September 19, 2024

ತಮಿಳುನಾಡಿಗೆ ನೀರು ಬಿಟ್ಟರೆ ಬೆಂಗಳೂರಿನ ಜನರಿಗೂ ಕುಡಿಯುವ ನೀರಿನ ತತ್ವಾರ

0
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಐಎನ್‌ಡಿಐಎ ನಲ್ಲಿ ಇರುವ ಕಾರಣಕ್ಕೆ ಒತ್ತಡದಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ನಮ್ಮ ರಾಜ್ಯದ ರೈತರಷ್ಟೇ ಅಲ್ಲ. ಬೆಂಗಳೂರಿನ ಜನರಿಗೂ ಕುಡಿಯುವ ನೀರಿನ ತತ್ವಾರ ಎದುರಾಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸಕಾರವನ್ನು ಎಚ್ಚರಿಸಿದರು.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವರ್ಷ ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಬಹಳಷ್ಟು ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿದೆ. ರಾಜ್ಯ ಸರ್ಕಾರದಿಂದ ತಮಿಳು ನಾಡಿಗೆ ಈ ವಿಚಾರವನ್ನು ಮನವರಿಕೆ ಮಾಡುವ ಕೆಲಸ ಆಗಬೇಕು ಎಂದರು.

ಈಗಾಗಲೇ ಬೆಂಗಳೂರಿಗೆ ಅಗತ್ಯ ಇರುವಷ್ಟು ನೀರು ಪೂರೈಸಲಾಗುತ್ತಿಲ್ಲ. ಮತ್ತೊಂದೆಡೆ ವಿದ್ಯುತ್ ಇಲ್ಲ. ಈ ಎಲ್ಲಾ ಕಾರಣಕ್ಕೆ ಮಂಡ್ಯ, ಮೈಸೂರು ಭಾಗದ ಜನರಿಗೂ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಜನರ ದೃಷ್ಠಿಯಿಂದ ಯೋಚಿಸುತ್ತಿಲ್ಲ. ಅವರೊಳಗಿನ ಗೊಂದಲದ ಕಾರಣಕ್ಕೆ ರಾಜ್ಯ ಜನರ ಹಿತದೃಷ್ಠಿ ಬಲಿಕೊಡುವ ಕೆಲಸ ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವುದನ್ನು ಗಟ್ಟಿಧ್ವನಿಯಲ್ಲಿ ಮನವರಿಕೆ ಮಾಡಬೇಕಿತ್ತು. ಅದು ಆಗುತ್ತಿಲ್ಲ ಎಂದರು.

ವಿದ್ಯುತ್ ನಿರ್ವಹಣೆಯಲ್ಲೂ ಸರ್ಕಾರ ವಿಫಲವಾಗಿದೆ. ಬರಗಾಲ ಬಂದಿರುವುದು ಇದೇ ಮೊದಲಲ್ಲ. ಹಿಂದೆ ನಮ್ಮ ಸರ್ಕಾರ ಇದ್ದಾಗಲೂ ಬರಗಾಲ ಬಂದಿತ್ತು. ಆಗಲೂ ನಾವು ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಿದ್ದೇವೆ. ಇಂದಿನಷ್ಟು ಬೇರೆ ಬೇರೆ ವಿದ್ಯುತ್ ಮೂಲಗಳು ಇರಲಿಲ್ಲ. ಕೇವಲ ಬಳ್ಳಾರಿ ಮತ್ತು ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಜಲ ವಿದ್ಯುತ್ ಮೇಲೆ ಅವಲಂಭಿತವಾಗಿದ್ದೆವು ಎಂದರು.

ಅಂತಹ ಸಂದರ್ಭದಲ್ಲೂ ನಾವು ಗುಜರಾತ್, ಛತ್ತೀಸ್‌ಗಡಗಳಿಂದ ವಿದ್ಯುತ್ ತಂದಿದ್ದೆವು. ಗ್ರಿಡ್ ಕೊರತೆ ಇದ್ದರೂ ಅದನ್ನೂ ನಾವು ನೀಗಿಸಿದ್ದೇವೆ. ಈಗ ಸೋಲಾರ್, ವಿಂಡ್ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಇಷ್ಟೆಲ್ಲಾ ಇದ್ದರೂ ಪವರ್ ಕಟ್ ಮಾಡಲಾಗುತ್ತಿದೆ. ಸರಿಯಾಗಿ ಏನಾಗುತ್ತಿದೆ ಎನ್ನುವ ಮಾಹಿತಿ ಕೊಡುವ ಸ್ಥಿತಿಗೆ ಸರ್ಕಾರ ತಲುಪಿದೆ ಎಂದು ದೂರಿದರು.

ಮುಂದಿನ ಮೇ ವರೆಗೆ ಹೇಗೆ ವಿದ್ಯುತ್ ನಿರ್ವಹಣೆ ಮಾಡುತ್ತೀರಿ. ಎಷ್ಟು ಉತ್ಪಾದನೆ ಇದೆ. ಎಷ್ಟು ಹೆಚ್ಚುವರಿ ಬೇಕಾಗಬಹುದು, ಕೇಂದ್ರದ ಗ್ರಿಡ್‌ನಿಂದ ಎಷ್ಟು ಪೂರೈಕೆಯಾಗುತ್ತಿದೆ ಎಲ್ಲವನ್ನೂ ಒಳಗೊಂಡ ಶ್ವೇತಪತ್ರವನ್ನು ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.

ಹಿಂದೂ ದೇವಸ್ಥಾನಗಳು, ಮಠಮಂದಿರಗಳಿಗೆ ಸಂಬಂಧಿಸಿದ ಫೈಲ್‌ಗಳು ಸರ್ಕಾರಕ್ಕೆ ಹೋದರೆ ಹಿಂದಕ್ಕೆ ಬರುತ್ತಿದೆ. ಮಠ ಮಾನ್ಯಗಳು ಒಳ್ಳೆ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ಅವುಗಳಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ ಎಂದರು.

ಆದರೆ ಆರ್ಥಿಕ ಇಲಾಖೆಯಲ್ಲಿರುವ ಅಧಿಕಾರಿಗಳು ಹಿಂದೂಗಳು, ಮಠ ಮಂದಿರಗಳ ಫೈಲ್‌ಗಳನ್ನು ತಡೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕುಮ್ಮಕ್ಕು ಕೊಡುತ್ತಿರುವವರು ಯಾರು? ಮುಖ್ಯಮಂತ್ರಿಗಳೇ ನಿರ್ದೇಶನ ನೀಡಿದ್ದಾರ ಎನ್ನುವ ಗೊಂದಲಗಳು ಕಾಡುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

If water is left for Tamil Nadu it is also the source of drinking water for the people of Bengaluru

About Author

Leave a Reply

Your email address will not be published. Required fields are marked *

You may have missed