September 19, 2024

ನ.25 ರೊಳಗೆ ಹಿಂದುಳಿದ ವರ್ಗದವರ ಸಾಮಾಜಿಕ, ಶೈಕ್ಷಣಿಕ ವರದಿ ಸಲ್ಲಿಕೆ

0
ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶಹೆಗ್ಡೆ

ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶಹೆಗ್ಡೆ

ಚಿಕ್ಕಮಗಳೂರು: ಹಿಂದುಳಿದ ವರ್ಗದವರ ಸಾಮಾಜಿಕ, ಶೈಕ್ಷಣಿಕ ವರದಿಯನ್ನು ನವೆಂಬರ್ ೨೫ ರೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶಹೆಗ್ಡೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈಗಾಗಲೇ ಸರ್ಕಾರಕ್ಕೆ ಹಳೆ ವರದಿಗಳ ಪಟ್ಟಿಯನ್ನು ಕೊಟ್ಟಿದ್ದೇವೆಂದು ತಿಳಿಸಿ,ಬಲಿಜ,ಗೌಂಡರ್ ಸೇರಿದಂತೆ ಸಮುದಾಯದ ಬದಲಾವಣೆಗೆ ಮೂರ್‍ನಾಲ್ಕು ಅರ್ಜಿಗಳು ಆಯೋಗಕ್ಕೆ ಬಂದಿವೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಕೆಲವು ಸಮುದಾಯಗಳು ತಮ್ಮ ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿದವು ಈಗಾಗಲೇ ಸ್ಥಳಪರಿಶೀಲನೆ ನಡೆಸಲಾಗಿದೆ. ಬೇಡಿಕೆ ಮುಂದಿಟ್ಟಿರುವವರ ಸಮಸ್ಯೆಯನ್ನು ಆಲಿಸಲಾಗಿದೆ ಎಂದರು.

ಗೌಂಡರ್ ಸಮುದಾಯವನ್ನು ೩(ಎ)ಗೆ ಪಟ್ಟಿಯಲ್ಲಿ ಸೇರಿಸಿದ್ದು, ೨(ಎ)ಗೆ ಸೇರಿಸಲು ಒತ್ತಾಯಿಸಿರುವ ಹಿನ್ನಲೆಯಲ್ಲಿ ಅಧ್ಯಯನಕೈಗೊಂಡಿದ್ದು, ವಾಸ್ತವಾಂಶವನ್ನು ನೋಡಿದ್ದೇವೆ. ಬಲಿಜ ಸಮುದಾಯದ ಶೈಕ್ಷಣಿಕವಾಗಿ ೨(ಎ)ಗೆ ಸೇರಿದರೆ ಉದ್ಯೋಗದಲ್ಲಿ ೩(ಎ)ಗೆ ಸೇರಿಸಲಾಗಿದೆ.ಎರಡು ಕಡೆ ಸಭೆ ನಡೆಸಿ ವಿವರ ಪಡೆದಿದ್ದೇವೆ. ಈ ಕುರಿತು ಆಯೋಗವು ಸರ್ಕಾರಕ್ಕೆ ವರದಿ ನೀಡಲಿದೆ ಎಂದು ತಿಳಿಸಿದರು.

ಬಲಿಜ ಸಮುದಾಯದವರನ್ನು ೨ ಕಡೆ ಸೇರಿಸಿರುವ ಕುರಿತು ನ್ಯಾಯಾಲಯದಲ್ಲಿ ರಿಟ್‌ಪಿಟಿಷನ್ ಇದೆ. ಹಿಂದಿನ ಕಾರ್ಯದರ್ಶಿಯವರು ತೀರ್ಮಾನದ ಮೇಲೆ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಆಯೋಗದಿಂದ ಸಲಹೆ ಕೊಡಲಾಗುವುದು. ಸರ್ಟಿಫಿಕೇಟ್ ಕೊಡುವಾಗ ಹೊಂದಲು ಏರ್ಪಡುತ್ತಿದ್ದು, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಮೇಲ್ಮನವಿ ಹಾಕಬಹುದಾಗಿದೆ ಎಂದರು.

ಹಿಂದುಳಿದ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಪೋಷಕರು ಯಾವಾಗ ಅಗತ್ಯವಿದೆ ಅಲ್ಲಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಅಪೀಲುಹಾಕಲು ಅವಕಾಶವೂ ಇದೆ. ಹಿಂದುಳಿದ ವರ್ಗದವರಿಗೆ ಜಾತಿಪ್ರಮಾಣ ಪತ್ರ ಪಡೆದರೆ ೫ ವರ್ಷಮಾತ್ರ ಅವಕಾಶ ಇದೆ. ಶಾಲೆಗೆ ಮಕ್ಕಳನ್ನು ಸೇರಿಸು ವಾಗ ತಂದೆಯ ಜಾತಿ ಪ್ರಮಾಣಪತ್ರ ತೋರಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ತರೀಕೆರೆ ತಾಲೂಕಿನಲ್ಲಿ ಜಾತಿಯಲ್ಲಿ ತಿಯಾನ್ ಎಂದಿದ್ದರೆ, ಶಾಲೆಗೆ ಸೇರಿಸುವಾಗ ತಿಯಾರ್ ಎಂದು ತಿಳಿಸಲಾಗಿದೆ. ರಾಜ್ಯದಲ್ಲಿ ತಿಯಾರ್ ಸಮುದಾಯವೇ ಇಲ್ಲವೆಂದು ಸ್ಪಷ್ಟಪಡಿಸಿದರು.ಸರ್ಕಾರದ ದಾಖಲೆ ಪ್ರಕಾರವೇ ಜಾತಿ ಪ್ರಮಾಣ ಪತ್ರ ಕೊಡಬೇಕಾಗುತ್ತದೆ ಎಂದು ತಿಳಿಸಿದರು.

ಆಯೋಗದ ಸದಸ್ಯರಾದ ಕಲ್ಯಾಣಕುಮಾರ್, ರಾಜಶೇಖರ್, ಅರುಣ್‌ಕುಮಾರ್, ಶಾರದನಾಯಕ್ ಇದ್ದರು.

Submission of backward class report by Nov.25

About Author

Leave a Reply

Your email address will not be published. Required fields are marked *

You may have missed