September 9, 2024

ಆ.20 ’ನಿಮ್ಮೊಳಗಿನ ಆಧ್ಯಾತ್ಮಿಕತೆ’ ವಿಶಿಷ್ಟ ಕಾರ್ಯಾಗಾರ

0
Universal Knowledge Trust Mangalore

Universal Knowledge Trust Mangalore

ಚಿಕ್ಕಮಗಳೂರು: ಮಂಗಳೂರಿನ ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ ವತಿಯಿಂದ ನಗರದ ಬೈನರಿ ಎಕ್ಸಿಕ್ಯೂಟಿವ್ ಲಕ್ಸುರಿ ಹೋಟೆಲ್‌ನಲ್ಲಿ ಇದೇ ಭಾನುವಾರ ಆ.೨೦ ರಂದು ಬೆಳಗ್ಗೆ ೯:೩೦ ರಿಂದ ಸಂಜೆ ೪:೩೦ರವರೆಗೆ ನಿಮ್ಮೊಳಗಿನ ಆಧ್ಯಾತ್ಮಿಕತೆ ಎಂಬ ವಿಶಿ? ಕಾರ್ಯಗಾರವನ್ನು ಏರ್ಪಡಿಸಲಾಗಿದೆ.

ಉನ್ನತ ತರಬೇತುದಾರರು ನಡೆಸಿಕೊಡಲಿರುವ ಈ ಕಾರ್ಯಗಾರಕ್ಕೆ ಜನರು ಆಧ್ಯಾತ್ಮಿಕ ಶಕ್ತಿಯ ಮೂಲಕ ಧನಾತ್ಮಕವಾಗಿ ಆಂತರಿಕ ಬದಲಾವಣೆಗೆ ಸಹಾಯ ಮಾಡಿ. ಸಕಾರಾತ್ಮಕ ಜೀವನ, ಹೀಲಿಂಗ್, ಆಧ್ಯಾತ್ಮಿಕತೆ ಮತ್ತು ವೈಯಕ್ತಿಕ ಬೆಳವಣಿಗೆಯ ವಿವಿಧ ಹಂತಗಳನ್ನು ಇನ್ನ? ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ವ್ಯವಸ್ಥಾಪಕಿ ಶ್ರೀಮತಿ ಶಮ್ಮಿಶಿರಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಈ ವಿಶಿ? ಕಾರ್ಯಗಾರದಲ್ಲಿ ನಾವು ಇದುವರೆಗೆ ಅರ್ಥಮಾಡಿಕೊಳ್ಳಲಾಗದ ದೇಹವಿಜ್ಞಾನ ಹಾಗೂ ಆಧ್ಯಾತ್ಮಿಕತೆ, ಇವುಗಳಿಗೆ ಇರುವ ಸಂಬಂಧಗಳನ್ನು ಅರಿಯಲಿದ್ದೇವೆ. ಈ ಮೂಲಕ ಬಹು ದಿನಗಳು, ಬಹು ತಿಂಗಳುಗಳು ಬಹು ವ?ಗಳಿಂದ ಗುಣಪಡಿಸಲಾಗದ ಕಾಯಿಲೆಗಳು, ವಚನಗಳು, ಮಾನಸಿಕ ಖಿನ್ನತೆ, ಸಂಬಂಧಗಳಲ್ಲಿ ಉಂಟಾಗಿರುವ ಬಿರುಕು ಇತ್ಯಾದಿಗಳನ್ನು ಯಾವುದೇ ಔ?ದೋಪಚಾರಗಳಿಲ್ಲದೆ ಸ್ವಯಂ ಗುಣಪಡಿಸಿಕೊಳ್ಳುವ ಶಕ್ತಿಯನ್ನು ಈ ದೇಹ ಹೊಂದಿದೆ ಎಂಬುದರ ಮಹತ್ವವನ್ನು ಉನ್ನತ ತರಬೇತಿದಾರರು ತಿಳಿಸಿಕೊಡಲಿದ್ದಾರೆ ಎಂದರು.

ಟ್ರಸ್ಟ್‌ನ ಮಾಸ್ಟರ್ ಟ್ರೈನರ್‌ಗಳ ತಂಡ ಹಾಗೂ ನೇಚರ್ ಪಾಸಿಟಿವ್ ಎನರ್ಜಿ ಹೀಲಿಂಗ್ ವಿಧಾನಗಳ ಅನುಭವಿ ಮಾರ್ಗದರ್ಶಕರು ಉಪಸ್ಥಿತರಿದ್ದು ತಮ್ಮ ಜ್ಞಾನ ಮತ್ತು ಪರಿಣತಿಯನ್ನು ಪಾಲ್ಗೊಳ್ಳುವವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಅಭ್ಯಾಸಗಳು ನೀಡುವ ಅದ್ಭುತ ಪ್ರಯೋಜನಗಳ ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದು ಹೇಳಿದರು.

ಅಲ್ಲದೆ ತಮ್ಮ ತಮ್ಮ ವೃತ್ತಿ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರಿಗೆ ಗ್ರಾಹಕ ಸಂಬಂಧ ವೃದ್ಧಿ, ವಿದ್ಯಾರ್ಥಿಗಳಿಗೆ ಗ್ರಹಿಕೆಯ ಶಕ್ತಿ, ಗೃಹಿಣಿಯರಿಗೆ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಗೈಯ್ಯಲು ಸರಳ ಸೂತ್ರಗಳನ್ನು ಕಲಿತು ಇತರರಿಗೆ ಕಲಿಸುವ ಅವಕಾಶವನ್ನು ಈ ಕಾರ್ಯಗಾರವು ನೀಡಲಿದೆ. ಕೋಪ, ದ್ವೇ?, ಅಸೂಯೆ, ಮತ್ಸರ ಮುಂತಾದ ಮನು?ನ ಶತ್ರುಗಳನ್ನು ನಿಗ್ರಹಿಸಿ ಪ್ರೀತಿ ಕರುಣೆ ಧೈರ್ಯ ಶಾಂತ ಸ್ವಭಾವ ಇತ್ಯಾದಿಗಳನ್ನು ಪಡೆಯುವ ಸುಲಭ ತಂತ್ರಗಳನ್ನು ಕಾರ್ಯಗಳು ಪರಿಚಯಿಸಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿ ಪಾಲ್ಗೊಳ್ಳುವವರು ವಿವಿಧ ಚಟುವಟಿಕೆಗಳು ಮತ್ತು ಸಂವಾದದಲ್ಲಿ ಭಾಗವಹಿಸಿದ ಧನಾತ್ಮಕ ಜೀವನ ಗುಣಪಡಿಸುವಿಕೆಯ ವಿವಿಧ ಅಂಶಗಳ ಬಗ್ಗೆ ಕಲಿಯಲಿದ್ದಾರೆ. ಪಾಲ್ಗೊಳ್ಳುವ ಎಲ್ಲರೂ ಪ್ರಶ್ನೆಗಳನ್ನು ಕೇಳಲು ಮತ್ತು ಅವರ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಈ ಕಾರ್ಯಾಗಾರವು ಅನುವು ಮಾಡಿಕೊಡುತ್ತದೆ ಎಂದರು.

ಒತ್ತಡದ ಜೀವನದಿಂದ ಯಾಂತ್ರಿಕತೆಗೆ ಹೊಂದಿಕೊಂಡಿರುವ ಪ್ರಸ್ತುತತೆಯಲ್ಲಿ ಅಮೂಲ್ಯ, ಸುಂದರ ಜೀವನವನ್ನು ತ್ಯಾಗ ಮಾಡಿ ಆಹಾರ ಪದ್ಧತಿ ಹಾಗೂ ಔ?ಧಗಳನ್ನು ಅವಿಭಾಜ್ಯ ಅಂಗ ಎಂದುಕೊಂಡು ಜೀವನ ಸಾಗಿಸುತ್ತಿರುವ ಈ ಪ್ರಸ್ತುತ ಕಾಲದಲ್ಲಿ ಔ?ಧಮುಕ್ತ ಸರಳ ಜೀವನ ಶೈಲಿಯನ್ನು ಸಮಾಜಕ್ಕೆ ಪರಿಚಯಿಸಿದೆ. ಪರಿಸರದ ಉಳಿವಿಗಾಗಿ ಸಾರ್ವಜನಿಕರ ಸಹಯೋಗದೊಂದಿಗೆ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಹಸಿದ ಬಡವರಿಗಾಗಿ “ಫುಡ್ ಆನ್ ವಾಲ್” ಯೋಜನೆಯ ಮೂಲಕ ಇದುವರೆಗೆ ಸುಮಾರು ೮೨೦೦ ಕ್ಕೂ ಹೆಚ್ಚು ಮಧ್ಯಾಹ್ನದ ಊಟವನ್ನು ನೀಡಿದೆ. ಕಳೆದ ಶೈಕ್ಷಣಿಕ ವ?ದಲ್ಲಿ ಸುಮಾರು ೧೫ ಸಾವಿರಕ್ಕೂ ಅಧಿಕ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ವಿಶೇ? ತಂತ್ರಗಳನ್ನು ಹೇಳಿಕೊಡುವ ಮೂಲಕ ಶಾಲೆಗಳ ಫಲಿತಾಂಶ ವೃದ್ಧಿಗೆ ಕಾರಣವಾಗಿದೆ. ಈ ಬಾರಿ ಒಂದು ಲಕ್ಷ ಶಾಲಾ ಮಕ್ಕಳಿಗೆ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಿದೆ. ಈ ರೀತಿಯಾಗಿ ತನ್ನ ಸಾಮಾಜಿಕ ಸೇವೆಗಳ ಮೂಲಕ ತನ್ನನ್ನು ತಾನು ಸಮಾಜಕ್ಕೆ ಸಮರ್ಪಿಸಿಕೊಂಡು ಉತ್ತಮ ಸಮಾಜಕ್ಕೆ ತನ್ನದೇ ಕೊಡುಗೆ ನೀಡುವಲ್ಲಿ ಟ್ರಸ್ಟ್ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಈ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸುವ ಎಲ್ಲರೂ ಹೆಚ್ಚಿನ ಜ್ಞಾನವನ್ನು ಪಡೆದು ಹೆಚ್ಚಿನ ಮಾನಸಿಕ ದೃಢತೆಯೊಂದಿಗೆ ಪರಿವರ್ತನೆಯ ಅನುಭವವನ್ನು ಹೊಂದಲಿದ್ದಾರೆ. ಸಕಾರಾತ್ಮಕ ಜೀವನ, ಹೀಲಿಂಗ್, ಆಧ್ಯಾತ್ಮಿಕತೆ ಮತ್ತು ವೈಯಕ್ತಿಕ ಬೆಳವಣಿಗೆಯ ಬಗ್ಗೆ ಇನ್ನ? ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಲಹೆಗಾರ ರೋಹನ್‌ಶಿರಿ, ಯೋಜನೆಯ ಸಂಯೋಜಕ ವಿವೇಕ್ ಬಿ.ಸಿ ಇದ್ದರು.

Universal Knowledge Trust Mangalore

About Author

Leave a Reply

Your email address will not be published. Required fields are marked *