September 20, 2024
ಕ್ಯಾತನಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್‌ಬಸಪ್ಪ

ಕ್ಯಾತನಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್‌ಬಸಪ್ಪ

ಚಿಕ್ಕಮಗಳೂರು: ಇತಿಹಾಸ ಮತ್ತು ವರ್ತಮಾನದಲ್ಲಿ ಸಮಾಜದ ಮೇಲೆ ಆಗಿರುವ ವಿಪ್ಲವಗಳು ಅಥವಾ ಸಂಕಟಗಳನ್ನು ಆಧರಿಸಿ ಇದೇ ಆ.೬ ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಗಾಯಗಳು ಎಂಬ ಕತೆ, ಕಾದಂಬರಿ, ನಾಟಕ ಆಧಾರಿತ ರಂಗರೂಪಕ ಪ್ರದರ್ಶನ ನಡೆಯಲಿದೆ ಎಂದು ಕ್ಯಾತನಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್‌ಬಸಪ್ಪ ಹೇಳಿದರು.

ಇಂದು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರನಟ ಪ್ರಕಾಶ್‌ರಾಜ್ ಅರ್ಪಿಸುವ ನಿರ್ದಿಗಂತ ರಂಗಪಯಣ ಮತ್ತು ಕ್ಯಾತನಬೀಡು ಪ್ರತಿಷ್ಠಾನ ಮತ್ತು ಅಭಿನಯ ದರ್ಪಣ ಯುವವೇದಿಕೆ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೬ ಕ್ಕೆ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನವನ್ನು ಡಾ.ಶ್ರೀಪಾದ್‌ಭಟ್, ಸಹ ನಿರ್ದೇಶನವನ್ನು ಹಾಸನ ಶ್ವೇತರಾಣಿ ನಿರ್ವಹಿಸಿದ್ದಾರೆ ಎಂದರು.

ದೇಹದ ಮೇಲೆ ಆದ ಗಾಯಗಳು ಮಾಯಬಹುದು. ಆದರೆ, ಜಾತಿ, ಧರ್ಮದ ಹೆಸರಿನಲ್ಲಿ ಆದ ಗಾಯಗಳು ಸದಾ ಯಾತನೆ, ಸಂಕಟ ನೀಡುತ್ತವೆ. ಸಮಾಜದ ಮೇಲೆ ಆದಂತಹ ಗಾಯಗಳ ಬಗ್ಗೆ ರಂಗರೂಪಕ ಪ್ರಭಾವ ಬೀರಲಿದೆ ಎಂದು ಹೇಳಿದರು.

ಪ್ರತಿಷ್ಠಾನದ ಡಿ.ಎಂ.ಮಂಜುನಾಥಸ್ವಾಮಿ ಮಾತನಾಡಿ, ಬದುಕಿನ ಸಾಮಾಜಿಕ ಸಂಕಟಗಳ ಅನಾವರಣ ಅಂದು ನಡೆಯಲಿದೆ. ಕುವೆಂಪು ಅವರಿಂದ ಹಿಡಿದು ೨೬ ರಂಗಪಠ್ಯಗಳನ್ನು ಈ ನಾಟಕದಲ್ಲಿ ಹೆಣೆದಿದ್ದಾರೆ. ಗಾಯಗಳು ಮೈಸೂರಿನಲ್ಲಿ ಮೊದಲು ಆರಂಭವಾಗಿ ಒಟ್ಟು ೬೦ ಕ್ಕೂ ಹೆಚ್ಚು ಪ್ರದರ್ಶನ ಕಾಣಲಿದೆ ಎಂದರು. ರಂಗಕರ್ಮಿ ವಿನುತ್‌ಕುಮಾರ್, ಪ್ರತಿಷ್ಠಾನದ ವಿಜಯ್‌ಕುಮಾರ್, ಗುರುಶಾಂತಪ್ಪ ಮತ್ತಿತರರಿದ್ದರು.

On August 6, injuries are a stage play

About Author

Leave a Reply

Your email address will not be published. Required fields are marked *