September 20, 2024

ನಗರಸಭೆ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜಿಗೆ ಸಮ್ಮತಿ

0
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆ

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆ

ಚಿಕ್ಕಮಗಳೂರು: ನಗರಸಭೆ ವತಿಯಿಂದ ನಗರದ ಎಂ.ಜಿ.ರಸ್ತೆ ಹಳೆ ತರಕಾರಿ ಮಾರುಕಟ್ಟೆ ಸಮೀಪ ಮತ್ತು ಕೆ.ಎಂ.ರಸ್ತೆಯ ಕತ್ರಿಮಾರಮ್ಮ ದೇವಸ್ಥಾನ ಸಮೀಪ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮೂಲಕ ಬಾಡಿಗೆ ನೀಡಲು ನಗರಸಭೆ ಸದಸ್ಯರು ಸಮ್ಮತಿಸಿದರು.

ಬುಧವಾರ ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸದಸ್ಯರು ಸರ್ವಾನುಮತದ ಒಪ್ಪಿಗೆ ನೀಡಿದರು.

ಎಂ.ಜಿ.ರಸ್ತೆ ಹಳೆ ತರಕಾರಿ ಮಾರುಕಟ್ಟೆ ಸಮೀಪ ನಗರೋತ್ಥಾನ ಹಂತ(೩)ರಡಿಯಲ್ಲಿ ೨೩ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಹಾಗೂ ಕೆ.ಎಂ.ರಸ್ತೆಯ ಕತ್ರಿಮಾರಮ್ಮ ದೇವಸ್ಥಾನ ಎದರು ಲೋಕೋಪಯೋಗಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ನಗರಸಭೆ ನಿಧಿ ಯಲ್ಲಿ ೩೫ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ನಗರಸಭೆ ಅಧಿಕಾರಿ ಸಭೆಯ ಗಮನಕ್ಕೆ ತಂ ದರು.

ಎಂ.ಜಿ.ರಸ್ತೆ ಹಳೆ ತರಕಾರಿ ಮಾರುಕಟ್ಟೆಯಲ್ಲಿ ಈ ಹಿಂದೆ ಇದ್ದಂತಹ ಹಳೆಯ ಮಳಿUಗಳನ್ನು ೧೨ ವರ್ಷಗಳ ಅವಧಿಗೆ ಬಾಡಿಗೆ ನೀಡಲಾಗಿತ್ತು. ಆರು ಮಳಿಗೆ ಬಾಡಿಗೆದಾರರ ಅವಧಿ ಮುಕ್ತಾಯಗೊಳ್ಳುವ ಮುನ್ನ ಮಳಿಗೆಗಳನ್ನು ನೂತನ ಕಟ್ಟಡ ನಿರ್ಮಿಸಲು ಬಾಡಿಗೆದಾರರನ್ನು ತೆರವುಗೊಳಿಸಲಾಗಿತ್ತು. ಆರು ಮಳಿಗೆ ಬಾರಿಗೆದಾರರಾದ ಕೆ.ಎ.ರೆಹಮಾನ್ ಅವರು ಮಳಿಗೆ ಅವಶ್ಯಕತೆವಿಲ್ಲವೆಂದು ಮಳಿಗೆ ಠೇವಣಿ ಹಿಂಪಡೆದಿದ್ದಾರೆ. ಚಿಕ್ಕಮಗಳೂರು ೨ನೇ ಹಂತದ ಸಿವಿಲ್ ನ್ಯಾಯಾಧೀಶರು ಹಿಂದಿನ ಆರು ಮಳಿಗೆ ಬಾಡಿಗೆದಾರರ ಪೈಕಿ ಐದು ಬಾಡಿಗೆದಾರರ ಉಳಿಕೆ ಅವಧಿ ಅಂದರೇ ೫ವರ್ಷ ೨ತಿಂಗಳ ಅವಧಿಗೆ ಈಗೀನ ಠೇವಣಿ ಮತ್ತು ಮಾಸಿಕ ಬಾಡಿಗೆಯನ್ನು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಈ ಹರಾಜು ಅಥವಾ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದರು.

ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಈ ಹಿಂದೆ ೧೨ ವರ್ಷಗಳ ಅವಧಿಗೆ ಮಳಿಗೆಗಳನ್ನು ಬಾಡಿಗೆ ನೀಡಿದ್ದು, ಮಧ್ಯದಲ್ಲಿ ಹಳೆಯ ಮಳಿಗೆಗಳನ್ನು ಕೆಡವಿ ಹೊಸ ಮಳಿಗೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರಿಂದ ಹಿಂದಿನ ಆರು ಜನರ ಮಳಿಗೆ ಬಾಡಿಗೆ ಅವಧಿ ಪೂರ್ಣಗೊಂಡಿಲ್ಲ. ಹಿಂದಿನ ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು. ನಗರಸಭೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಹರಾಜು ಮೂಲಕ ಬಾಡಿಗೆ ನೀಡಲು ನಗರಸಭೆ ಸದಸ್ಯರು ಒಮ್ಮತದ ಒಪ್ಪಿಗೆ ನೀಡಿದರು.

ನಗರಸಭೆ ಸದಸ್ಯ ಲಕ್ಷ್ಮಣ್ ಮಾತನಾಡಿ, ನಗರಸಭೆಯಿಂದ ಈ ಹಿಂದೆ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು. ಈ ವೇಳೆ ನಗರಸಭೆ ಅಧ್ಯಕ್ಷ ಮಾತನಾಡಿ, ಈ ಸಂಬಂಧ ಗುತ್ತಿಗೆದಾರರಿಗೆ ಪತ್ರ ಬರೆದು ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿ ದರು.ಸಭೆಯಲ್ಲಿ ವಿವಿಧ ವಾರ್ಡ್‌ಗಳ ನಗರಸಭೆ ಸದಸ್ಯರು ಇದ್ದರು.

 

Municipal Council approves open auction of commercial shops

 

About Author

Leave a Reply

Your email address will not be published. Required fields are marked *

You may have missed