September 19, 2024

ಉಳುವಾಗಿಲಿನ ರಂಜಿತಾಗೆ ಪಿಎಚ್‌ಡಿ ಪದವಿ ಪ್ರದಾನ

0
ಉಳುವಾಗಿಲು ಗ್ರಾಮದ ಯು.ಎನ್.ರಂಜಿತಾ

ಉಳುವಾಗಿಲು ಗ್ರಾಮದ ಯು.ಎನ್.ರಂಜಿತಾ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕು ಉಳುವಾಗಿಲು ಗ್ರಾಮದ ಯು.ಎನ್.ರಂಜಿತಾ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಗೆ ಭಾಜನರಾಗಿದ್ದಾರೆ.

ಆನ್ ಅಟೆಂಪ್ಟ್ ಟುವರ್ಡ್ಸ ಆಟೋಮೇಷನ್ ಆಫ್ ಅರ್ಲಿ ಡೆಟೆಕ್ಷನ್ ಆಫ್ ಲಗ್ಸ್ ಕ್ಯಾನ್ಸರ್ ವಿಷಯ ಕುರಿತಂತೆ ಚಿಕ್ಕಮಗಳೂರು ಎಐಟಿ ಪ್ರೊಫೆಸರ್ ಮತ್ತು ಎಚ್‌ಓಡಿ ಡಾ.ಎಂ.ಎ.ಗೌತಮ್ ಮಾರ್ಗದರ್ಶನದಲ್ಲಿ ರಂಜಿತಾ ತಜ್ಞಸಂಶೋಧನಾ ಪ್ರಬಂಧ ರಚಿಸಿದ್ದನ್ನು ಪುರಸ್ಕರಿಸಿ ಆಗಸ್ಟ್ ೧ರಂದು ಪಿಎಚ್‌ಡಿ ಪ್ರದಾನಿಸಲಾಗಿದೆ ಎಂದು ವಿಟಿಯು ಪ್ರಕಟಣೆ ತಿಳಿಸಿದೆ.

ಕಾಫಿಬೆಳೆಗಾರರಾದ ಯು.ಟಿ.ನಾಗರಾಜ್ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ತಿ ಯು.ಎನ್.ರಂಜಿತಾ ನಗರದ ಎಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಲ್ಲಿ ಅಸೋಸಿಯೇಟ್ ಪ್ರೊಫಸರ್ ಆಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಪತಿ ಬಿ.ಎನ್.ರಾಜೀವ್ ಬೆಂಗಳೂರಿನ ಮನ್‌ಜೀವ್ ಅವಿಯೇಷನ್‌ನಲ್ಲಿ ಮಾನವಸಂಪನ್ಮೂಲ ಅಧಿಕಾರಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ.

Ranjitha from Uluwagi was conferred with a PhD degree

About Author

Leave a Reply

Your email address will not be published. Required fields are marked *

You may have missed