September 19, 2024

ವೀರಶೈವ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎಂ.ರಾಜಶೇಖರ್ ಆಯ್ಕೆ

0
ವೀರಶೈವ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎಂ.ರಾಜಶೇಖರ್ ಆಯ್ಕೆ

ವೀರಶೈವ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎಂ.ರಾಜಶೇಖರ್ ಆಯ್ಕೆ

ಚಿಕ್ಕಮಗಳೂರು:  ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎಂ.ರಾಜಶೇಖರ್ ಹಾಗೂ ಉಪಾಧ್ಯಕ್ಷರಾಗಿ ಬಿ.ಸಿ.ಗಿರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜಶೇಖರ್ ಮತ್ತು ಗಿರೀಶ್ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮಗಳ ರಿಟನಿಂಗ್ ಆಫೀಸರ್ ಹಾಗೂ ಚುನಾವಣಾಧಿಕಾರಿ ಡಿ.ಟಿ.ನಾಗರಾಜ್ ಇಬ್ಬರ ಅವಿರೋಧ ಆಯ್ಕೆಯನ್ನು ಗುರುವಾರ ಘೋಷಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ವೀರಶೈವ ಲಿಂಗಾಯತ ಸಮಾಜ ನೀಡಿದ ಕೊಡುಗೆ ಅಪಾರವಾಗಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಈ ನಾಡಿನ ವೀರಶೈವ ಲಿಂಗಾಯಿತ ಪಾತ್ರವನ್ನು ಮರೆಯುವಂತಿಲ್ಲ ಸರ್ವಸಮಾನತೆಯ ನೆಲಗಟ್ಟಿನ ಮೇಲೆ ಮಾನ ವೀಯ ಮೌಲ್ಯಗಳನ್ನು ನಿಜ ಧರ್ಮದ ಬೆಳಕನ್ನು ನೀಡಿದ್ದಲ್ಲದೆ ಎಲ್ಲರನ್ನೂ ಆತ್ಮ ಗೌರವ ಮೂಡುವಂತೆ ವೀರಶೈವ ಲಿಂಗಾಯತ ಧರ್ಮ ಶ್ರಮಿಸಿದೆ ಎಂದರು.

ಮಠಮಾನ್ಯ ಹಾಗೂ ದಾನಿಗಳ ಕೊಡುಗೆ ಅಪಾರವಿದೆ. ಈ ದೊಡ್ಡ ಸಮಾಜದ ಹೆಸರಿನಲ್ಲಿ ಸಹಕಾರ ಸಂಘವು ಕಳೆದ ೧೦ ವ?ದಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಎಂದರು. ವೀರಶೈವ ಪತ್ತಿನ ಸಹಕಾರ ಸಂಘವು ೨,೦೦೦ಕ್ಕೂ ಅಧಿಕ ?ರುದಾರರನ್ನು ಹೊಂದಿ, ಸುಮಾರು ೧೨ ಕೋಟಿ ರೂ ವ್ಯವಹಾರ ನಡೆಸಿದ್ದು. ಸಂಘವು ?ರುದಾರರಿಗೆ ವೇತನ ಆಧಾರಿತ ಸಾಲ, ವೈಯಕ್ತಿಕ ಸಾಲ, ಗೃಹ ನಿರ್ಮಾಣ ಹಾಗೂ ವಾಹನಗಳು, ವ್ಯಾಪಾರ ಅಭಿವೃದ್ಧಿ,ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಸೇರಿದಂತೆ ೪.೮೦ ಕೋಟಿ ಸಾಲ ಸೌಲಭ್ಯವನ್ನು ನೀಡುತ್ತಾ ಬಂದಿದೆ ಎಂದರು.

ಉಪಾಧ್ಯಕ್ಷರಾದ ಬಿ.ಸಿ.ಗಿರೀಶ್ ಮಾತನಾಡಿ ಹೊಸ ದೃಷ್ಟಿಯ ಪರಿಣಾಮವಾಗಿ ಬಹುಮುಖಿ ಸೇವೆಯನ್ನು ನೀಡುತ್ತಾ ಬಂದಿದ್ದು ಸಹಕಾರಿ ಕ್ಷೇತ್ರದಲ್ಲಿ ಇನ್ನ? ಬೆಳವಣಿಗೆಗೆ ಚಿಂತನೆ ನಡೆಸಿ ಸಂಘವನ್ನು ಇನ್ನ? ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವೀರಶೈವ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕರಾದ ಕೆ.ಓ.ಓಂಕಾರಪ್ಪ, ಕೆ.ವಿ. ಶಿವಕುಮಾರ್, ಸಿ.ಬಿ.ನಂದೀಶ್, ಹೇಮಂತ್‌ಕುಮಾರ್, ಎಲ್.ಸಿ.ಜಗದೀಶ್, ಬಿ.ಸಿ.ಭಾರತಿ ಶಿವರುದ್ರಪ್ಪ, ತನೋಜ ರಾಜೇಶ್, ಸಿ.ಯೋಗಾನಂದ, ಮಾಜಿ ಸದಸ್ಯರುಗಳಾದ ಓಂಕಾರಪ್ಪ, ಎಲ್.ಬಿ.ಹುಲಿಯಪ್ಪ, ಷೇರುದಾರರಾದ ಕೆ.ಎಸ್.ಮನೋಜ್, ಜೆ.ಡಿ.ವಿಜಯೇಂದ್ರ, ಎಂ.ಬಿ.ಗಂಗಾಧರ್, ಬಿ.ಜೆ.ರಾಜೇಶ್, ಎಲ್.ಜೆ.ಮೋಹನ್, ಸಿಇಓ ಷಡಕ್ಷರಿಸ್ವಾಮಿ ಮತ್ತಿತರರು ಹಾಜರಿದ್ದರು.

GM Rajasekhar was elected as the President of Veerashaiva Cooperative Society

About Author

Leave a Reply

Your email address will not be published. Required fields are marked *

You may have missed