September 20, 2024

ಶಾಮಿಯಾನ, ಡೆಕೋರೇಟರ್‍ಸ್ ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ

0
ಶಾಮಿಯಾನ, ಡೆಕೋರೇಟರ್‍ಸ್ ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ

ಶಾಮಿಯಾನ, ಡೆಕೋರೇಟರ್‍ಸ್ ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು: ಯಾವುದೇ ಸಭೆ, ಸಮಾರಂಭಗಳು ಯಶಸ್ವಿಯಾಗಬೇಕಾದರೆ ಶಾಮಿಯಾನ, ಡೆಕೋರೇಟ್ಸ್ ಸೌಂಡ್ ಮತ್ತು ಲೈಟಿಂಗ್ ಬಹಾಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಭಿಪ್ರಾಯಿಸಿದರು.

ಅವರು ಇಂದು ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಶಾಮಿಯಾನ, ಡೆಕೋರೇಟರ್‍ಸ್ ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹೂವಿನ ಹಾರ ಮಾಡುವ ಕಲೆ ಅದ್ಭುತ ಕಲೆಯಾಗಿದ್ದು ಅದನ್ನು ಮುಂದುವರೆಸುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಕರೆ ನೀಡಿದ ಅವರು ಶಾಮಿಯಾನ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸಂಘ ಒದಗಿಸಿಕೊಡುವಂತೆ ಸಲಹೆ ನೀಡಿದರು.

ಕಾರ್ಮಿಕ ಇಲಾಖೆಯಲ್ಲಿ ಸಂಘದ ಸದಸ್ಯರನ್ನು ನೊಂದಾಯಿಸಿ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಿ ಹುಟ್ಟಿದಾಗಿನಿಂದ ಸಾಯುವರೆಗೆ ಶಾಮಿಯಾನದ ಅಗತ್ಯವಿದೆ ಆದ್ದರಿಂದ ಹಿಂದೆ ಕೆಲವೇ ಕೆಲವು ಶಾಮಿಯಾನಗಳಿದ್ದವು, ಇತ್ತೀಚೆಗೆ ಸಾಕಷ್ಟು ರೀತಿಯಲ್ಲಿ ಶಾಮಿಯಾನಗಳ ಮಳಿಗೆಗಳನ್ನು ತೆರೆದಿರುವುದು ಶ್ಲಾಘನೀಯ ಎಂದರು.

ನಗರಸಭೆಯಿಂದ ದೊರೆಯಬಹುದಾದ ಎಲ್ಲಾ ಕೆಲಸಗಳನ್ನು ಮಾಡಿಕೊಡುವುದರ ಜೊತೆಗೆ ನಿವೇಶನ-ಮನೆ ನೀಡುವಲ್ಲಿಯೂ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ ಅವರು ಇದರ ಸದುಪಯೋಗವನ್ನು ಶಾಮಿಯಾನ ಮಲೀಕರು, ಕಾರ್ಮಿಕರು ಬಳಿಸಿಕೊಳ್ಳುವಂತೆ ವಿನಂತಿಸಿದರು.

ರಾಜ್ಯ ಸಂಘದ ಸಂಸ್ಥಾಪಕ ಮೆಹಬೂಬ್ ಉಲ್ಲಾ ಮಾತನಾಡಿ ಗಡಿಯಲ್ಲಿ ಯೋಧರು ಮಳೆ, ಗಾಳಿ, ಚಳಿ ಎನ್ನದೆ ದೇಶ ರಕ್ಷಣೆ ಮಾಡಿದಂತೆ ಕಾರ್ಯಕ್ರಮದ ಯಶಸ್ವಿಗಾಗಿ ಇಲ್ಲಿ ಶಾಮಿಯಾನ ಮಾಲೀಕರು-ಕಾರ್ಮಿಕರು ಯೋಧರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪಕ್ಷ, ಜಾತಿ, ಮತ, ಬೇದ ಪಂಥ ಇಲ್ಲದೆ ಕರ್ತವ್ಯ ನಿರ್ವಹಿಸುವ ಶಾಮಿಯಾನ ಕಾರ್ಮಿಕರ ಬಗ್ಗೆ ೨೦೦೪ ರಿಂದ ಸರ್ಕಾರಗಳಿಗೆ ಸಮಸ್ಯೆಗಳ ಕುರಿತು ಮನವಿ ನೀಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ ಅವರು ನಮ್ಮ ಈ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಬರದಿದ್ದರೂ ನಡೆಸುತ್ತೇವೆ. ಜನನಕ್ಕೂ, ಮರಣಕ್ಕೂ ನಾವೇ ಅಗತ್ಯವಾಗಿ ಬೇಕಾಗಿರುವುದರಿಂದ ಸಂಘದ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದರು.

ಕಳೆದ ವರ್ಷ ಉಡುಪಿಯಲ್ಲಿ ನಡೆದ ಸಂಘದ ಮಹಾಧಿವೇಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಸುನಿಲ್‌ಕುಮಾರ್‌ರವರಿಗೆ ಮನವಿ ಮಾಡಿ ಸರ್ಕಾರದ ಯೋಜನೆಯಲ್ಲಿ ಶಾಮಿಯಾನ ವರ್ತಕರ ಬಗ್ಗೆ ಉಲ್ಲೇಖ ಮಾಡಿ ಎಂದು ಹೇಳಿದ್ದೆವು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಿಷಾಧಿಸಿದರು.

ಒಂದೇ ವೇದಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಸೇರಿಸಿ ಮುಂದಿನ ಮಹಾಧಿವೇಶನವನ್ನು ಮೈಸೂರಿನಲ್ಲಿ ಆಯೋಜಿಸಿ ನಮ್ಮ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ನಿರ್ಧರಿಸಲಾಗಿದೆ ಇದರಲ್ಲಿ ಚಿಕ್ಕ ಚಿಕ್ಕ ಅಂಗಡಿಗಳನ್ನು ಸಂಘದಲ್ಲಿ ನೊಂದಾಯಿಸಿಕೊಳ್ಳಲಾಗುವುದೆಂದು ಹೇಳಿದರು.

ಹಬ್ಬ ಹರಿದಿನಗಳಲ್ಲಿ ಡಿ.ಜೆ ಸೌಂಡ್ ಸಿಸ್ಟಮ್‌ಗಳಿಂದ ಶಬ್ದ ಮಾಲಿನ್ಯ ಉಂಟುಮಾಡುತ್ತಿರುವುದು ಸರಿಯಲ್ಲ ಈ ಬಗ್ಗೆ ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದರೆ ನಡೆಯುವುದಿಲ್ಲ ಆದ್ದರಿಂದ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದು ಚುನಾಯಿತ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ಸಂಘದ ರಾಜ್ಯಾಧ್ಯಕ್ಷ ಆರ್.ಲಕ್ಷ್ಮಣ್ ಮಾತನಾಡಿ ಸಂಘದ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕ ಮಕ್ಕಳಿಗೆ ನಗರಸಭೆ ವತಿಯಿಂದ ದೊರೆಯಬಹುದಾಗಿ ಕ್ಯಾಮರಾ, ಕಂಪ್ಯೂಟರ್ ನಿವೇಶನ, ಮನೆ ಮುಂತಾದ ಸೌಲಭ್ಯಗಳನ್ನು ಒದಗಿಸುವಂತೆ ನಗರಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಸದಾಶಿವ. ಮಾತನಾಡಿ ಶಾಮಿಯಾನ, ಡೆಕೋರೇಟರ್‍ಸ್, ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಸಂಘ ೨೦೧೭ನೇ ಇಸವಿಯಲ್ಲಿ ಪ್ರಾರಂಭವಾಗಿದ್ದು, ೨೦೧೮ ರಲ್ಲಿ ಅಧಿಕೃತವಾಗಿ ಸಕ್ರಿಯವಾಗಿ ಸಂಘಟಿತವಾಗಿ ೫ ವರ್ಷಗಳನ್ನು ಪೂರೈಸಲಾಗಿದೆ ಹಾಗೂ ೨೦೦ ಸದಸ್ಯರನ್ನು ಒಳಗೊಂಡಿದೆ, ಸಂಘದ ಎಲ್ಲಾ ಸದಸ್ಯರು ಕೋವಿಡ್ ಸಂದರ್ಭದಲ್ಲಿ ಹಾಗೂ ೩ ತಿಂಗಳ ಹಿಂದೆ ಮಲ್ಲಂದೂರು ರಸ್ತೆಯಲ್ಲಾದ ವಿದ್ಯುತ್ ಅವಗಡದಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರಕ್ಕಾಗಿ ಸಣ್ಣ ಮೋತ್ತದ ಕರವನ್ನು ಸಂಗ್ರಹಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿ.ಜೆ, ಕಾಂಗ್ರೆಸ್ ನಗರಾಧ್ಯಕ್ಷ ತನೂಜ್‌ಕುಮಾರ್ ಶಾಮಿಯಾನ, ಡೆಕೋರೇಟರ್‍ಸ್, ಸೌಂಡ್ಸ್ ಮತ್ತು ಲೈಟ್ಸ್ ಮಾಲೀಕರ ಜಿಲ್ಲಾಧ್ಯಕ್ಷ ನಾಸಿರ್ ಕೊಪ್ಪ, ಗೌರವಾಧ್ಯಕ್ಷ ಚಂದ್ರು, ಉಪಾಧ್ಯಕ್ಷ ರಾಜೇಗೌಡ, ಪ್ರಧಾನ ಕಾರ್ಯದರ್ಶಿ ಆನಂದ್, ಸಹಕಾರ್ಯದರ್ಶಿ ರವಿಕುಮಾರ್, ಖಜಾಂಚಿ ವಿವಿಲ್‌ಬೆನ್ನಿಸ್, ಸಲಹೆಗಾರ ಪುನೀತ್‌ಕುಮಾರ್, ಸಂಚಾಲಕರಾದ ತಬ್ರೇಜ್, ರಮೇಶ್, ನಿರ್ದೇಶಕರುಗಳಾದ ಪರಶುರಾಮ್ ಜೋಷಿ, ಪಿ.ಆರ್.ಕುಮಾರ್, ನಟರಾಜ್, ಮಂಜುನಾಥ್, ಮೂರ್ತಿ, ಕೊದಂಡರಾಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Shamiana, Decorators Sounds and Lights Owners Association

About Author

Leave a Reply

Your email address will not be published. Required fields are marked *

You may have missed