September 19, 2024

ಲೋಡ್ ಶೆಡ್ಡಿಂಗ್‌ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಪ್ರತಿಭಟನೆ

0
ಲೋಡ್ ಶೆಡ್ಡಿಂಗ್‌ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಪ್ರತಿಭಟನೆ

ಲೋಡ್ ಶೆಡ್ಡಿಂಗ್‌ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಪ್ರತಿಭಟನೆ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಮೆಸ್ಕಾಂ ಇಲಾಖೆ ಅನಿಯಂತ್ರಿತವಾಗಿ ಲೋಡ್ ಶೆಡ್ಡಿಂಗ್‌ವೆಸಗಿ ಸಮರ್ಪಕ ವಿದ್ಯುತ್ ಪೂರೈಸದೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ನಗರದ ತಾಲ್ಲೂಕು ಕಚೇರಿಯಿಂದ ಮೆಸ್ಕಾಂ ಕಚೇರಿಯವರೆಗೆ ಬುಧವಾರ ಮೆರ ವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಕಳೆದ ಕೆಲವು ದಿನಗಳಿಂದ ಗ್ರಾಮಾಂತರ ಪ್ರದೇಶದಲ್ಲಿ ಮೆಸ್ಕಾಂ ಇಲಾಖೆ ಅನಿಯಂತ್ರಿವಾಗಿ ಲೋಡಶೆಡ್ಡಿಂಗ್ ಮಾಡುತ್ತಿದೆ. ಇದರ ಪರಿಣಾಮ ಸಾರ್ವಜನಿ ಕರು, ರೈತರಿಗೆ ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಪ್ರತಿದಿನದ ಸಂಜೆ ೬ ಗಂಟೆಯಿAದ ೧೦ ಗಂಟೆವರೆಗೆ ಪ್ರತಿ ೧೫-೩೦ ನಿಮಿಷಗಳಿಗೊಮ್ಮೆ ವಿದ್ಯುತ್ ಸ್ಥಗಿತಗೊಳಿಸ ಲಾಗುತ್ತಿದೆ. ಹಗಲಿನ ಸಮಯದಲ್ಲಿ ಜಮೀನಿನಲ್ಲಿ ದುಡಿದ ಬರುವಂತಹ ರೈತರು, ಕಾರ್ಮಿಕರು, ಮನೆಗೆಲಸ ಹಾಗೂ ಅಡಿಗೆ ಮಾಡಿಕೊಳ್ಳುವುದಕ್ಕೆ ಸಮಸ್ಯೆಯಾಗಿ ಪರಿಣಾಮಿಸಿದೆ ಎಂದು ದೂರಿದರು.

ಇಷ್ಟೆಲ್ಲಾ ವಿದ್ಯುತ್ ಸಮಸ್ಯೆಯಿಂದ ನಿತ್ಯದ ಊಟದ ರುಚಿ ಸಿಗದೇ ಕತ್ತಲೆಯಲ್ಲೇ ಊಟ ಮಾಡುವ ಪರಿಸ್ಥಿತಿ ಎದುರಾಗಿದೆ. ರ‍್ಯಾಯ ಮಾರ್ಗಗಳಾವು ಇಲ್ಲದೇ ನಿವಾಸಿಗಳು ತೊಂದರೆ ಸಿಲುಕಿದ್ದು ಯುಪಿಎಸ್ ಕೊಂಡು ಬಳಸಲು ಶಕ್ತರಲ್ಲ. ಬುಡ್ಡಿದೀಪ ಹಚ್ಚಲು ಸೀಮೆಎಣ್ಣೆ ಸಹವಿಲ್ಲ. ಹಗಲಿನ ಸಮಯದಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜಾಗದಿರುವುದು ಮೂಲ ಕಾರಣ ಎಂದರು.

ಈಗಾಗಲೇ ಜಲವಿದ್ಯುತ್, ಪವನ ವಿದ್ಯುತ್, ಸೌರಶಕ್ತಿ ಥರ್ಮಲ್ ಸೇರಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮಳೆಗಾಲ ಕ್ಷೀಣಿಸಿದರೂ ಉಳಿದ ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡಿ ವಿತರಿಸಬೇಕು. ಸರ್ಕಾರ ಮುಂಜಾಗ್ರತ ಕ್ರಮವಾಗಿ ಉತ್ಪಾದನೆ ಹೆಚ್ಚು ಮಾಡಿ ಕೊರತೆಯನ್ನು ನೀಗಿಸಬೇಕು ಎಂದರು.

ರಾಜ್ಯಸರ್ಕಾರ ಗೃಹಜ್ಯೋತಿ ಹೆಸರಿನಲ್ಲಿ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಆದರೆ ವಿದ್ಯುತ್ ವಿತರಣೆ ಯಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದ ಉಚಿತ ಯೋಜನೆಯು ಲೇವಡಿ ಮಾಡಿದಂತಾಗಿದೆ. ಮುಂಗಾರು ಮಳೆ ಪ್ರಾರಂಭದಿAದಲೂ ಕೈಕೊಟ್ಟಿದೆ. ಸಮಪರ್ಕವಾಗಿ ಮಳೆ ಬಾರದ ಕಾರಣ ಯಾವುದೇ ಜಲಾಶಯ ಪೂರ್ಣ ತುಂಬಿರುವುದಿಲ್ಲ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಸರ್ಕಾರ ಜಲವಿದ್ಯುತ್ ಒಂದನ್ನೇ ನೆಚ್ಚಿಕೊಳ್ಳದೇ ಬೇರೆ ರಾಜ್ಯದ ಗ್ರೀಡ್‌ಗಳಿಂದಲಾ ದರೂ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳಬೇಕಿತ್ತು. ಮುಂದಿನ ಸಮಯದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳುವ ಮೂಲಕ ಸಾರ್ವಜನಿಕರು, ರೈತರು, ಕಾರ್ಮಿಕರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಡಿ.ಮಹೇಶ್, ಶ್ರೀಮತಿ ವನಶ್ರೀ, ಎಂ.ಸಿ.ಬಸವ ರಾಜು, ಎಂ.ಬಿ.ಚAದ್ರಶೇಖರ್, ಕೆ.ಟಿ.ಆನಂದ್, ಪುಟ್ಟಸ್ವಾಮಿಗೌಡ, ಡಿ.ಆರ್.ಜಯಕೃಷ್ಣಪ್ಪ, ಕೆ.ಬಿ.ಲೋಕೇಶ್, ಮಲ್ಲುಂಡಪ್ಪ, ವಿಜಯಕುಮಾರ್, ಪರ್ವತೇಗೌಡ, ಶಂಕರಪ್ಪ ಮತ್ತಿತರರು ಹಾಜರಿದ್ದರು.

Karnataka state farmers protest against load shedding

About Author

Leave a Reply

Your email address will not be published. Required fields are marked *

You may have missed