September 16, 2024

ಅಸ್ಪೃಷ್ಯತೆ ತೊಡೆದುಹಾಕುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಬ್ರಹ್ಮಶ್ರೀ ನಾರಾಯಣ ಗುರುಗಳು

0
ನಾಗಲಕ್ಷ್ಮಿಚಿತ್ರ ಮಂದಿರದಲ್ಲಿ ಶ್ರೀನಾರಾಯಣಗುರು ಸ್ವಾಮಿ ಕನ್ನಡ ಚಲನಚಿತ್ರ ಪ್ರದರ್ಶನ ಉದ್ಘಾಟನೆ

ನಾಗಲಕ್ಷ್ಮಿಚಿತ್ರ ಮಂದಿರದಲ್ಲಿ ಶ್ರೀನಾರಾಯಣಗುರು ಸ್ವಾಮಿ ಕನ್ನಡ ಚಲನಚಿತ್ರ ಪ್ರದರ್ಶನ ಉದ್ಘಾಟನೆ

ಚಿಕ್ಕಮಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ನಿಜ ದೈವವನ್ನು ಪರಿಚಯಿಸಿದವರು, ಸಾಮಾಜಿಕ ಅನಿಷ್ಠಗಳಾದ ಜಾತೀಯತೆ ಮತ್ತು ಅಸ್ಪೃಷ್ಯತೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಅವರು ಭಾನುವಾರ ನಾಗಲಕ್ಷ್ಮಿಚಿತ್ರ ಮಂದಿರದಲ್ಲಿ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟ, ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘ, ಜಿಲ್ಲಾ ಆರ್ಯಈಡಿಗ ಸಂಘ ಹಾಗೂ ಜಿಲ್ಲಾ ಶ್ರೀ ನಾರಾಯಣಗುರು ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀನಾರಾಯಣಗುರು ಸ್ವಾಮಿ ಕನ್ನಡ ಚಲನಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣಗುರುಗಳು ಸಮಾಜ ಪರಿವರ್ತನೆಗೆ ಕ್ರಾಂತಿಕಾರಿ ಮುನ್ನುಡಿ ಬರೆದವರು. ಅವರ ಜೀವನ ಚರಿತ್ರೆಯನ್ನು ಪರಿಚಯಿಸುವ ಚಲನಚಿತ್ರವನ್ನು ನಿರ್ಮಿಸಿ ಅದನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುವ ಕೆಲಸ ಶ್ಲಾಘನೀಯ. ಇದರಿಂದ ನಾರಾಯಣಗುರುಗಳ ಬದುಕಿನ ಪ್ರೇರಣೆ ಎಲ್ಲರಿಗೂ ಸಿಗುವಂತಾಗಿದೆ. ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಇದಕ್ಕಾಗಿ ರಾಜಶೇಖರ ಕೋಟ್ಯಾನ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಭಾರತದ ನೆಲ ಬರಡು ನೆಲವಲ್ಲ. ಇಲ್ಲಿ ಸಾವಿರರು ಸಂತ ಮಹಂತರು ಕಾಲಕಾಲಕ್ಕೆ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಅನಿಷ್ಠವನ್ನು ದೂರ ಮಾಡುವಂತಹ ಮತ್ತು ನಿಜ ಧರ್ಮವನ್ನು ಜನರ ಮನದಲ್ಲಿ ಪ್ರತಿಷ್ಟಾಪಿಸುತ್ತಾ ಬಂದಿದ್ದಾರೆ. ನಾರಾಯಣಗುರುಗಳು ಅಂತಹ ಶ್ರೇಷ್ಟ ಸಂತರಲ್ಲಿ ಒಬ್ಬರು ಎಂದರು.

ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಚಲನಚಿತ್ರದ ನಾಯಕ ನಟ, ನಿರ್ದೇಶಕ, ನಿರ್ಮಾಪಕರಾದ ಡಾ.ರಾಜಶೇಖರ ಕೋಟ್ಯಾನ್ ಮಾತನಾಡಿ, ನಾರಾಯಣಗುರುಗಳ ತತ್ವಗಳು ಇಡೀ ದೇಶಕ್ಕೆ ಪರಿಚಯವಾಗಬೇಕು ಎನ್ನುವ ಉದ್ದೇಶದಿಂದ ಚಲನಚಿತ್ರ ನಿರ್ಮಸಲಾಗಿದೆ. ಈಗಾಗಲೇ ವಿದೇಶಗಳೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ೧೦೦ ಕ್ಕೂ ಹೆಚ್ಚುಕಡೆ ಚಿತ್ರ ಪ್ರದರ್ಶನಕಂಡಿದೆ. ಇದೀಗ ಪ್ರತಿ ಊರುಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದು ರಾಜ್ಯ ಪ್ರಶಸ್ತಿ ಗಳಿಸಿದ ಚಿತ್ರವಾಗಿದೆ ಎಂದು ತಿಳಿಸಿದರು.

ಶ್ರೀನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ನಾರಾಯಣ ಗುರುಗಳು ಬದುಕಿದ ರೀತಿ ಮತ್ತು ಅವರು ಕೊಟ್ಟ ಸಂದೇಶಗಳು ಇಂದಿಗೂ ಜೀವಂತವಾಗಿದೆ. ಅವರು ಈ ದೇಶ ಕಂಡ ಅತ್ಯುತ್ತಮ ಸಂತ. ಯುವಜನತೆ ಅವರ ಸಂದೇಶಗಳಿಂದ ಪ್ರಭಾವಿತರಾಗಬೇಕು ಎನ್ನುವ ಕಾರಣಕ್ಕೆ ಈ ಚಲನ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಹೆ.ರು.ರತ್ನಾಕರ್, ನಾರಾಯಣಗುರು ಸಮಿತಿಯ ಗೌರವಾಧ್ಯಕ್ಷ ಶಾಂತಕುಮಾರ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುಪೂಜಾರಿ, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಗುಣಶೇಖರ್, ಆರ್ಯ ಈಡಿಗ ಸಂಘದ ಅಧ್ಯಕ್ಷ ಚಂದ್ರಶೇಖರ್, ಸಂಘದ ಉಪಾಧ್ಯಕ್ಷ ಕೆ.ರಾಜು, ಬಿಲ್ಲವ ಸಂಘದ ಗೌರವಾಧ್ಯಕ್ಷ ವಿಠ್ಠಲ್ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ನಾರಾಯಣಗುರು ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಬಿಲ್ಲವ ಸಂಘದ ಅಧ್ಯಕ್ಷ ಗುಣಶೇಖರ್, ನಾಗಲಕ್ಷ್ಮೀ ಚಿತ್ರ ಮಂದಿರದ ಮಾಲೀಕ ವಿಜಯಕುಮಾರ್ ಮತ್ತಿತರರು ಉಸ್ಥಿತರಿದ್ದರು.

Sreenarayanguru Swamy Kannada Movie

About Author

Leave a Reply

Your email address will not be published. Required fields are marked *