September 8, 2024

ಸಾಮಾಜಿಕ ಸುಧಾರಣೆಯ ಕ್ರಾಂತಿಯ ಮೂಲಕ ಸಮಾಜದ ಬದಲಾವಣೆಗೆ ಮುಂದಾದ ಬ್ರಹ್ಮ ಶ್ರೀ ನಾರಾಯಣ ಗುರುಗಳು

0
ಸಾಮಾಜಿಕ ಸುಧಾರಣೆಯ ಕ್ರಾಂತಿಯ ಮೂಲಕ ಸಮಾಜದ ಬದಲಾವಣೆಗೆ ಮುಂದಾದ ಬ್ರಹ್ಮ ಶ್ರೀ ನಾರಾಯಣ ಗುರುಗಳು

ಸಾಮಾಜಿಕ ಸುಧಾರಣೆಯ ಕ್ರಾಂತಿಯ ಮೂಲಕ ಸಮಾಜದ ಬದಲಾವಣೆಗೆ ಮುಂದಾದ ಬ್ರಹ್ಮ ಶ್ರೀ ನಾರಾಯಣ ಗುರುಗಳು

ಚಿಕ್ಕಮಗಳೂರು: ಜಾತಿ ಸಂಘ, ಮೇಲು ಕೀಳು, ಅಸಮಾನತೆಯಂತಹ ಸಾಮಾಜಿಕ ಸಮಸ್ಯೆಗಳೇ ತುಂಬಿಕೊಂಡಿದ್ದ ಅಂದಿನ ಕಾಲದಲ್ಲಿ ಸಾಮಾಜಿಕ ಸುಧಾರಣೆಯ ಕ್ರಾಂತಿಯ ಮೂಲಕ ಸಮಾಜದ ಬದಲಾವಣೆಗೆ ಮುಂದಾದ ಬ್ರಹ್ಮ ಶ್ರೀ ನಾರಾಯಣ ಗುರುಗಳು ನಮ್ಮೆಲ್ಲರಿಗೂ ಮಾದರಿ ಎಂದು ಜಿಲ್ಲಾ ಶ್ರೀ ನಾರಾಯಣಗುರು ಸಮಿತಿ ಅಧ್ಯಕ್ಷ ಎಂ.ಕೃಷ್ಣಪ್ಪ ದಾಸರಹಳ್ಳಿ ಹೇಳಿದರು.

ಅವರು ನಗರದ ವಿಜಯಪುರದಲ್ಲಿರುವ ಶ್ರೀ ನಾರಾಯಣ ಸೇವಾ ಸಮಿತಿ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ ನೇ ಜಯಂತಿ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿದರು.

ಪ್ರತಿ ವರ್ಷ ಅದ್ಧೂರಿಯಾಗಿ ನಡೆಸಲಾಗುತ್ತಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವವನ್ನು ಈ ಬಾರಿ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು ಸಮುದಾಯ ಭವನ ನಿರ್ಮಾಣ ಮಾಡುತ್ತಿರುವ ಕಾರಣದಿಂದ ಹಣಕಾಸನ್ನು ಸಮುದಾಯ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ ಎಂದರು.

ಶೀಘ್ರವಾಗಿ ಸಮುದಾಯ ಭವನವನ್ನು ನಿರ್ಮಿಸಿ, ಮುಂದಿನ ದಿನಗಳಲ್ಲಿ ಸಮುದಾಯ ಭವನದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲು ಕಾರ್ಯಕಾರಿ ಸಮಿತಿ ತೀರ್ಮಾನಿಸಲಾಗಿದೆ, ೪.೫ ಕೋಟಿ ರೂ ವೆಚ್ಚದ ಎರಡು ಅಂತಸ್ಥಿನ ಸಮುದಾಯ ಭವನ ಹಾಗೂ ವಿದ್ಯಾರ್ಥಿನಿಯರಿಗಾಗಿ ೮ ಕೊಠಡಿಯ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಶ್ರೀ ನಾರಾಯಣಗುರು ಸಮಿತಿ ಗೌರವಾಧ್ಯಕ್ಷ ಕೆ.ಸಿ.ಶಾಂತಕುಮಾರ್ ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ನೇ ಜಯಂತೋತ್ಸವನ್ನು ಆಚರಣೆ ಮಾಡಲಾಗುತ್ತಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಲಾಯಿತು, ಸಾವಿರಾರು ಜನ ಸಮಾಜ ಬಾಂಧವರನ್ನು ಒಗ್ಗೂಡಿಸಿ, ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವವನ್ನು ವಿಜೃಂಭಣೆಯಿಂದ ಪ್ರತಿ ವರ್ಷ ಮಾಡಿಕೊಂಡು ಬಂದಿದ್ದು, ನಮ್ಮ ಸಮಾಜದವರಿಗಾಗಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇತರೆ ಖರ್ಚುವೆಚ್ಚವನ್ನು ಕಡಿತಗೊಳಿಸಿ ಸಮುದಾಯ ನಿರ್ಮಾಣಕ್ಕಾಗಿ ಹಣವನ್ನು ಮೀಸಲಿಡುವ ಸಲುವಾಗಿ ಈ ಭಾರಿಯ ಜಯಂತೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವವನ್ನು ಸರ್ಕಾರದ ವತಿಯಿಂದ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುತ್ತಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಮತ್ತು ತತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಗೆ ಅವರ ಜ್ಞಾನದ ಬಗ್ಗೆ ತಿಳಿಸುವ ಮೂಲಕ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಎಲ್ಲರೂ ಸಹಕಾರಿ ಆಗಬೇಕೆಂದು ತಿಳಿಸಿದರು.

ಸ್ಥಳಿಯ ಶಾಸಕ ಹೆಚ್.ಡಿ.ತಮ್ಮಯ್ಯ ಮತ್ತು ವಿವಿಧ ಪಕ್ಷದ ಮುಖಂಡರುಗಳು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಅನುದಾನ ಸಿಗುವಂತೆ ಶಿಫಾರಸ್ಸ್ ಮಾಡಿಸಿದ್ದು, ಅನೇಕ ನಾಯಕರು ಭರವಸೆಗಳನ್ನು ಕೊಟ್ಟಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ೪.೫ ಕೋಟಿ ರೂ ಅಂದಾಜು ವೆಚ್ಚ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಕುಮಾರ್, ಗುಣಶೇಖರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಕೆ.ಪಿ.ಸುರೇಶ್, ಮಾದವನ್, ಅಶೋಕ್, ಜನಾರ್ಧನ್, ಅಯ್ಯಪ್ಪ, ರಾಜು, ಪ್ರಭಾಕರ್, ರಾಜೇಶ್, ಚಂದ್ರು, ಜಗಧೀಶ್, ಶ್ರೀಧರ್, ಚಂದ್ರು, ಪ್ರತಾಪ್, ಉದಯ್, ರಾಜು, ಗಿರಿಜಾ, ಪ್ರೇಮಲತಾ, ಆಶಾಲತಾ, ಸವಿತಾ, ಗೀತಾ, ಮಂಜುಳಾ, ತಾರಕೇಶ್ವರಿ, ಶಕುಂತಲಾ, ಲಕ್ಷ್ಮೀ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

169th Jayanti Program of Brahmashree Narayanaguru

About Author

Leave a Reply

Your email address will not be published. Required fields are marked *

You may have missed