September 19, 2024

ಕೊತ್ವಾಲ್ ರಾಮಚಂದ್ರನ ಶಿಷ್ಯ ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ

0
ಮಾಜಿ ಶಾಸಕ ಸಿ.ಟಿ.ರವಿ

ಮಾಜಿ ಶಾಸಕ ಸಿ.ಟಿ.ರವಿ

ಚಿಕ್ಕಮಗಳೂರು: ನಾನು ಸಂಘದ ಸ್ವಯಂಸೇವಕ ಕೊತ್ವಾಲ್ ರಾಮಚಂದ್ರನ ಶಿಷ್ಯ. ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ತಿಳಿಸಿದರು

ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅವರದ್ದು ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಅಂತ ನನಗೆ ಭಯ. ಅದಕ್ಕಾಗಿ ರಕ್ಷಣೆಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೇನೆ’ ’ಸಿ.ಟಿ.ರವಿಗೆ ಟ್ರೀಟ್ಮೆಂಟ್ ಅಗತ್ಯವಿದೆ’ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಅವರು ದೇಶದ ಶ್ರೀಮಂತ ಶಾಸಕ. ಅವರ ಬಳಿ ಬೆಂಗಳೂರು ಅಭಿ ವೃದ್ದಿ, ಉಸ್ತುವಾರಿ, ನೀರಾವರಿ ಎಲ್ಲ ಇದೆ. ನಾನು ಸೋತ್ತಿದ್ದೇನೆ. ಅವರು ಗೆದ್ದಿದ್ದಾರೆ. ಅಧಿಕಾರದ ಮದ ಏರಿದೆ. ಅಧಿಕಾರದ ಅಹಃ ಭಾವದಿಂದ ಎಲ್ಲೆರಿಗೂ ಟ್ರೀಟ್ಮೆಂಟ್ ಕೊಡುವ ಹುಮ್ಮಸ್ಸು ಬಂದಿರಬೇಕು.

ನಾನು ಸೋತಿರುವ ಸಾಮಾನ್ಯ ಕಾರ್ಯಕರ್ತನಾಗಿದ್ದು, ನನ್ನನ್ನು ಟಾರ್ಗೆಟ್ ಮಾಡಿದರೇ ಸಿ.ಎಂ.ಆಗಲು ಆಗಲ್ಲ. ನೀವು ಸಿ.ಎಂ. ಆಗಲು ಬೇರೆಯವರನ್ನು ಟಾರ್ಗೆಟ್ ಮಾಡಬೇಕು. ನನ್ನನ್ನು ಏಕೆ ಟಾರ್ಗೆಟ್ ಮಾಡ್ತಿರ ಎಂದರು.

ಲೋಕಸಭೆ ಚುನಾವಣೆ ಹೊತ್ತಿಗೆ ರಾಜ್ಯ ಸರ್ಕಾರ ಬೀಳಬಹುದು, ನನಗೆ ಭವಿಷ್ಯ ಹೇಳಲು ಬರುವುದಿಲ್ಲ. ಯತ್ನಳ್ ಅವರಿಗೆ ನಿಖರ ಮಾಹಿತಿ ಇರಬಹುದು. ಒಳ ಆಕ್ರೋಶ ಸ್ಪೋಟಗೊಂಡು ಸರ್ಕಾರ ಬಿದ್ದರೂ ಬೀಳಬಹುದು ಎಂದು ಹೇಳಿದರು.

ಅಸಹನೆಯ ಆಕ್ರೋಶಕ್ಕೆ ತುತ್ತಾಗಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿದ್ದರೂ ಬೀಳಬಹುದು, ಗ್ರಾಮ ಪಂಚಾಯತ್‌ನಂತೆ ಮುಖ್ಯಮಂತ್ರಿಗಳ ಹಂಚಿಕೆಯಾಗಿದೆ ಎಂಬ ಮಾಹಿತಿ ಇದೆ. ಸರ್ಕಾರ ಬಂದು ಮೂರು ತಿಂಗಳಾಗಿಲ್ಲ. ಈಗಾಗಲೇ ೩೦ ಶಾಸಕರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಪತ್ರಕ್ಕೆ ಬೆಲೆ ಇಲ್ಲ. ದಲ್ಲಾಳಿಗಳ ಮೂಲಕ ಕೆಲಸ ಆಗುತ್ತಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನು ಗಮನಿಸಿದಾಗ ರಾಜ್ಯ ಸರ್ಕಾರದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ಕೊಡುತ್ತದೆ ಎಂದು ಹೇಳಿದರು.

ಸರ್ಕಾರಕ್ಕೆ ಒಂದೆರೆಡು ತಿಂಗಳಲ್ಲಿ ಜನಾಕ್ರೋಶ ನಿರ್ಮಾಣ ಆಗಲ್ಲ. ಉಚಿತ ಕರೆಂಟ್ ಜೊತೆಗೆ ಪವರ್ ಕಟ್ ಕೊಡುಗೆಯನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರಲ್ಲಿ ಅಸಹನೆ ನಿರ್ಮಾಣ ಆಗುತ್ತದೆ. ಆ ಆಕ್ರೋಶ ಎಂತಹ ಬಲಾಢ್ಯರನ್ನು ಬಲಿ ತಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಸಮಾನ ನಾಗರಿಕ ಸಂಹಿತೆ ಕುರಿತು ಪ್ರತಿಕ್ರಯಿಸಿ, ನಾವು ಜಾತ್ಯಾತೀತವಾಗಿ ಎಲ್ಲರೂ ಸಮಾನರು ಎಂದು ಹೇಳುತ್ತೇವೆ. ಸಂವಿಧಾನ ಪೀಠಕೆಯಲ್ಲೂ ಸಮಾನತೆಯ ಪ್ರಸ್ತಾಪವಿದೆ. ಕಾನೂನು ಒಂದು ಕೋಮಿಗೆ ಒಂದು ಮತ್ತೊಂದು ಕೋಮಿಗೆ ಒಂದು ಇರಬೇಕು. ಏಕ ಸಮಾನವಾಗಿ ಇರಬೇಕು ಎಂದು ಅಭಿಪ್ರಾಯಿಸಿದರು.

ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ನಿಟ್ಟಿನಲ್ಲಿ ಶೀಘ್ರವೇ ಸಮಾನ ನಾಗರಿಕ ಸಂಹಿತೆ ಬರಬೇಕು. ಸುಪ್ರೀಂಕೋರ್ಟ್ ಕೂಡ ನಾಗರಿಕ ಸಂಹಿತೆ ಅನುಷ್ಠಾನದತ್ತ ಹೆಜ್ಜೆ ಹಾಕಬೇಕೆಂದಿದೆ. ಪ್ರಧಾನಿಗಳು ಇದನ್ನು ಪ್ರಸ್ತಾಪಿಸಿದ ಮೇಲೆ ಚರ್ಚೆಯ ವಿಷಯವಾಗಿದೆ ಎಂದರು.

Former MLA CT Ravi

About Author

Leave a Reply

Your email address will not be published. Required fields are marked *

You may have missed