September 19, 2024

ಜನರ ಬೇಡಿಕೆಗೆ ಅನುಸಾರವಾಗಿ ನಗರ ಸಾರಿಗೆ ಬಸ್ ಸಂಚಾರ ಆರಂಭ

0
ಹಿರೇಮಗಳೂರು ಗ್ರಾಮದ ಸಮೀಪ ಅಂಬೇಡ್ಕರ್ ವೃತ್ತದಿಂದ ನಗರ ಸಾರಿಗೆ ಬಸ್‌ಗೆ ಚಾಲನೆ

ಹಿರೇಮಗಳೂರು ಗ್ರಾಮದ ಸಮೀಪ ಅಂಬೇಡ್ಕರ್ ವೃತ್ತದಿಂದ ನಗರ ಸಾರಿಗೆ ಬಸ್‌ಗೆ ಚಾಲನೆ

ಚಿಕ್ಕಮಗಳೂರು: ನುಡಿದಂತೆ ನಡೆದು ಜನಪರ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

ಅವರು ನಿನ್ನೆ ಹಿರೇಮಗಳೂರು ಗ್ರಾಮದ ಸಮೀಪ ಅಂಬೇಡ್ಕರ್ ವೃತ್ತದಿಂದ ನಗರ ಸಾರಿಗೆ ಬಸ್‌ಗೆ ಚಾಲನೆ ನೀಡಿ ಚಿಕ್ಕಕುರುಬರಹಳ್ಳಿ, ಬೈಪಾಸ್, ನರಿಗುಡ್ಡನಹಳ್ಳಿ ಹಾಗೂ ದೊಡ್ಡಕುರುಬರಹಳ್ಳಿ ಮಾರ್ಗವಾಗಿ ಪವಿತ್ರವನದವರೆಗೂ ಬಸ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ ಮೇರೆಗೆ ಹಿರೇಮಗಳೂರು, ಕಲ್ಯಾಣ ನಗರ, ಎಐಟಿ ವೃತ್ತ ಮಾರ್ಗವಾಗಿ ಗೃಹಮಂಡಳಿ ಬಡಾವಣೆ, ಪವಿತ್ರವನದಿಂದ ನಗರಕ್ಕೆ ವಾಪಸ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಸಂಚಾರ ಆರಂಭಿಸಲಾಗಿದೆ ಎಂದರು.

ಈ ಭಾಗದ ನಾಗರೀಕರು ಮತ್ತು ಮಹಿಳೆಯರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಬೇಡಿಕೆ ಇತ್ತು, ಇದನ್ನು ಗಂಭೀರವಾಗಿ ಪರಿಗಣಿಸಿ ಈಗ ಬಸ್ ಸೇವೆಯನ್ನು ಆರಂಭಿಸಿದ್ದು, ಇದರ ಸದುಪಯೋಗಪಡಿಕೊಳ್ಳುವಂತೆ ವಿನಂತಿ ಮಾಡಿದ ಅವರು ಬೆಳಗ್ಗೆ ಒಂದು ಬಾರಿ ಹಾಗೂ ಸಂಜೆ ಒಂದು ಬಾರಿ ಈ ನಗರ ಬಸ್ ಸಂಚಾರ ಇರುತ್ತದೆ ಎಂದು ತಿಳಿಸಿದರು.

ಸಧ್ಯದಲ್ಲೇ ನಗರ ಬಸ್ ಸಂಚಾರದ ಸಮಯವನ್ನು ನಿಗಧಿ ಮಾಡಿ ಕೆಲವು ಭಾಗದಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು, ನಾಗರೀಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರ ಗಮನಕ್ಕೆ ತಂದು ವೇಳಾಪಟ್ಟಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಹಿಂದೆ ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಈ ಭಾಗಕ್ಕೆ ನಗರ ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಆರಂಭಿಸಿದ್ದು ಕೊರೋನಾ ಕಾರಣದಿಂದ ಇದು ಸ್ಥಗಿತವಾಗಿತ್ತು ಈಗ ಪುನಃ ಜನರ ಸಹಕಾರ, ಆಶೀರ್ವಾದದ ಫಲವಾಗಿ ಶಾಸಕನಾಗಿದ್ದು ಪುನಃ ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ನಗರ ಬಸ್ ಸಂಚಾರ ಆರಂಭಿಸಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.

ನಗರ ದಿನೇ ದಿನೇ ಬೆಳೆಯುತ್ತಿದ್ದು ಈಗ ಪ್ರಾಯೋಗಿಕವಾಗಿ ಬೆಳಗ್ಗೆ ಸಾಯಂಕಾಲ ಬಸ್ ಸೇವೆ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲಾಗುವುದೆಂದು ಭರವಸೆ ನೀಡಿದರು.

ಗ್ರಾಮೀಣ ಭಾಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುತ್ತಿದ್ದು ಈ ಬಗ್ಗೆ ಗಮನ ಸೆಳೆದಾಗ ಈಗಾಗಲೇ ಅದಕ್ಕೆ ವೆಟ್‌ಮಿಕ್ಸ್ ಹಾಕಿ ರೋಲರ್ ಹೊಡೆದು ಸಮತಟ್ಟು ಮಾಡಲಾಗಿದೆ ಹಿಂದೆ ಜೈಲ್ ನಿವೇಶನವನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಕೊಡುವಾಗ ವ್ಯವಸ್ಥೆ ಸರಿಪಡಿಸಿಲ್ಲ ಹಾಗಂತ ಅವರನ್ನು ದೂರದೆ ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿರುವುದರಿಂದ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿಲ್ಲ ಮುಂದಿನ ಬಜೆಟ್‌ನಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ವಿಶೇಷ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಹಾಸನ ಮಾದರಿ ಬಸ್ ನಿಲ್ದಾಣ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ಅಷ್ಟು ದೊಡ್ಡ ಜಾಗ ನಗರದಲ್ಲಿ ಲಭ್ಯವಿಲ್ಲ ಇರುವುದರಲ್ಲೇ ನೀಲಿ ನಕಾಶೆ ತಯಾರಿಸಿ, ಸುಂದರವಾದ ಬಸ್ ನಿಲ್ದಾಣ ನಿರ್ಮಾಣ ಮಾಡಲು ಬದ್ದರಾಗಿದ್ದೇವೆ ಎಂದರು.

ಈ ಕಾರ್ಯಕ್ರಮ ಆಯೋಜನೆ ಮಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ, ಮುಖಂಡರಾದ ಜಗದೀಶ್, ಅಣ್ಣಯ್ಯ, ಮೋಹನ್, ಸುರೇಶ್ ಸೇರಿದಂತೆ ಎಲ್ಲರನ್ನೂ ಸ್ಮರಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಲು ಸಹಕರಿಸಿದ ಎಲ್ಲರಿಗೂ ವಂದಿಸಿದರು.

 

As per the demand of the people, city transport bus service started

About Author

Leave a Reply

Your email address will not be published. Required fields are marked *

You may have missed