September 20, 2024

ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ

0
ನಾಗರ ಕಟ್ಟೆಗಳ ಬಳಿ ಬೆಳಗಿನ ೫ ಗಂಟೆಯಿಂದಲೇ ನಾಗದೇವತೆಗಳಿಗೆ ತನಿ ಎರೆದ ಭಕ್ತರು

ನಾಗರ ಕಟ್ಟೆಗಳ ಬಳಿ ಬೆಳಗಿನ ೫ ಗಂಟೆಯಿಂದಲೇ ನಾಗದೇವತೆಗಳಿಗೆ ತನಿ ಎರೆದ ಭಕ್ತರು

ಚಿಕ್ಕಮಗಳೂರು: ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆಯುವ ನಾಗರ ಪಂಚಮಿಯನ್ನು ಸೋಮವಾರ ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನಗರದ ಬಸವನಹಳ್ಳಿ ಮುಖ್ಯರಸ್ತೆಯ ಅರಳಿ ಕಟ್ಟೆ, ಬೋಳರಾಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿರು ನಾಗರ ಕಟ್ಟೆಗಳ ಬಳಿ ಬೆಳಗಿನ ೫ ಗಂಟೆಯಿಂದಲೇ ನಾಗದೇವತೆಗಳಿಗೆ ತನಿ ಎರೆದ ಭಕ್ತರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೋರಿದರು.

ನಾಗರ ಪಂಚಮಿ ಅಂಗವಾಗಿ ಎಲ್ಲಾ ದೇವಸ್ಥಾನಗಳು, ಮನೆ ಮನೆಗಳಲ್ಲೂ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ನೂರಾರು ಮಹಿಳೆಯರು, ಹೆಣ್ಣು ಮಕ್ಕಳು ನಾಗರ ಪ್ರತಿಮೆಗಳಿಗೆ ಹಾಲು, ತುಪ್ಪದ ಅಭಿಷೇಕದೊಂದಿಗೆ ನಾಗಾರಾಧನೆಮಾಡಿದರು.

ಸುಬ್ರಮಣ್ಯ ಅಷ್ಠೋತ್ತರ, ಸರ್ಪಗಾಯತ್ರಿ ಮಂತ್ರಗಳೊಂದಿಗೆ ನಾಗರ ಪೂಜೆ ನೆರವೇರಿಸಲಾಯಿತು. ಹಸಿ ತಂಬಿಟ್ಟು, ಎಳ್ಳಿನ ಚಿಗಳಿ, ಸಿಹಿಗಡುಬು, ನುಚ್ಚಿನ ಉಂಡೆಗಳನ್ನು ಅರ್ಪಿಸಿ ಪ್ರಾರ್ಥಿಸಲಾಯಿತು.

Nagar Panchami celebration with devotion

 

About Author

Leave a Reply

Your email address will not be published. Required fields are marked *