September 16, 2024

ಆ.31ಕ್ಕೆ ಕಲಾಮಂದಿರದಲ್ಲಿ ನೀ ನಲ್ಲದೆ ಮತ್ಯಾರು ಇಲ್ಲವಯ್ಯ ವಚನ ನೃತ್ಯರೂಪಕ

0
ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘ ಹಾಗೂ ಚಿಕ್ಕಮಗಳೂರಿನ ಸಮಸ್ತ ಸಾಂಸ್ಕೃತಿಕ ಸಂಘಟನೆಗಳ ಸುದ್ದಿಗೋಷ್ಠಿ

ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘ ಹಾಗೂ ಚಿಕ್ಕಮಗಳೂರಿನ ಸಮಸ್ತ ಸಾಂಸ್ಕೃತಿಕ ಸಂಘಟನೆಗಳ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಭಾರತದ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನ ಬಸವಣ್ಣನವರ ಆಯ್ದ ೪೪ ವಚನಗಳನ್ನು ಆಧರಿಸಿದ “ ನೀ ನಲ್ಲದೆ ಮತ್ಯಾರು ಇಲ್ಲವಯ್ಯ” ಎಂಬ ವಚನ ನೃತ್ಯರೂಪಕ ಆ.೩೧ ರಂದು ಗುರುವಾರ ಸಂಜೆ ೬.೩೦ಕ್ಕೆ ನಗರದ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಾಹಿತಿ ಚಟ್ನಳ್ಳಿ ಮಹೇಶ್, ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘ ಹಾಗೂ ಚಿಕ್ಕಮಗಳೂರಿನ ಸಮಸ್ತ ಸಾಂಸ್ಕೃತಿಕ ಸಂಘಟನೆಗಳ ಸಹಯೋಗದಲ್ಲಿ ಡಾ|| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಶ್ರೀನಿವಾಸ ಜಿ.ಕಪ್ಪಣ್ಣನವರ ಪರಿಕಲ್ಪನೆ ಮತ್ತು ಆಯೋಜನೆಯ ಈ ನೃತ್ಯರೂಪಕದ ವಚನಗಳಿಗೆ ಸಿ.ಅಶ್ವಥ್ ಸಂಗೀತ ನೀಡಿದ್ದಾರೆ. ತರಬೇತಿ ಪಡೆದ ೨೪ ಮಹಿಳಾ ಕಲಾವಿದರು ಭಾಗವಹಿಸಲಿದ್ದು ತಂಡದ ನಿರ್ವಹಣೆಯನ್ನು ವೈ.ಡಿ. ಬಾದಾಮಿಯವರು ನೆರವೇರಿಸಲಿದ್ದಾರೆ ಸ್ನೇಹ ಕಪ್ಪಣ್ಣನವರು ವಸ್ತ್ರ ವಿನ್ಯಾಸ, ನೃತ್ಯ ಸಂಯೋಜನೆ, ನಿರ್ದೇಶನ ನೀಡಿರುವುದಲ್ಲದೆ ತಂಡದ ನಾಯಕಿಯಾಗಿ ಪಾತ್ರನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯವನ್ನು ಇಲ್ಲಿನ ಬಸವಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಯವರು ವಹಿಸಲಿದ್ದು, ಶಾಸಕ ಹೆಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ|| ಗೋಪಾಲಕೃಷ್ಣ ಬಿ., ಜಿಲ್ಲಾ ಪೊಲೀಸ್, ಅಧೀಕ್ಷಕರಾದ ಡಾ.ವಿಕ್ರಂ ಅಮ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ದೇಶದ ೮೭ ಪ್ರಮುಖ ನಗರಗಳಲ್ಲಿ ಪ್ರದರ್ಶನ ಕಂಡಿರುವ ಈ ರೂಪಕದ ಅಭಿಯಾನವನ್ನು ಮೆಚ್ಚಿಸುತ್ತ ಪ್ರಧಾನಮಂತ್ರಿಯವರು ಸಾಣೆ ಹಳ್ಳಿ ಶ್ರೀಗಳಿಗೆ ಪತ್ರ ಬರೆದಿರುವುದು ಇದರ ಯಶಸ್ಸಿನ ಎತ್ತರವನ್ನು ತೋರಿಸುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಜ್ಜಂಪುರ ಎ.ಸಿ. ಚಂದ್ರಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವೀಶ್ ಬಸಪ್ಪ, ಕಲ್ಮಟ್ಟೆ ಪುಸ್ತಕದ ಮನೆಯ ನಾಗರಾಜರಾವ್ ಕಲ್ಕಟ್ಟೆ ಉಪಸ್ಥಿತರಿದ್ದರು

Matyaru Illavayya Vachana choreographer at Kalamandir on Aug. 31

About Author

Leave a Reply

Your email address will not be published. Required fields are marked *