September 17, 2024

ಪ್ಯಾರಾ ಮೆಡಿಕಲ್ ವೃತ್ತಿಪರ ಕೋರ್ಸ್ ತರಬೇತಿ ಆದವರಿಗೆ ಉತ್ತಮ ಅವಕಾಶವಿದೆ – ಡಾ. ವಿಶ್ವನಾಥ್

0
Graduation Ceremony organized by Student Group of Institution

Graduation Ceremony organized by Student Group of Institution

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಪ್ಯಾರಾ ಮೆಡಿಕಲ್ ವೃತ್ತಿಪರ ಕೋರ್ಸ್‌ನಿಂದ ಉತ್ತಮ ಅವಕಾಶಗಳಿವೆ ಎಂದು ಬೆಂಗಳೂರಿನ ಕರ್ನಾಟಕ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ಸ್ ವಿಜ್ಞಾನಿಗಳ ನಿಯಂತ್ರಣ ಪ್ರಾಧಿಕಾರದ ವಿಶೇಷ ಅಧಿಕಾರಿ ಡಾ. ಬಿ.ಎನ್.ವಿಶ್ವನಾಥ್ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ವಿದ್ಯಾರ್ಥಿ ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ ವತಿಯಿಂದ ಏರ್ಪಡಿಸಲಾಗಿದ್ದ ಗ್ರಾಜುಯೇಷನ್ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾವುದೇ ವಿದ್ಯಾರ್ಥಿ ವಿದ್ಯಾಭ್ಯಾಸ ಮುಗಿದ ನಂತರ ಅವರ ಪರಿಶ್ರಮಕ್ಕೆ ದೋರೆಯುವ ಪ್ರತಿಫಲವೇ ಸರ್ಟಿಫಿಕೇಟ್, ಕರ್ನಾಟಕ ರಾಜ್ಯದಲ್ಲಿ ೫೦೨ ಪ್ಯಾರಾಮೆಡಿಕಲ್ ಇದ್ದು ನಾನು ಕಂಡ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಉತ್ತಮ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸಂಸ್ಥೆಯಾಗಿದೆ, ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದು ಸುಮ್ಮನಿರುವುದಲ್ಲ ಇದು ನಿಮ್ಮ ಜೀವನದ ಪ್ರಾರಂಭದ ಹಂತವಾಗಿದೆ, ನಿಮ್ಮ ಜೀವನದ ಭಾಗವಾಗಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾದ್ಯ ಎಂದರು.

ಡಿಪ್ಲೋಮಾ ಮುಗಿಸಿ ಹೊಸ ಭವಿಷ್ಯಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರಲಿ ಎಂದು ತಿಳಿಸಿದ ಅವರು, ನೀವು ಮಾಡಿರುವ ಕೋರ್ಸ್ ಯಾವುದೇ ಸಣ್ಣ ಕೋರ್ಸ್ ಅಲ್ಲ, ಒಬ್ಬ ವೈದ್ಯನು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ೪ ರಿಂದ ೬ ಜನ ಪ್ಯಾರಾ ಮೆಡಿಕಲ್ ಸ್ಟಾಪ್ ಬೇಕಾಗುತ್ತದೆ ಮತ್ತು ನೀವು ವೈದ್ಯರು ಮತ್ತು ರೋಗಿಯ ನಡುವಿನ ಸಂಪರ್ಕ ಇದ್ದಂತೆ, ಅಂತಹ ಅದ್ಬುತವಾದ ಕೋರ್ಸ್ ಪೂರೈಸಿರುವ ನೀವು ಹೆಮ್ಮೆ ಪಡಬೇಕು ಎಂದರು.

ಕೆ.ಆರ್.ಎಸ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಕೆ.ಎಸ್.ಯೋಗೀಶ್ ಮಾತನಾಡಿ ಇಂದುಕುಮಾರ್ ರವರ ಬಹುದಿನದ ಕನಸ್ಸಾದ ಈ ಸಮಾರಂಭವು ಇಂದು ನೆರೆವೇರುತ್ತಿದ್ದು, ವಿದ್ಯಾರ್ಥಿ ದಿನಗಳಲ್ಲಿ ಪಡೆದ ಮೂಲಭೂತ ಶಿಕ್ಷಣದಿಂದ ಉನ್ನತ ಶಿಕ್ಷಣಕ್ಕೆ ಸಹಕಾರಿ ಆಗುವುದು, ಯು.ಕೆ ಮತ್ತು ಅಮೇರಿಕಾ ದಂತಹ ದೇಶಗಳಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ ವೈದ್ಯರಿಗೆ ಸಮನಾದ ಕೋರ್ಸ್ ಆಗಿದೆ, ಖಾಸಗಿ ಆಸ್ಪತ್ರೆ ನೆಡೆಸುವ ಒಬ್ಬ ವೈದ್ಯನಿಗೆ ೪ ಕ್ಕಿಂತಲೂ ಹೆಚ್ಚು ನರ್ಸಿಂಗ್ ಸ್ಟಾಪ್ಸ್‌ಗಳ ಅವಶ್ಯಕತೆ ಇರುತ್ತದೆ, ಪ್ಯಾರಾ ಮೆಡಿಕಲ್ಸ್ ಎನ್ನುವುದು ಅರೆ ವೈದ್ಯ ಪದ್ಧತಿಯು ಹೌದು, ವೈದ್ಯರು ಸೂಚಿಸಿದ ಸಲಹೆಗಳನ್ನು ಚಾಚುತಪ್ಪದೆ ಸಮರ್ಪಣಾ ಭಾವದಿಂದ ಪಾಲಿಸಿವವರು ಪ್ಯಾರಾಮೆಡಿಕಲ್ ರವರು ಅವರಿಲ್ಲದೆ ವೈದ್ಯರ ಚಿಕಿತ್ಸೆ ಅಪೂರ್ಣ ಎಂದರು.

ವಿದ್ಯಾರ್ಥಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಅಧ್ಯಕ್ಷರಾದ ಸಿ.ಹೆಚ್.ಇಂದುಕುಮಾರ್ ಮಾತನಾಡಿ ವಿದ್ಯಾರ್ಥಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ನಮ್ಮ ತಂದೆಯವರು ಬಡ ಮಕ್ಕಳಿಗೆ ಅನುಕೂಲವಾಗಲೆಂದು ಪ್ರಾರಂಭಿಸಿದ್ದರು, ಇದರಿಂದ ನಮ್ಮ ಸುತ್ತ ಮುತ್ತಲ ವಿದ್ಯಾರ್ಥಿಗಳು ಉತ್ತಮ ಕೋರ್ಸ್ ಮಾಡಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ ಎಂದರು.

Graduation Ceremony organized by Student Group of Institution

About Author

Leave a Reply

Your email address will not be published. Required fields are marked *

You may have missed