September 20, 2024

ನಗರಸಭೆ ಉಪಾಧ್ಯಕ್ಷರಾಗಿ ಅಮೃತೇಶ್ ಚನ್ನಕೇಶವ ಅವಿರೋಧವಾಗಿ ಆಯ್ಕೆ

0
ನಗರಸಭೆ ಉಪಾಧ್ಯಕ್ಷರಾಗಿ ಅಮೃತೇಶ್ ಚನ್ನಕೇಶವ ಅವಿರೋಧವಾಗಿ ಆಯ್ಕೆ

ನಗರಸಭೆ ಉಪಾಧ್ಯಕ್ಷರಾಗಿ ಅಮೃತೇಶ್ ಚನ್ನಕೇಶವ ಅವಿರೋಧವಾಗಿ ಆಯ್ಕೆ

ಚಿಕ್ಕಮಗಳೂರು: ನಗರಸಭೆ ಉಪಾಧ್ಯಕ್ಷರಾಗಿ ಅಮೃತೇಶ್ ಚನ್ನಕೇಶವ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಉಮಾದೇವಿ ಕೃಷ್ಣಪ್ಪ ಅವರು ಪಕ್ಷದ ಆಂತರಿಕ ಒಪ್ಪಂದದಂತೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.

ಬಿಜೆಪಿಯಿಂದ ಅಮೃತೇಶ್ ಚನ್ನಕೇಶವ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾ ಅಧಿಕಾರಿಗಳಾದ ಹೆಚ್.ಡಿ.ರಾಜೇಶ್ ರವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಈ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ನೂತನ ಉಪಾಧ್ಯಕ್ಷರು ಮತ್ತು ಅಧ್ಯಕ್ಷರು ಇಬ್ಬರೂ ಸೇರಿ ಎಲ್ಲಾ ಸದಸ್ಯರ ಸಹಕಾರ ಪಡೆದು ಚಿಕ್ಕಮಗಳೂರು ನಗರವನ್ನು ಸೌಂದರ್ಯ, ಕುಡಿಯುವ ನೀರು, ಒಳಚರಂಡಿ, ಮನೆ, ನಿವೇಶನ ಈ ರೀತಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಆಗಲಿ, ಈಗಾಗಲೇ ಈ ವಿಚಾರದಲ್ಲಿ ಸಾಕಷ್ಟು ಕೆಲಸಗಳಾಗಿದೆ. ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸುತ್ತೇವೆ ಎಂದರು.

ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ದತ್ತಾತ್ರೇಯ ನೀಡಲಿ, ಅವರೊಂದಿಗೆ ನಾವೆಲ್ಲರೂ ಇರುತ್ತೇವೆ. ಈಗಾಗಲೇ ನಗರ ಸ್ವಚ್ಛತಾ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಅದು ಇನ್ನಷ್ಟು ಸುಧಾರಿಸುವಂತಾಗಲಿ ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಅಮೃತೇಶ್ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದಿಸುತ್ತೇವೆ. ಇಲ್ಲಿ ಎಲ್ಲ ಸದಸ್ಯರು ಸೌಮ್ಯ ಸ್ವಭಾವದವರು, ಅವರ ನಡುವೆ ಓರ್ವ ಯುವಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರದ ಅಭಿವೃದ್ಧಿಗೆ ಅವರು ಅಧ್ಯಕ್ಷರು ಮತ್ತು ಉಳಿದೆಲ್ಲಾ ಸದಸ್ಯರ ಸಲಹೆ, ಸಹಕಾರ ಪಡೆದು ಶ್ರಮಿಸಲಿ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಕಳೆದ ನಗರದ ಸ್ವಚ್ಛತೆಗೆ ನಗರಸಭೆ ಶ್ರಮಿಸುತ್ತಿದೆ. ಅದರೊಂದಿಗೆ ಉಳಿದೆಲ್ಲಾ ಅಭಿವೃದ್ಧಿ ಕೆಲಸಗಳಿಗೆ ಅವರ ಸಹಕಾರ ಬಯಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಬಸವರಾಜ್, ಮಾಜಿ ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಸದಸ್ಯರಾದ ಟಿ.ರಾಜಶೇಖರ್, ಕವಿತಾ, ಇಂದಿರಾ, ಅರುಣ್‌ಕುಮಾರ್, ವಿದ್ಯಾ, ಮಧುಕುಮಾರ್ ರಾಜ್ ಅರಸ್, ಸುಜಾತಶಿವಕುಮಾರ್, ಕುಮಾರ್, ಕುಮಾರೆಗೌಡ, ಪರಮೇಶ್ ರಾಜ್ ಅರಸ್, ರೂಪಕುಮಾರ್, ಸೈಯದ್ ಜಾವಿದ್, ಗೋಪಿ, ಅನುಮಧುಕರ್, ಶೀಲಾದಿನೇಶ್, ಖಲಂದರ್, ಮುನೀರ್ ಅಹಮದ್, ಮಣಿಕಂಠ, ಶಾದಬ್ ಅಲಂಖಾನ್, ವಿಫುಲ್‌ಕುಮಾರ್ ಜೈನ್, ಮಂಜುಳಾ, ಗುರುಮಲ್ಲಪ್ಪ, ಲಕ್ಷ್ಮಣ್, ರಾಜು, ದೀಪರವಿಕುಮಾರ್, ಭವ್ಯ, ಲಕ್ಷ್ಮಣ, ಮಂಜುಳ, ಲಲಿತ ಉಪಸ್ಥಿತರಿದ್ದರು.

Amritesh Channakeshav was elected unopposed as Municipal Council Vice President

About Author

Leave a Reply

Your email address will not be published. Required fields are marked *