September 17, 2024

ದಲಿತ ಕುಟುಂಬಗಳ ಜಮೀನು ಉಳಿಸಲು ದ.ಸಂ.ಸ ಆಗ್ರಹ

0
ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಸುದ್ದಿಗೋಷ್ಠಿ

ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಸುದ್ದಿಗೋಷ್ಠಿ

ಚಿಕ್ಕಮಗಳೂರು: ನಗರದ ಗವನಹಳ್ಳಿ ಸ.ನಂ.೯೨ರಲ್ಲಿ ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಜಮೀನನ್ನು ಮೂಲ ಮಂಜೂರಾತಿ ಆದೇಶದನ್ವಯ ಮಂಜೂರುದಾರರಿಗೆ ಉಳಿಸುವಂತೆ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದೇ ಸರ್ವೆ ನಂಬರ್‌ನಲ್ಲಿ ಭೂಮಿಯನ್ನು ಸ.ನಂ. ೯೩ಕ್ಕೆ ಬದಲಾಯಿಸಿ ಮಾಡಿಕೊಂಡಿರುವ ಪಹಣೆಯನ್ನು ರದ್ದುಮಾಡಿ ಸರ್ಕಾರಿ ಜಮೀನಾಗಿ ಉಳಿಸಿ ಪರಿಶಿಷ್ಠ ಜನಾಂಗದ ಬಹುದಿನಗಳ ಬೇಡಿಕೆಯಂತೆ ಸಮಾಜದ ಬಳಕೆಗೆ ಸಾರ್ವಜನಿಕ ಉದ್ದೇಶಕ್ಕೆ ಮಂಜೂರು ಮಾಡಿ ಬುದ್ದವಿಹಾರ ನಿರ್ಮಾಣ ಮಾಡಲು ಸಹಕರಿಸಬೇಕೆಂದು ಆಗ್ರಹಿಸಿದರು.

ಅತ್ಯಂತ ದೊಡ್ಡ ಸಮುದಾಯವಾಗಿರುವ ಪರಿಶಿಷ್ಠ ಜನಾಂಗದ ಸಮುದಾಯಗಳು ತಮ್ಮ ಸಮಾಜದ ಯಾವುದೇ ಕಾರ್ಯಕ್ರಮಗಳಿಗೆ ತಮ್ಮದೇ ಆದ ಜಮೀನು ಇಲ್ಲದೆ ಇರುವುದರಿಂದ ಸಮಾಜಕ್ಕೆ ಸ್ವಂತ ಜಮೀನು ನೀಡುವಂತೆ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ, ಈ ವರೆಗೂ ಯಾವುದೇ ಸರ್ಕಾರಗಳು ಈ ಜನಾಂಗದ ಉಪಯೋಗಕ್ಕಾಗಿ ಜಮೀನು ನೀಡಲು ಕ್ರಮ ಕೈಗೊಂಡಿರುವುದಿಲ್ಲ ಎಂದು ದೂರಿದರು.

ಮಠ-ಮಾನ್ಯಗಳು ಮೇಲು ವರ್ಗದ ಸಮಾಜಗಳಿಗೆ ಸರ್ಕಾರ ಅನೇಕ ಕಡೆಗಳಲ್ಲಿ ಜಮೀನು ನೀಡಿದ್ದು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪರಿಶಿಷ್ಠ ಜನಾಂಗದ ಸಮಾಜಕ್ಕೆ ಜಮೀನು ನೀಡಬೇಕೆಂಬ ಬೇಡಿಕೆಯನ್ನು ಎಲ್ಲಾ ಸರ್ಕಾರಗಳೂ ಕಡೆಗಣಿಸುತ್ತಲೇ ಬಂದಿವೆ ಎಂದು ವಿಷಾಧಿಸಿದರು.

ದಲಿತ ಕುಟುಂಬಗಳಿಗೆ ಗವನಹಳ್ಳಿ ಸರ್ವೆನಂ. ೯೨ರಲ್ಲಿ ಮಂಜೂರಾಗಿರುವ ಮೂಲ ಕಡತದ ದಾಖಲೆಯ ಪ್ರಕಾರ ನಾಲ್ಕು ಕುಟುಂಬಗಳಿಗೆ ಮಂಜೂರಾಗಿರುವಷ್ಟು ಪೂರ್ಣ ಪ್ರಮಾಣದ ಅಂದರೆ ೧೨ ಎಕೆರೆ ಜಮೀನು ಖಾಲಿ ಇರುತ್ತದೆ. ಆದರೆ ದಲಿತ ಕುಟುಂಬಗಳ ಖಾಲಿ ಜಮೀನನ್ನು ಖರೀದಿ ಮಾಡಲು ಒಪ್ಪಂದ ಮಾಡಿ ಕೊಂಡಿರುವ ವ್ಯಕ್ತಿಗಳು ಪಕ್ಕದ ಸರ್ವೆ ನಂಬರ್ ೯೩ರ ಸರ್ಕಾರಿ ಜಮೀನನ್ನು ಸ್ಥಳ ಬದಲಾವಣೆ ಮಾಡಿಕೊಂಡು ಸರ್ವೆ ನಂಬರ್ ೯೨ ರಲ್ಲಿ ಜಮೀನು ಖಾಲಿ ಉಳಿಸಿ ಕೊಂಡು ತಾವು ಖರೀದಿ ಮಾಡುವ ಜಮೀನಿನ ಜೊತೆ ಸೇರಿಸಿಕೊಂಡು ಸರ್ಕಾರಿ ಜಾಗವನ್ನು ಬಳಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಹುಣಸೆಮಕ್ಕಿ ಲಕ್ಷ್ಮಣ್, ಸಂತೋಷ್ ಲಕ್ಯಾ, ಸೋಮಣ್ಣ ಮತ್ತಿತರರು ಇದ್ದರು.

Dasamsa demand to save the land of dalit families

 

About Author

Leave a Reply

Your email address will not be published. Required fields are marked *

You may have missed