September 20, 2024

ಮಧ್ಯವರ್ತಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ

0
ನಗರದ ಸಮುದಾಯ ಭವನದಲ್ಲಿ ೮ ತಾಲ್ಲೂಕುಗಳ ಮಧ್ಯ ವರ್ತಕರ ಸಂಘಗಳ ಒಕ್ಕೂಟ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭ

ನಗರದ ಸಮುದಾಯ ಭವನದಲ್ಲಿ ೮ ತಾಲ್ಲೂಕುಗಳ ಮಧ್ಯ ವರ್ತಕರ ಸಂಘಗಳ ಒಕ್ಕೂಟ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು: ಜನರು ಕೊಟ್ಟ ಅಧಿಕಾರ ಶಾಸಕ ಅನ್ನುವುದಕ್ಕಿಂತ ಜನಸೇವಕನಾಗಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಅರ್ಥ ಬರುತ್ತದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಸಮುದಾಯ ಭವನದಲ್ಲಿ ೮ ತಾಲ್ಲೂಕುಗಳ ಮಧ್ಯ ವರ್ತಕರ ಸಂಘಗಳ ಒಕ್ಕೂಟ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಮಧ್ಯ ವ್ಯಾಪಾರಕ್ಕೆ ಕೆಲವು ಇಲಾಖೆಗಳಿಂದ ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದೆ ಎಂದರು.

ಕ್ಷೇತ್ರದಲ್ಲಿ ಶಾಂತಿ, ಸೌಹಾರ್ಧತೆ ಜೊತೆಗೆ ಜನಸ್ನೇಹಿ ಆಡಳಿತ ನೀಡಲು ಬದ್ಧನಾಗಿದ್ದು, ಆ.೧೭ ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ, ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಜನ ಸಂಪರ್ಕ ಸಭೆ ನಡೆಸುವುದರ ಮೂಲಕ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಎಚ್ಚರ ವಹಿಸುವಂತೆ ತಿಳಿಸಲಾಗುವುದು ಎಂದು ತಿಳಿಸಿದರು.

ದತ್ತ ಜಯಂತಿ, ಗಣಪತಿ ವಿಸರ್ಜನೆ ಮತ್ತು ಗ್ರಾಮ ಪಂಚಾಯಿತಿ ಚುನಾವಣಾ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಮಧ್ಯ ಮಾರಾಟಕ್ಕೆ ಹೇರಲಾದ ನಿಷೇದವನ್ನು ಒಂದು ದಿನ ಮಾತ್ರ ಅಂಗಡಿ ಬಂದ್ ಮಾಡುವಂತೆ ಸಬ್ಬಂದಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ಮಧ್ಯ ವರ್ತಕರ ಸಂಘದ ಜಿಲ್ಲಾಧ್ಯಕ್ಷ ಬಿ.ರಾಜಪ್ಪ ಮಾತನಾಡಿ ಆತ್ಮೀಯ ಗೆಳೆಯರಾಗಿದ್ದ ಹೆಚ್.ಡಿ.ತಮ್ಮಯ್ಯ ರವರು ಈಗ ಶಾಸಕರಾಗಿರುವುದು ಅತೀವ ಸಂತೋಷವನ್ನು ತಂದಿದೆ ಎಂದು ತಿಳಿಸಿದ ಅವರು ಮಧ್ಯ ವರ್ತಿಗಳ ಪರಿಸ್ಥಿತಿ ದೂರದ ಬೆಟ್ಟ ನುಣ್ಣಗೆ ಎಂಬಂತೆ ಆಗಿದೆ, ಅಕ್ರಮ ಮಧ್ಯ ಮಾರಾಟಗಾರರೆಂದು ಇಲಾಖೆಗಳಲ್ಲಿ ದೂರು ದಾಖಲಿಸಿ ಆರೋಪಿ-೨ ಎಂಬ ಹಣೆಪಟ್ಟಿ ಕಟ್ಟಿ ನ್ಯಾಯಾಲಯದ ಮುಂದೆ ನಿಲ್ಲಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಾದರು ಇಂತಹ ಕೆಲಸಗಳು ನಿಲ್ಲಿಸುವಂತೆ ಶಾಸಕರಲ್ಲಿ ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಕೆ.ಎಸ್.ಶಾಂತೇಗೌಡ, ಮಧ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ್, ಪ್ರದಾನ ಕಾರ್ಯದರ್ಶಿ ಮಂಚೇಗೌಡ, ಓಂಕಾರೇಗೌಡ ಉಪಸ್ಥಿತರಿದ್ದರು, ಉದಯ್ ಸ್ವಾಗತಿಸಿ, ಜಯವರ್ಧನ್ ನಿರೂಪಿಸಿ, ನಾಸಿರ್ ವಂಧಿಸಿದರು.

A quick solution to the problems of alcoholics

About Author

Leave a Reply

Your email address will not be published. Required fields are marked *