September 19, 2024

ಮಣಿಪುರದ ಘಟನೆಗೆ ಡಬಲ್ ಎಂಜಿನ್ ಸರ್ಕಾರ ಕಾರಣ

0
ರಾಜ್ಯಸಭಾ ಸದಸ್ಯ ಜೈರಾಂ ರಮೇಶ್

ರಾಜ್ಯಸಭಾ ಸದಸ್ಯ ಜೈರಾಂ ರಮೇಶ್

ಚಿಕ್ಕಮಗಳೂರು: ಕಳೆದ ೧೫ ತಿಂಗಳಿಂದ ಮಣಿಪುರದಲ್ಲಿ ಇಂತಹಾ ಘಟನೆ ನೋಡುತ್ತಿದ್ದೇವೆ. ಡಬಲ್ ಎಂಜಿನ್ ಸರ್ಕಾರ ಫೇಲಾಗಿರುವುದೇ ಇದಕ್ಕೆ ಕಾರಣ. ಅಲ್ಲಿನ ಸಿಎಂ ಫೇಲಾಗಿದ್ದಾರೆ, ಘಟನೆಗೆ ಉತ್ತೇಜನ ನೀಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಅವರು ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರದ ಬಗ್ಗೆ ಏನೂ ಮಾತನಾಡ್ತಿಲ್ಲ, ಮೌನವ್ರತ ಮಾಡುತ್ತಿದ್ದಾರೆ ಎಂದು ಕೆಂಪು ಕೋಟೆಯಲ್ಲಿಂದು ಪ್ರಧಾನಿಯವರು ಮಾತನಾಡಿದ್ದು ೨ ಗಂಟೆ, ೧೩ ನಿಮಿಷ. ಇದರಲ್ಲಿ ಮಣಿಪುರದ ಬಗ್ಗೆ ಮಾತನಾಡಿದ್ದು ೪ ನಿಮಿಷ ಮಾತ್ರ.ಮಣಿಪುರ್ ಮೇ ಶಾಂತಿ ಆಯೇಗಿ ಎಂದು ಹೇಳಿದ್ದಾರೆ. ಇದು, ಎಲ್ಲರಿಗೂ ಗೊತ್ತು ಎಂದರು.

ಮಣಿಪುರದಲ್ಲಿ ೨೦೨೨ ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಂಫಾಲ್ ವ್ಯಾಲಿನಲ್ಲಿನ ೪೦ ಸ್ಥಾನಗಳಲ್ಲಿ ೨೮ ಬಿಜೆಪಿಗೆ, ಅದರಲ್ಲಿ ೧೦ ಕೂಕಿ ಸೀಟ್ ನಲ್ಲಿ ೧೦ ಬಿಜೆಪಿಗೆ ಬಂದಿತು. ಅಂದರೆ ಅಲ್ಲಿನ ಜನರು ಬಿಜೆಪಿಗೆ ಉತ್ತಮ ಜನಾದೇಶ ನೀಡಿದ್ದರು.

ಪ್ರಧಾನಮಂತ್ರಿಯವರು ಚೈನಾಗೆ ಕ್ಲೀನ್ ಚಿಟ್ ಕೊಡ್ತಾರೆ, ಹೋಂ ಮಿನಿಸ್ಟರ್ ಮಣಿಪುರ ಸಿಎಂಗೆ ಕ್ಲೀನ್ ಚಿಟ್ ಕೊಡ್ತಾರೆ. ನೋಟು ಅಮಾನೀಕರಣ, ಜಿಎಸ್‌ಟಿ, ನಿರುದ್ಯೋಗ ಯಾವುದರ ಬಗ್ಗೆಯೂ ಪ್ರಧಾನಿಯವರು ಹೇಳಿಲ್ಲ ಎಂದರು.

ಕಳೆದೆರಡು ದಿನಗಳ ಹಿಂದೆ ಗ್ರಾಹಕರ ದರ ಅಂಕಿ ಅಂಶ ಪ್ರಕಟಗೊಂಡಿದೆ. ಕಳೆದ ೧೫ ತಿಂಗಳಲ್ಲಿ ಹಣ ದುಬ್ಬರದಲ್ಲಿ ಅತಿ ಹೆಚ್ಚು ಏರಿಕೆಯಾಗಿದೆ. ಅದರ ಬಗ್ಗೆಯೂ ಏನೂ ಹೇಳಿಲ್ಲ, ಬರೀ ಕಾಂಗ್ರೆಸ್ ಪಾರ್ಟಿಯನ್ನ ಟಾರ್ಗೆಟ್ ಮಾಡಿ ಮಾತನಾಡ್ತಿದ್ದಾರೆ, ಇತಿಹಾಸವನ್ನು ತಿರುಚಿ ಕಾಂಗ್ರೆಸ್, ಇಂದಿರಾಗಾಂಧಿ, ನೆಹರೂ, ರಾಜೀವ್ ಗಾಂಧಿ ಬಗ್ಗೆ ಆರೋಪ ಮಾಡಿ ಪಾರ್ಲಿಮೆಂಟ್‌ನಲ್ಲಿ ಪ್ರತಿಕ್ರಿಯೆ ನೀಡ್ತಾರೆ, ನರೇಂದ್ರ ಮೋದಿ ಇಷ್ಟನ್ನ ಬಿಟ್ಟು ಬೇರೇನೂ ಮಾಡ್ತಿಲ್ಲ ಎಂದು ಆರೋಪಿಸಿದರು.

 

Manipur incident is due to double engine government

 

About Author

Leave a Reply

Your email address will not be published. Required fields are marked *

You may have missed