September 8, 2024

ಅಂಬೇಡ್ಕರ್ ಕುರಿತ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ

0
State Level Competitive Examination on Ambedkar

State Level Competitive Examination on Ambedkar

ಚಿಕ್ಕಮಗಳೂರು: ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಡಾ|| ಬಿ.ಆರ್.ಅಂಬೇಡ್ಕರ್ ಕುರಿತು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯು ಭಾನುವಾರ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಪರಿಷತ್ತಿನ ಜಿಲ್ಲಾ ಘಟಕದ ಮುಖಂಡರುಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಂಡರು

ಈ ವೇಳೆ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ತಿನ ಮಹಿಳಾ ಜಿಲ್ಲಾಧ್ಯಕ್ಷೆ ಸಂಗೀತಾ ಪ್ರಸಾದ್ ಪ್ರತಿ ವ? ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತಾಗಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತವಾಗಿ ಪರೀಕ್ಷೆ ನಡೆಸಿಕೊಂಡು ಬರುತ್ತಿದ್ದು ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ದೇಶದ ಪ್ರತಿಯೊಬ್ಬ ಯುವಕರು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಬಾಬಾ ಸಾಹೇಬರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರು ಭಾರತದ ಮಹಾ ನಾಯಕ. ದೇಶ ಸದೃಢವಾಗಿರಬೇಕೆಂದರೆ ದೇಶದ ಸಂವಿಧಾನವೆಂಬ ಕಾನೂನು ಸದೃಢವಾಗಿರಬೇಕು. ಅಂತಹ ಸದೃಢವಾದ ಕಾನೂನು ಚೌಕಟ್ಟನ್ನು ಹಾಕಿಕೊಟ್ಟವರು ಅಂಬೇಡ್ಕರ್ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಯು ರಾಜ್ಯದಲ್ಲಿ ಪ್ರಥಮ ಬಹುಮಾನ ಗಳಿಸಿದವರಿಗೆ ೫ ಲಕ್ಷ, ದ್ವಿತಿಯ ೨.೫೦ ಲಕ್ಷ, ತೃತೀಯ ೧ ಲಕ್ಷ ರೂ. ಬಹುಮಾನ ಲಭಿಸಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ೧೫ ಸಾವಿರ, ದ್ವಿತೀಯ ೧೦ ಸಾವಿರ ಹಾಗೂ ತೃತೀಯ ೫ ಸಾವಿರ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶಶಿಧರ್ ಮಾತನಾಡಿ ಅಂಬೇಡ್ಕರ್ ಅವರು ಹಾಕಿಕೊಟ್ಟ ಸಂವಿಧಾನವೆಂಬ ಚೌಕಟ್ಟು ಪ್ರತಿಯೊಬ್ಬ ಭಾರತೀಯರಿಗೆ ವರದಾನವಿದ್ದಂತೆ. ಆ ನಿಟ್ಟಿನಲ್ಲಿ ಅಂಬೇಡ್ಕರ್ ಕಂಡಂತಹ ಸಮ ಸಮಾಜ ನಿರ್ಮಾಣಕ್ಕೆ ಮುಂದಾದರೆ ಅವರ ತ್ಯಾಗಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದರು.

ಪರಿಷತ್ತಿನ ಜಿಲ್ಲಾಧ್ಯಕ್ಷ ಸಮರ್ಥ್ ಮಾತನಾಡಿ ದೇಶದ ಎಲ್ಲಾ ಯುವಕರು ವಿದ್ಯಾವಂತರಾಗಬೇಕು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು ಎಂಬುದು ಈ ಪರೀಕ್ಷೆಯ ಉದ್ದೇಶವಾಗಿದ್ದು ಜಿಲ್ಲೆಗೆ ಪ್ರಥಮ ಬಹುಮಾನ ಬರುವಂತಾಗಲಿ ಎಂದು ಶುಭ ಕೋರಿದರು.

ಇದೇವೇಳೆ ಜಿಲ್ಲೆಯಿಂದ ಸುಮಾರು ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು. ಈ ಸಂದರ್ಭ ದಲ್ಲಿ ವಾಲ್ಮೀಕಿ ಯುವಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು, ಅಬಕಾರಿ ಇಲಾಖೆ ಉಪ ನಿರೀಕ್ಷಕರು ಪಿ.ರಂಜನ್, ಜಿ.ಪಂ. ಮಾಜಿ ಸದಸ್ ಜೆ.ಡಿ.ಲೋಕೇಶ್, ದಲಿತ ಮುಖಂಡರುಗಳಾದ ಎಂ.ಬಿ.ಲೋಕೇಶ್ ಹುಣಸೇ ಮಕ್ಕಿ ಲಕ್ಷ್ಮಣ್, ಕೇಶವ, ಮೋಹನೇಶ್, ಮತ್ತಿತರರು ಇದ್ದರು.

State Level Competitive Examination on Ambedkar

About Author

Leave a Reply

Your email address will not be published. Required fields are marked *

You may have missed