September 8, 2024

ಸಾವಿನಲ್ಲೂ ಸಾರ್ಥಕತೆ ಮರೆದ ಸಹನಾ ಜೋನ್ಸ್

0
ಶಾಸಕ ಎಚ್.ಡಿ.ತಮ್ಮಯ್ಯ ಅವರು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಸಹನಾ ಅವರ ಪತಿ ರೂಬೆನ್ ಮೊಸೆಸ್ ಮತ್ತು ಬಂಧುಗಳಿಗೆ ಸಾಂತ್ವನ ಹೇಳಿದರು.

ಶಾಸಕ ಎಚ್.ಡಿ.ತಮ್ಮಯ್ಯ ಅವರು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಸಹನಾ ಅವರ ಪತಿ ರೂಬೆನ್ ಮೊಸೆಸ್ ಮತ್ತು ಬಂಧುಗಳಿಗೆ ಸಾಂತ್ವನ ಹೇಳಿದರು.

ಚಿಕ್ಕಮಗಳೂರು: ಮೆದುಳು ನಿಷ್ಕ್ರೀಯತೆಗೊಳಗಾಗಿದ್ದ ನಗರದ ಸಮಾಜ ಸೇವಕಿ ಸಹನಾ ಜೋನ್ಸ್ ರೂಬೆನ್ ಅವರ ಅಂಗಾಗಗಳನ್ನು ಸೋಮವಾರ ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಕಸಿ ಮಾಡಿ ಬೆಂಗಳೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಿದರು.

ತಮ್ಮ ಪತಿ ಜಿಲ್ಲಾ ಕಾಂಗ್ರೆಸ್ ಮಾದ್ಯಮ ವಕ್ತಾರ ರೂಬೆನ್ ಮೋಸೆಸ್ ಅವರ ಸಮಾಜ ಸೇವೆಗೆ ಹೆಗಲಾಗಿ ನಿಂತು ಹತ್ತು ಹಲವು ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸಹನಾ ಜೋನ್ಸ್ ಅವರು ಸಾವಿನಲ್ಲೂ ಸಾರ್ಥಕತೆ ಮರೆದರು.

ಸದಾ ಕ್ರಿಯಾಶೀಲರಾಗಿ, ಆರೋಗ್ಯವಾಗಿದ್ದ ಸಹನಾ ಅವರಿಗೆ ಶನಿವಾರ ಬೆಳಗ್ಗೆ ತಲೆನೋವು ಕಾಣಿಸಿಕೊಂಡಿತ್ತು. ವೈದ್ಯರುಪರೀಕ್ಷೆ ಮಾಡಿದಾಗ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿರುವುದು ಕಂಡುಬಂದಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಆವೇಳೆಗಾಗಲೆ ಮೆದುಳು ಸಂಪೂರ್ಣ ನಿಷ್ಕ್ರೀಯತೆಗೊಂಡಿದ್ದ ಹಿನ್ನೆಲೆಯಲ್ಲಿ ವೈದ್ಯರು ಕೈಚೆಲ್ಲಿದ್ದರು.

ಈ ಹಿನ್ನೆಲೆಯಲ್ಲಿ ಪತಿ ರೂಬೆನ್ ಮೋಸೆಸ್ ಹಾಗೂ ಮನೆಯವರು ಸಹನಾ ಅವರ ಅಂಗಾಗ ದಾನಕ್ಕೆ ನಿರ್ಧರಿಸಿದ್ದರು. ಅದರಂತೆ ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ವೈದ್ಯರು ಎಲ್ಲಾ ರೀತಿಯ ಕಾನೂನಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇಂದು ಅಂಗಾಗಕ ಕಸಿ ನಡೆಸಿದರು. ಸಹನಾ ಅವರ ಕಣ್ಣು, ಮೂತ್ರಪಿಂಡ ಹಾಗೂ ಲಿವರ್‌ಗಳನ್ನು ಬೆಂಗಳೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಿದರು.

ಅಂಗಾಗಗಳನ್ನು ಸಾಗಿಸಿದ ಆಂಬುಲೆನ್ಸ್‌ಗಳಿಗೆ ನಗರದಿಂದ ಬೆಂಗಳೂರು ಹಾಗೂ ಮಂಗಳೂರಿನ ವರೆಗೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೇ ಮಾಡಿದ್ದರು.ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳದಲ್ಲೇ ಇದ್ದು ಉಸ್ತುವಾರಿ ನೋಡಿಕೊಂಡರು.

ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಅವರೊಂದಿಗೆ ಇತರೆ ತಜ್ಞ ವೈದ್ಯರುಗಳಾದ ಡಾ.ಪ್ರಶಾಂತ್, ಡಾ.ಚಂದ್ರಶೇಖರ್ ಸಾಲಿಮಠ್, ಡಾ.ಪ್ರಶಾಂತ್, ಡಾ.ಶ್ರೀನಿವಾಸ ಮೂರ್ತಿ, ಅರಿವಳಿಕೆ ತಜ್ಞರಾದ ಸುಶ್ಮ, ಆರ್‌ಎಂಓ ಕಲ್ಪನಾ ಇತರು ಅಂಗಾಗ ಕಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಅವರು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಸಹನಾ ಅವರ ಪತಿ ರೂಬೆನ್ ಮೊಸೆಸ್ ಮತ್ತು ಬಂಧುಗಳಿಗೆ ಸಾಂತ್ವನ ಹೇಳಿದರು. ಸಹನಾ ಅವರು ತಮ್ಮ ಪತಿಯೊಂದಿಗೆ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದರು. ರೋಗಿಗಳಿಗೆ ಸಂತೈಸಿದ್ದರು. ಸಾವಿನಲ್ಲೂ ಅವರು ಸಾರ್ಥಕತೆ ಮೆರೆದಿದ್ದಾರೆ. ಇತರೆ ಐದು ಮಂದಿಗೆ ಅವರು ಜೀವ ನೀಡಿದ್ದಾರೆ. ಅವರಿಗೆ ದೇವರು ಶಾಂತಿ ನೀಡಲಿ ಎಂದರು.

ಸಹನಾ ನಮ್ಮ ಸಮಾಜಕ್ಕೆ ಹೆಮ್ಮೆಯಾಗಿದ್ದರು. ಇದಲ್ಲದೆ ನೋವಿನಲ್ಲಿ ಅಂಗಾಗದಾನ ಮಾಡಲು ನಿರ್ಧರಿಸಿರುವ ಅವರ ಕುಟುಂಬ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಅಂಗಾಂಗ ಕಸಿ ಕಾರ್ಯದಲ್ಲಿ ಯಶಸ್ವಿಯಾಗಿರುವ ಜಿಲ್ಲಾ ಸರ್ಜನ್ ಡಾ.ಮೋಹನ್‌ಕುಮಾರ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿರುವ ನಮ್ಮ ಜಿಲ್ಲೆಯ ವಿದ್ಯಾರ್ಥಿನಿ ರಕ್ಷಿತಾ ಬಾಯಿ ಮತ್ತು ಸಹನಾ ಜೀನ್ಸ್ ಅವರ ಹೆಸರನ್ನು ನೂತನ ಮೆಡಿಕಲ್ ಕಾಲೇಜು ಕಟ್ಟಡದಲ್ಲಿ ಯಾವುದಾದರೂ ಎರಡು ಕೊಠಡಿಗಳಿಗೆ ನಾಮಕರಣ ಮಾಡುವ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

Sahana Jones who has forgotten the meaning even in death

About Author

Leave a Reply

Your email address will not be published. Required fields are marked *

You may have missed