September 19, 2024

ಕ್ಷೇತ್ರದಲ್ಲಿ 10 ಸರ್ಕಾರಿ ಮಾದರಿ ಶಾಲೆಗಳನ್ನಾಗಿಸಲು ಗುರಿ

0
೧೫ ಲಕ್ಷ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ

೧೫ ಲಕ್ಷ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸಲು ನನ್ನ ಕನಸಾಗಿದ್ದು ಚಿಕ್ಕಮಗಳೂರು ಕ್ಷೇತ್ರದಲ್ಲಿ ಕನಿಷ್ಠ ೧೦ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದ್ದರು.

ಅವರು ಇಂದು ಚಿಕ್ಕದೇವನೂರು ಗ್ರಾಮ ಪಂಚಾಯಿತಿ ವ್ಯಪ್ತಿಯ ಡಿ. ಕಾರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸುಮಾರು ೧೫ ಲಕ್ಷ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

೧ ರಿಂದ ೭ ರವರೆಗೆ ಈ ಶಾಲೆಯನ್ನು ಗ್ರಾಮಸ್ಥರೆ ಮಾದರಿ ಶಾಲೆಯನ್ನಾಗಿ ಮಾಡುವ ಮೂಲಕ ನನ್ನ ಅರ್ಧ ಜವಾಬ್ದಾರಿಯನ್ನು ಕಡಿಮೆ ಮಾಡಿದ್ದೀರಿ ಇದಕ್ಕಾಗಿ ನಿಮ್ಮಗೆ ಅಭಿನಂದಿಸುತ್ತೇನೆ ಈ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಇರುವ ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮಾದರಿ ಶಾಲೆಗಳನ್ನಾಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕೆಳಹಂತದಿಂದ ಬಂದು ಹಲವಾರು ಕಷ್ಟ ಕಾರ್ಪಣ್ಯಗಳನ್ನು ಕಂಡಿರುವ ನಾನು ನೇರವಾಗಿ ಶಾಸಕನಾಗಿಲ್ಲ ಗ್ರಾಮಪಂಚಾಯಿತಿ ಸದಸ್ಯನಿಂದ ನಗರಸಭೆ ಅಧ್ಯಕ್ಷನಾಗುವವರೆಗೆ ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದು ಶಾಸಕನಾಗಿದ್ದೇನೆ ಎಂದರು.

ನೀವು ನೀಡಿರುವ ಈ ಬಹುದೊಡ್ಡ ಜವಾಬ್ದಾರಿಗೆ ಧಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು ಈ ಗ್ರಾಮದ ಕೆಲ ನನ್ನ ಸ್ನೇಹಿತರು ಚಿರಪರಿಚಿತರಾಗಿದ್ದು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಶ್ರಮಿಸಿ ಎಂದು ಕರೆ ನೀಡಿದರು.

ಬಯಲು ಭಾಗದ ಕೆರಗಳಿಗೆ ನೀರು ತುಂಬಿಸಲು ಯೋಜನೆ ಸಿದ್ದಪಡಿಸಲಾಗಿದ್ದು ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಭದ್ರಾಮೇಲ್ದಂಡೆ, ಕರಗಡ ಮುಂತಾದ ನೀರಾವರಿ ಯೋಜನೆಗಳಿಂದ ಈ ಭಾಗದ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಇದು ಕಾರ್ಯಗತವಾದರೆ ರೈತರ ಭೂಮಿ ನೀರಾವರಿಯಾಗಿ ಪರಿವರ್ತನೆ ಆಗಲಿದ್ದು ಉಳಿದಂತೆ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

೫ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣವಿನಿಯೋಗಿಸುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದೆ ಬಡವರ, ಹಿಂದುಳಿದವರ, ದೀನದಲಿತರ ಪರವಾಗಿ ಸರ್ಕಾರ ಈ ಯೋಜನೆಗಳನ್ನು ಅನುಷ್ಠಾನಮಾಡುತ್ತಿದ್ದಾರೆ ಎಂದು ಹೇಳಿದರು.

೮ ಲಕ್ಷ ರೂ. ವಾರ್ಷಿಕ ಆಧಾಯ ಮಿತಿ ಇರುವ ಖಾಸಗಿ ಶಾಲೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಡಿ.ಗ್ರೂಪ್ ನೌಕರರು ಗೃಹಲಕ್ಷ್ಮಿ ಯೋಜನೆಯ ೨ ಸಾವಿರ ರೂ. ಪಡೆಯಲು ಅರ್ಹರಿದ್ದು ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ. ಮೂಲಕ ಹಣ ವರ್ಗವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್ ವಹಿಸಿದ್ದರು, ಮುಖ್ಯ ಶಿಕ್ಷಕ ಕುಬೇರಪ್ಪ, ಗ್ರಾಮಪಂಚಾಯಿತಿ ಅಧ್ಯಕ್ಷ ಲೋಹಿತ್, ಗ್ರಾಮಸ್ಥರುಗಳಾದ ಬಸವರಾಜ್, ನಂಜುಂಡಪ್ಪ, ನಟರಾಜ್, ತಿಮ್ಮೇಗೌಡ, ನಂಜುಂಡಪ್ಪ ಹಾಗೂ ಶಿಕ್ಷಕರು ಅಧಿಕಾರಿಗಳು ಉಪಸ್ಥಿತರಿದ್ದರು.

15 lakhs Rs. Foundation stone laying for new school building work at cost

 

About Author

Leave a Reply

Your email address will not be published. Required fields are marked *

You may have missed