September 19, 2024

ಸೆ.7ಕ್ಕೆ ಮಳಲೂರು ಏತ ನೀರಾವರಿ ಕಾಮಗಾರಿಗೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ

0
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ

ಚಿಕ್ಕಮಗಳೂರು:  ಹಲವು ವ?ಗಳಿಂದ ನೆನಗುದ್ದಿಗೆ ಬಿದ್ದಿರುವ ಮಳಲೂರು ಏತ ನೀರಾವರಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಸೆ.೭ರಂದು ಗುರುವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ನಿಧಾನ ಧೋರಣೆ ಖಂಡಿಸಿ ಅಂದು ಮಳಲೂರು ಗ್ರಾಮದಿಂದ ನಗರದ ಅಜಾದ್ ಪಾರ್ಕ್ ವರೆಗೆ ಬೈಕ್‌ಜಾಥ ನಡೆಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

೧೯೯೮ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ೨೦೦೦ ಇಸವಿಯಲ್ಲಿ ಶಂಕುಸ್ಥಾಪನೆಯಾಗಿ ಪ್ರಾರಂಭವಾದ ಕಾಮಗಾರಿ ೧೬೦೦ ಎಕರೆ ರೈತರ ಭೂಮಿಗೆ ನೀರು ಒದಗಿಸಬೇಕಾಗಿದ್ದ ಯೋಜನೆ ಪೂರ್ಣಗೊಳ್ಳದೆ ರೈತರು ಹತಾಶರಾಗಿದ್ದಾರೆ ಎಂದರು.

ಮಳಲೂರು, ಕಂಬಿಹಳ್ಳಿ, ಸಿರಗಾಪುರ, ಬಿಗ್ಗನಹಳ್ಳಿ, ಬಿಕ್ಕೆಮನೆ ಸೇರಿದಂತೆ ಹಲವಾರು ಗ್ರಾಮಗಳು ಮಲೆನಾಡು ಭಾಗದಲ್ಲಿ ಇದ್ದರೂ ಸಹ ಬರಗಾಲ ಅನುಭವಿಸುತ್ತಿದ್ದಾರೆ. ಮಳಲೂರು ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದ್ದರೆ ಈ ಭಾಗದ ಕೆರೆಗಳು ತುಂಬಿ ಸದಾ ಹಸಿರಾಗಿರುವ ಜೊತೆಗೆ ಅಂಬಳೆ ಹೋಬಳಿಯ ಅರ್ಧ ಭಾಗದ ಜನರಿಗೆ ಕುಡಿಯುವ ನಿರೋದಗಿಸಿದಂತಾಗುತ್ತಿತ್ತು ಎಂದು ತಿಳಿಸಿದರು.

ಈಗಾಗಲೇ ಮೊದಲ ಹಂತದ ಕಾಮಗಾರಿ ಮುಗಿದು ದಶಕಗಳೆ ಕಳೆದಿದೆ ಇಂಟಕ್ ವೆಲ್, ಜಾಕ್ ವೆಲ್ ರೈಸಿಂಗ್ ಮೆನ್, ಪಂಪ್ ಅಳವಡಿಸುವ ಕಾರ್ಯಗಳು ಮುಗಿದಿವೆ ಪಂಪ್ ಹೌಸ್ ಸಹ ನಿರ್ಮಾಣವಾಗಿದ್ದು ಮೋಟಾರ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವುದಾಗಿ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ರವರೆ ಹೇಳುತ್ತಿದ್ದು ವಿದ್ಯುತ್ ಸಂಪರ್ಕ ಕಲ್ಪಿಸಿ ಪ್ರಥಮ ಹಂತದಲ್ಲಿ ನಿರೋದೊಗಿಸಬಹುದಾಗಿದ್ದರೂ ನೀರಾವರಿ ನಿಗಮ ಮೌನಕ್ಕೆ ಶರಣಾಗಿದೆ ಎಂದು ದೂರಿದರು.

ಎರಡನೇ ಹಂತದ ಕಾಮಗಾರಿಗೆ ಈಗಾಗಲೇ ರೈತರ ಜಮೀನಿನಲ್ಲಿ ನಾಲೆ ನಿರ್ಮಿಸಲಾಗಿದ್ದು ಕಾಮಗಾರಿಗೆ ವಶಪಡಿಸಿಕೊಂಡಿರುವ ಜಮೀನಿನ ರೈತರಿಗೆ ಪರಿಹಾರ ಕೊಟ್ಟಿರುವುದಿಲ್ಲ ಕೂಡಲೇ ರೈತರಿಗೆ ಕೊಡಬೇಕಾಗಿರುವ ಪರಿಹಾರದ ಮೊತ್ತವನ್ನು ಬಿಡುಗಡೆಮಾಡುವಂತೆ ಸರ್ಕಾರ ಹಾಗೂ ನೀರಾವರಿ ಇಲಾಖೆಯನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ ನಡೆದಿರುವ ಭೂ ಅಕ್ರಮದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸಬೇಕು ಜೊತೆಗೆ ಭೂಮಿಯನ್ನು ವಶಕ್ಕೆ ಪಡೆದು ಭೂರಹಿತರಿಗೆ ನೀಡಬೇಕೆಂದು ಆಗ್ರಹಿಸಿದರು.

ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ನಡೆದಿರುವ ಭೂ ಅಕ್ರಮದ ಬಗ್ಗೆ ರಾಜ್ಯವೇ ತಲ್ಲಣಿಸಿದ್ದು ಸುಮಾರು ಎರಡು ತಾಲೂಕಿನ ೫೫೦೦ ಎಕರೆಯ? ಪ್ರದೇಶದ ಭೂಮಿಯನ್ನು ಫಾರಂ ನಂಬರ್ ೫೦, ೫೩, ೫೭ ಅಡಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ನಿಯಮವನ್ನು ಗಾಳಿಗೆ ತೂರಿ ಖಾತೆ ಮಾಡಿರುವುದಾಗಿ ವರದಿಯಲ್ಲಿ ಬಹಿರಂಗಗೊಂಡಿದೆ ಎಂದರು.

ಕಡೂರು ತಾಲೂಕು ತಹಶೀಲ್ದಾರ್ ಆಗಿದ್ದ ಜೆ ಉಮೇಶ್ ರವರು ಜೆ.ಎಲ್ ಮತ್ತು ಜೆ.ಉಮೇಶ್ ಎಂಬ ಎರಡು ಲಾಗಿನ್‌ಗಳಲ್ಲಿ ೩೨೫ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದಾಗಿ ಉಪ ವಿಭಾಗಾಧಿಕಾರಿಗಳು ವರದಿಯಲ್ಲಿ ತಿಳಿಸಿದ್ದು. ಅರ್ಜಿಯನ್ನು ಪಡೆಯದೆ ಖಾತೆ ಪಹಣಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಒಟ್ಟು ೬೫೦ ಪ್ರಕರಣಗಳಲ್ಲಿ ತಹಸೀಲ್ದಾರ್ ಕೈವಾಡ ಇರುವುದಾಗಿ ತಿಳಿಸಿದರು.

ಉಳ್ಳಿನಾಗರು ಗ್ರಾಮದ ಸರ್ಕಾರಿ ಬೀಳು ಜಮೀನಿಗೆ ಸಂಬಂಧಪಟ್ಟಂತೆ ತಹಶೀಲ್ದಾರ್ ಜೆ.ಉಮೇಶ್ ರವರನ್ನು ಬಂಧಿಸಿದ್ದು ನ್ಯಾಯಾಲಯದ ಶರತ್ತು ಬದ್ದ ಜಾಮೀನು ನೀಡಿರುವುದಾಗಿ ತಿಳಿಸಿದ ಅವರು ೩೨೪ ಕಡತಗಳಲ್ಲಿ ಅರ್ಜಿ ಇಲ್ಲಿದೆ ಹಾಗೂ ಹೊರಗಿನ ವ್ಯಕ್ತಿಗಳಿಗೆ ಖಾತೆ ಮಾಡಿರುವುದು ಸೇರಿದಂತೆ ಉಪವಿಭಾಗಾಧಿಕಾರಿಗಳು ವರದಿ ಸಲ್ಲಿಸಿದ್ದು ಈ ತಹಶೀಲ್ದಾರ್ ಮೇಲೆ ಜಿಲ್ಲಾಧಿಕಾರಿಗಳ ಕ್ರಿಮಿನಲ್ ಮುಖದ್ದಮೆ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಇದಲ್ಲದೆ ಸುಮಾರು ೩೦೦ ಎಕರೆ, ಅರಣ್ಯ ಭೂಮಿ, ಹುಲಿಸಂರಕ್ಷಿತ ಪ್ರದೇಶದ ಭೂಮಿಯನ್ನು ಬಿಡದೆ ಖಾತೆ ಪಹಣಿ ಮಾಡಿದ್ದು ಬಹಳ? ನೌಕರರೇ ಈ ಭೂಮಿಯ ಫಲಾನುಭವಿಗಳಾಗಿದ್ದಾರೆ

ಹೆದ್ದಾರಿ ಪ್ರಾಧಿಕಾರ ರಸ್ತೆ ಅಭಿವೃದ್ಧಿ ಪಡಿಸುವಾಗ ಲಿಂಗ್ಲಾಪುರ ಸರ್ವೆನಂಬರ್‌ನಲ್ಲಿ ಗ್ರಾಮಧವರೆ ಅಲ್ಲಧವರಿಗೆ ಖಾತೆ ಮಾಡಿಕೊಟ್ಟಿದ್ದಾರೆಂದು ಆರೋಪಿಸಿದರು.

ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್ ಮಾತನಾಡಿ ಹಳುವಳ್ಳಿ ಬಾಣವಾರ ಗಂಜಲಗೋಡು ಮತ್ತಿಕೆರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು ದುರಸ್ತಿ ಪಡಿಸುವಂತೆ ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಶಾಸಕರಿಗೆ ಮನವಿ ನೀಡಿದರು ಪ್ರಯೋಜನವಾಗಿಲ್ಲ ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಶಾಸಕಿ ನಯನ ಮೋಟಮ್ಮ ಮನೆ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಎಂ.ಸಿ. ಬಸವರಾಜ್, ಎಂ.ಬಿ. ಚಂದ್ರಶೇಖರ್, ಆನಂದ್, ಎಚ್.ಎಸ್. ಲೋಕೇಶ್, ಮಲ್ಲುಂಡಪ್ಪ, ಪರ್ವತೇಗೌಡ ಉಪಸ್ಥಿತರಿದ್ದರು.

Farmers union protest demanding work

 

About Author

Leave a Reply

Your email address will not be published. Required fields are marked *

You may have missed