September 19, 2024

ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿಕೊಳ್ಳಲು ದೇಶಾದ್ಯಂತ ಸ್ವಾತಂತ್ರೋತ್ಸವ ಆಚರಣೆ

0
ನಗರಸಭಾ ಕಛೇರಿ ಆವರಣದಲ್ಲಿ ೭೭ನೇ ಸ್ವಾತಂತ್ರೋತ್ಸವ

ನಗರಸಭಾ ಕಛೇರಿ ಆವರಣದಲ್ಲಿ ೭೭ನೇ ಸ್ವಾತಂತ್ರೋತ್ಸವ

ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿಕೊಳ್ಳಲು ಇಂದು ದೇಶಾದ್ಯಂತ ಸ್ವಾತಂತ್ರೋತ್ಸವವನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಲಾಗುತ್ತಿದೆ ಎಂದು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ನಗರಸಭಾ ಕಛೇರಿ ಆವರಣದಲ್ಲಿ ೭೭ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣಾ ನೆರವೇರಿಸಿ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿದರು.

ಗಡಿಭಾಗದಲ್ಲಿ ಪ್ರತಿದಿನ ಜೀವದ ಹಂಗುತೊರೆದು ನಮ್ಮನ್ನು ರಕ್ಷಿಸುತ್ತಿರುವ ಯೋಧರು ಹಾಗೂ ನಾಡಿನ ದೇಶದ ಜೀವ ನಾಡಿಯಾಗಿರುವ ರೈತರನ್ನು ನೆನೆದು ಅವರಿಗೆ ಗೌರವ ಸೂಚಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗ ಬೇಕೆಂದು ಹೇಳಿದರು.

ಜಮ್ಮು ಕಾಶ್ಮೀರವನ್ನು ಆರ್ಟಿಕಲ್ ೩೭೦ ಯಿಂದ ಮುಕ್ತಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರ ಶ್ರಮ ಶ್ಲಾಘನೀಯ ಇದರ ಪರಿಣಾಮವಾಗಿ ಆ ಪ್ರದೇಶಗಳಿಗೆ ಎಲ್ಲರು ಮುಕ್ತವಾಗಿ ಹೋಗಲು ಸಾಧ್ಯವಾಗಿದೆ ಎಂದರು.

ನಗರದ ನಾಗರೀಕರ ಆರೋಗ್ಯ ಕಾಪಾಡುವಲ್ಲಿ ನಗರಸಭೆ ಪೌರ ಕಾರ್ಮಿಕರು ಪ್ರಮುಖ ಪಾತ್ರವಹಿಸಿದ್ದಾರೆ ನಗರಸಭೆಯಲ್ಲಿ ಹೊಸ ಆಡಳಿತ ವ್ಯವಸ್ಥೆ ಬಂದ ನಂತರ ಸ್ವಚ್ಛತೆ ಆಧ್ಯತೆನಾಡಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ ಬ್ರಿಟೀಷರ ಆಳ್ವಿಕೆಯಿಂದ ಮುಕ್ತಗೊಳಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಪು ಮಾಡಿಕೊಂಡು ಅವರ ಆದರ್ಶಗಳ ಪ್ರಸ್ತುತ ಸಮಾಜಕ್ಕೆ ದಾರಿ ದೀಪವಾಗಬೇಕೆಂದು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಕೇವಲ ೧ ದಿನಕ್ಕೆ ಸೀಮಿತವಾಗಿದೆ ಪ್ರತಿದಿನವೂ ಆಚರಿಸುತ್ತಾ ಎಲ್ಲರು ಸ್ವತಂತ್ರರಾಗಿ ಬದುಕು ರೂಪಿಸಿಕೊಳ್ಳಬೇಕು ವಯಕ್ತಿಕ ಬದುಕಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಎ.ಸಿ.ಕುಮಾರೇಗೌಡ, ವಿ.ಟಿ.ಕುಮಾರ್, ಶೀಲಾದಿನೇಶ್, ಶಾದಬ್ ಅಲಂ ಖಾನ್, ಲಕ್ಷ್ಮಣ ವಿಫುಲ್ ಕುಮಾರ್ ಜೈನ್, ಸಿ.ಪಿ.ಲಕ್ಷ್ಮಣ ಇತರರು ಉಪಸ್ಥಿತರಿದ್ದರು.

77th Independence Day Celebration at Nagar Sabha Office Premises

About Author

Leave a Reply

Your email address will not be published. Required fields are marked *

You may have missed