ್ರವಾಸಿಗರು ಅತಿ ಹೆಚ್ಚು ತೆರಳುವ ದತ್ತಪೀಠ, ಮುಳ್ಳಯ್ಯನಗಿರಿ ಮಾರ್ಗದ ತನಿಖಾ ಠಾಣೆಗಳಲ್ಲಿ ಪರಿಶೀಲಿಸಲು ಸೂಚನೆ ನೀಡಲಾಗಿದ್ದು, ಅದೇ ರೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಗಾಜಿನ ಬಾಟಲಿಯಲ್ಲಿ ನೀರನ್ನು ಸರಬರಾಜು ಮಾಡುವಂತೆ ಸಲಹೆ ನೀಡಿದರು.

ನಗರಸಭಾ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ಎಂ.ಜಿ ರಸ್ತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಮಾರಾಟ ಮಾಡದಂತೆ ಅರಿವು, ಜಾಗೃತಿ ಮೂಡಿಸಿದ್ದು, ಹಲವು ಬಾರಿ ಜಾತಗಳನ್ನು ನಡೆಸಿದ್ದೇವೆ ಆದರೂ ನಗರಸಭೆಗೆ ಸವಾಲೆಸಗಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಸಂಗೀತ ಸ್ಟೋರ್ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲಿಸಲಾಗುವುದು ಜೊತೆಗೆ ೬೦೦ ಕೆ.ಜಿ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ನಗರದ ಯಾವುದೇ ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡಬಾರದು. ಈಗಾಗಲೇ ದೇವಿ ಸ್ಟೋರ್, ಸಂಗೀತ ಸ್ಟೋರ್‌ನಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿರುವುದರಿಂದ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಿನಲ್ ಮೊಖದ್ದಮೆ ದಾಖಲು ಮಾಡುತ್ತೇವೆ ಎಂದು ಎಚ್ಚರಿಸಿದ ಅವರು ಈ ಸಂಬಂಧ ನಗರಸಭೆಯಿಂದ ೫ ತಂಡಗಳನ್ನು ರಚಿಸಿದ್ದು ಪ್ಲಾಸ್ಟಿಕ್ ಮಾರಾಟ ಮಾಡದಂತೆ ಅರಿವು ಮೂಡಿಸುವುದರೊಂದಿಗೆ ತಪಾಸಣೆಗಳನ್ನು ನಡೆಸುವುದಾಗಿ ತಿಳಿಸಿದರು.

ನಗರಸಭೆ ಆದೇಶವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ವಸ್ತುಗಳಾದ ಲೋಟ, ಕವರ್, ಬಾಟಲ್ ಮುಂತಾದವುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದ್ದು, ಪತ್ತೆಯಾದ ವರ್ತಕರ ವಿರುದ್ಧ ಪರವಾನಗಿ ರದ್ದುಪಡಿಸಿ ದಂಡ ವಿಧಿಸುವುದಾಗಿ ಎಚ್ಚರಿಸಿದರು.

ನಗರದಲ್ಲಿ ಈಗಾಗಲೇ ಅಳವಡಿಸಲಾಗಿರುವ ಬೀದಿ ದೀಪಗಳು ಕಳಪೆಯಿಂದ ಕೂಡಿವೆ ಎಂಬ ಸಾರ್ವಜನಿಕರ ದೂರಿನನ್ವಯ ಪ್ರಶ್ನಿಸಿದಾಗ ಹಾಗೇನೂ ಇಲ್ಲ ಮಳೆಗಾಲವಾಗಿರುವುದರಿಂದ ಕೆಲವು ಎಲ್.ಇ.ಡಿ ದೀಪಗಳು ಕಡಿಮೆ ಪ್ರಮಾಣದ ಬೆಳಕು ನೀಡುತ್ತಿವೆ ಈ ಸಂಬಂಧ ಗುತ್ತಿಗೆದಾರರೊಂದಿಗೆ ಚರ್ಚಿಸಿ ಬದಲಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

Fine for shop owners who were selling plastic in the city

About Author

Leave a Reply

Your email address will not be published. Required fields are marked *