September 19, 2024

ಗುಂಡಿನಮ್ಮ ದೇವಸ್ಥಾನದ ಜಾಗ ಅನ್ಯ ಉದ್ದೇಶಕ್ಕೆ ಬಳಕೆ ವಿರೋಧಿಸಿ ಮನವಿ

0
Petition against the use of Gundinamma temple space for other purposes

Petition against the use of Gundinamma temple space for other purposes

ಚಿಕ್ಕಮಗಳೂರು:  ನಗರದ ಹೊಸಮನೆ ಬಡಾವಣೆಯ ಗುಂಡಿನಮ್ಮ ದೇವಸ್ಥಾನ ಮತ್ತು ಇದಕ್ಕೆ ಸಂಬಂಧಿಸಿದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಹೊರಟಿರುವುದನ್ನು ವಿರೋಧಿಸಿ ನಿವೇಶನವನ್ನು ದೇವಸ್ಥಾನಕ್ಕೆ ಉಳಿಸಲು ಒತ್ತಾಯಿಸಿ ಇಂದು ಭಕ್ತರು ಹಾಗೂ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕ ರಡ್ಡಿಯವರಿಗೆ ಮನವಿ ನೀಡಿದರು.

ಹೊಸಮನೆ ಬಡಾವಣೆಯಲ್ಲಿ ಗುಂಡಿನಮ್ಮ ಎಂಬ ದೇವಸ್ಥಾನವಿದ್ದು ಸದರಿ ದೇವಸ್ಥಾನದಲ್ಲಿ ಪ್ರತಿನಿತ್ಯ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಈ ದೇವಸ್ಥಾನವು ತುಂಬಾ ಹಳೆಯ ದೇವಸ್ಥಾನವಾಗಿದ್ದು ಇತ್ತೀಚೆಗೆ ಸಾರ್ವಜನಿಕರ ನೆರವಿನೊಂದಿಗೆ ಮತ್ತು ಧರ್ಮಸ್ಥಳ ಧರ್ಮಾಧಿಕಾರಿಗಳ ಆಶೀರ್ವಾದ ಭಕ್ತರ ನೆರವಿನೊಂದಿಗೆ ಹೊಸ ಕಟ್ಟಡವನ್ನು ಕಟ್ಟಿ ದೇವರ ವಿಗ್ರಹವನ್ನು ಪುನರ್ ಪ್ರತಿಸ್ಥಾಪನೆ ಮಾಡಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಈ ಗುಂಡಿನಮ್ಮ ದೇವಸ್ಥಾನವು ದೋಣಿಕಣದಲ್ಲಿರುವ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ಆಗುವ ಎಲ್ಲಾ ಉತ್ಸವಗಳಲ್ಲಿ ಬಾಗಿಯಾಗುತ್ತಾ ಬಂದಿದ್ದು ಇದೂ ಅಲ್ಲದೇ ಹೊಸಮನೆ ಬಡಾವಣೆ, ಜಯನಗರ ಬಡಾವಣೆ, ವಿಜಯನಗರ ಬಡಾವಣೆ ಮತ್ತು ಚಿಕ್ಕಮಗಳೂರು ನಗರದ ಎಲ್ಲಾ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದು ದೇವತೆಯನ್ನು ಆರಾಧಿಸಿ ಅದರ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಿದ್ದಾರೆ ಎಂದಿದ್ದಾರೆ.

ಇದರಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಚಿಕ್ಕಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಸಂಜೆ ವೇಳೆ ಹಾಜರಾಗಿ ಪೂಜೆಯನ್ನು ಸಲ್ಲಿಸುವ ಕ್ರಮವಿರುತ್ತದೆ. ಸದರಿ ದೇವಸ್ಥಾನಕ್ಕೆ ಎಂ.ಎ.ನಂ೨೫೯೭/೨೫೯೭ ಇದರ ಅಳತೆ ೪೦x೮೦ ಮತ್ತು ೨೬ ಳಿ x ೧೬ ಅಡಿ ಜಾಗವೂ ಸಹ ಇರುತ್ತದೆ.

ಇದಲ್ಲದೇ ದೇವಸ್ಥಾನದ ಎದುರುಭಾಗದಲ್ಲಿ ದೇವಸ್ಥಾನದ ಉತ್ಸವಾದಿಗಳಿಗೆ ಖಾಲಿ ಜಾಗವನ್ನು ನಗರಸಭೆಯವರು ನಂ.೧೦ ದಿನಾಂಕ ೨೮/೦೩/೧೯೩೨ ರಲ್ಲಿ ಮಂಜೂರು ಮಾಡಿದ್ದು ಈ ಜಾಗವು ದೇವಸ್ಥಾನದ ಜಾತ್ರೆ ಮತ್ತು ಉತ್ಸವಗಳಿಗೆ ಮೀಸಲಾಗಿಟ್ಟಿರುವ ಜಾಗವಾಗಿ ಅಲ್ಲದೇ ಇದೇ ಜಾಗದಲ್ಲಿ ಅನ್ನಸಂತರ್ಪಣೆಯನ್ನು ಕೂಡ ಸಾರ್ವಜನಿಕರಿಗೆ ಪ್ರತಿ ವರ್ಷ ಮಾಡಲಾಗುತ್ತದೆ ಎಂದು ತಿಳಿಸಿದರು.

ಶ್ರೀ ಗುಂಡಿನಮ್ಮ ದೇವಸ್ಥಾನದ ಎದುರಿಗಿರುವ ಮತ್ತು ದೇವಸ್ಥಾನಕ್ಕೆ ಸೇರಿರುವ ಖಾಲಿ ಜಾಗಕ್ಕೆ ಆ.೧೫ ರಂದು ಗಾಂಧಿಪಾರ್ಕ್ ಎಂಬುದಾಗಿ ನಾಮಕರಣ ಮಾಡಲು ಹೊರಟಿರುವುದಾಗಿ ತಿಳಿದುಬಂದಿದೆ. ಈ ರೀತಿ ಮಾಡುವುದಕ್ಕೆ ಹೊಸಮನೆ ಗ್ರಾಮದ ಗ್ರಾಮಸ್ಥರು ಮತ್ತು ಗುಂಡಿನಮ್ಮ ಭಕ್ತಾಧಿಗಳ ವಿರೋಧ ಇದ್ದು ಈ ಜಾಗವು ದೇವಸ್ಥಾನದ ಜಾತ್ರಾ ಮತ್ತು ಉತ್ಸವಾದಿಗಳಿಗೆ ಹೊರತು ಬೇರೆ ಕಾರ್ಯಕ್ಕೆ ಬಳಸುವಂತಿಲ್ಲ ಎಂದು ಹೇಳಿದ್ದಾರೆ.

ಇದನ್ನು ಮೀರಿ ಪಾರ್ಕ್‌ಗೆ ಜಾಗವನ್ನು ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಹೊಸಮನೆ ಗ್ರಾಮಸ್ಥರು ಮತ್ತು ಗುಂಡಿನಮ್ಮ ಭಕ್ತಾಧಿಗಳು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಹೊಸಮನೆ ಗ್ರಾಮಸ್ಥರಾದ ಹನುಮಂತಣ್ಣ, ನಾಗೇಶ್, ಜನ್ನಿಕ್ಲಾಸ್ ಡೇವಿಡ್, ಸುರೇಶ್.ಸಿ.ಟಿ, ವಸಂತ್‌ಕುಮಾರ್, ಪ್ರಶಾಂತ್, ಕುಮಾರ್, ರಾಜೇಶ್, ವಿನಯ್ ಕುಮಾರ್, ರಾಹುಲ್, ಯಶವಂತ್, ಚಿನ್ನಯ್ಯ, ನವೀನ್, ಪ್ರದೀಪ್, ಪುನಿತ್, ಮೆಲ್ಪ್‌ನ್ ಪಿಂಟೊ, ದಿನೇಶ್, ರವಿ, ಅನಿಲ್‌ಕುಮಾರ್, ರಘು, ಕಾರ್ತಿಕ್, ಕೃಷ್ಣ, ಪ್ರಮೋದ್, ಸುನಿಲ್‌ಕುಮಾರ್, ಸಚಿನ್, ನಾಗಮ್ಮ, ಅನಿಲ್, ಚಂದ್ರಶೇಖರ್, ಸೀಮ, ಅನಿಲ್, ಸುನೀಲ್‌ಶರಣ್, ಹನುಮೇಗೌಡ, ಧರ್ಮಲಿಂಗೇಗೌಡ, ನಾಗರತ್ನ, ಪದ್ಮಾವತಿ, ನವೀನ್, ಚಂದ್ರಪ್ಪ, ರೇಖಾ, ಸೋಮಶೇಖರ, ರಾಹುಲ್ ಮತ್ತಿತರರಿದ್ದರು.

Petition against the use of Gundinamma temple space for other purposes

About Author

Leave a Reply

Your email address will not be published. Required fields are marked *

You may have missed