September 16, 2024

ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಗೃಹಲಕ್ಷ್ಮಿಯೋಜನೆ ಸಹಕಾರಿ

0
ಕುವೆಂಪು ಕಲಾಮಂದಿರದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ

ಕುವೆಂಪು ಕಲಾಮಂದಿರದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ

ಚಿಕ್ಕಮಗಳೂರು: ಮಹಿಳೆಯರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ’ಗೃಹಲಕ್ಷ್ಮಿ’ ಯೋಜನೆಯನ್ನು ಜಾರಿಗೆ ತಂದು ಅನುಷ್ಠಾನ ಮಾಡಲಾಗುತ್ತಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

ಅವರು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯತ್ರ ನಾರ್ಯಸ್ತು ಪೂಜ್ಯನೇ ರಮನ್ತೇ ತತ್ರ ದೇವತಾ ಎಂಬ ನುಡಿಯಂತೆ ನಾರಿಯರ ಮೇಲಿನ ಪೂಜ್ಯತಾ ಭಾವನೆಯನ್ನು ಎತ್ತಿಹಿಡಿಯಲು ನಮ್ಮ ಸಂಪ್ರದಾಯವು ಮಹಿಳೆಯರಿಗೆ ಮೌಲ್ಯಯುತವಾದ ಸ್ಥಾನವನ್ನು ನೀಡಿದ್ದು ಇದು ಸುಧಾರಣೆ ಮತ್ತು ಸಬಲೀಕರಣದ ಬಗ್ಗೆ ಸದಾ ನೆನಪು ಮಾಡಿಕೊಡುತ್ತದೆ ಮಹಿಳೆಯರ ಘನತೆ ಮತ್ತು ಗೌರವವನ್ನು ನೀಡುವುದರ ಬಗ್ಗೆ ಅವರನ್ನು ಉತ್ತಮ ರೀತಿಯಲ್ಲಿ ಕಾಣುವುದರ ಬಗ್ಗೆ ನಮ್ಮ ಸಾಂಪ್ರದಾಯಗಳು ನಮಗೆ ತಿಳುವಳಿಕೆ ನೀಡುತ್ತಾ ಬಂದಿದೆ ಎಂದರು.

ಮಹಿಳೆಯರನ್ನು ದೇವತೆಯಾಗಿ ಶಕ್ತಿ ಮತ್ತು ಶಾಂತಿಯ ಸಂಕೇತವಾಗಿ ನಮ್ಮ ಸಂಪ್ರದಾಯಗಳು ಮಹತ್ವವನ್ನು ನೀಡಿದೆ ಅಲ್ಲದೆ ಹೆಣ್ಣನ್ನು ಗೌರವಿಸುವ ಮತ್ತು ಸಲ್ಲಿಸಬೇಕಾದ ಹಕ್ಕುಗಳನ್ನು ನೀಡುವ ಪ್ರತಿ ರಾಜ್ಯವು ರಾ?ವು ಎತ್ತರಕ್ಕೆ ಬೆಳೆಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಹೇಳಿದರು.

ನಮ್ಮ ಐತಿಹಾಸಿಕ ಬೆಳವಣಿಗೆಯನ್ನು ಗಮನಿಸಿದಾಗ ಮಹಿಳಾ ಅಭಿವೃದ್ಧಿಯ ಮೇಲೆ ರಾ?ದ ಬೆಳವಣಿಗೆ ನಿಂತಿರುವುದನ್ನು ಕಾಣಬಹುದು. ನಮ್ಮ ಸಮಾಜವು ಮಹಿಳೆಯರನ್ನು ರಾಜಕಾರಣದಲ್ಲಿಯೂ ನಾಯಕರಾಗಿ ಸ್ವೀಕರಿಸಿದರು ಕೂಡ ಅನೇಕ ಕೌಟುಂಬಿಕ ಜೀವನದಲ್ಲಿ ಲಿಂಗ ಅಸಮಾನತೆಯನ್ನು ಕಾಣಬಹುದಾಗಿದೆ ಎಂದು ವಿ?ಧಿಸಿದರು.

ಈ ಎಲ್ಲಾ ಸಂಪ್ರದಾಯಿಕ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಈ ಯೋಜನೆ ಪ್ರಮುಖ ಭೂಮಿಕೆಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತದೆ ಎಂಬ ದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯು ಮಹಿಳಾ ಆರ್ಥಿಕ ಸಬಲೀಕರಣ ಧ್ಯೇಯದೊಂದಿಗೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿತಿಂಗಳು ೨ ಸಾವಿರ ರೂಗಳನ್ನು ನೀಡುವ ಯೋಜನೆಯಾಗಿದೆ ಸರ್ಕಾರದ ಆದೇಶದನ್ವಯ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಅದರಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ವಿತರಿಸಿರುವ ಅಂತ್ಯೋದಯ ಬಿಪಿಎಲ್ ಎಪಿಎಲ್ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿದ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿದ್ದು. ಈ ಯೋಜನೆ ಅಡಿ ಇಂದು ನಗದು ಸೌಲಭ್ಯವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಉದ್ದೇಶ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರ ಸಬಲೀಕರಣ ಮಾಡುವುದು ಹಾಗೂ ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಕ?ದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಕ?ದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದು, ಗೃಹಲಕ್ಷ್ಮಿ ಯೋಜನೆಯ ಉದ್ದೇಶವಾಗಿದೆ.

ಗೃಹಲಕ್ಷ್ಮಿ ಯೋಜನೆಯ ವೈಶಿಷ್ಟ್ಯ ಮತ್ತು ಪ್ರಯೋಜನಗಳು: ಮಹಿಳೆಯರಿಗೆ ಆತ್ಮವಿಶ್ವಾಸ ಹೆಚ್ಚಿಸಿ ಸ್ವಯಂ ಅರಿವು ಮೂಡಿಸಲು ಸಹಾಯ ಮಾಡುತ್ತದೆ.
ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಮತ್ತು ಅವರ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣವನ್ನು ನೀಡಲು ಅವಕಾಶ ಮಾಡಿಕೊಡುತ್ತದೆ.

ಜಿಲ್ಲೆಯಲ್ಲಿ ಒಟ್ಟು ೨,೩೭,೪೧೪ ಫಲಾನುಭವಿಗಳನ್ನು ನೋಂದಾಯಿಸಲಾಗಿದ್ದು ೪೭,೪೮,೨೮,೦೦೦ ರೂ. ಗಳನ್ನು ಇವರ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗುವುದು ನಗರದಲ್ಲಿ ಒಟ್ಟು ಈ ಕಾರ್ಯಕ್ರಮ ವಿಕ್ಷಿಸಲು ೧೬ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|| ವಿಕ್ರಮ್ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|| ಗೋಪಾಲ್ ಕೃ?, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜನಾಯಕ್ ಕೆ.ಎಸ್, ಸಿ.ಡಿ.ಪಿ.ಓ ಚರಣ್ ರಾಜ್ ಉಪಸ್ಥಿತರಿದ್ದರು.

Grilahakshmi Yojana Implementation Programme

About Author

Leave a Reply

Your email address will not be published. Required fields are marked *