September 20, 2024

ಗಾರ್ಮೆಂಟ್ಸ್ – ಪ್ರತ್ಯೇಕ ಹಾಲಿನ ಒಕ್ಕೂಟ ಸಖರಾಯಪಟ್ಟಣದಲ್ಲಿ ಮಾಡಲು ವಿಧಾನ ಸಭೆಯಲ್ಲಿ ಚರ್ಚೆ

0
ಅಯ್ಯನಕೆರೆಗೆ ಹೋಗುವ ರಸ್ತೆಯ ಸಂಪರ್ಕ ಟಾರ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಅಯ್ಯನಕೆರೆಗೆ ಹೋಗುವ ರಸ್ತೆಯ ಸಂಪರ್ಕ ಟಾರ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಚಿಕ್ಕಮಗಳೂರು:  ಸರಕಾರದ ಯಾವುದೇ ಕಾಮಗಾರಿಯಾಗಲಿ ಗುಣಮಟ್ಟ ಉತ್ತಮವಾಗಿರಬೇಕು. ಇದರಲ್ಲಿ ಸಾರ್ವಜನಿಕರ ಜವಬ್ದಾರಿಯೂ ಹೆಚ್ಚಿನದಾಗಿದೆ ಎಮದು ಶಾಸಕ ಹೆಚ್ ಡಿ ತಮ್ಮಯ್ಯ ಹೇಳಿದರು.

ಸಖರಾಯಪಟ್ಟಣದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ೧೦ ಲಕ್ಷ ರೂ. ವೆಚ್ಚದಲ್ಲಿ ಶಿವರಾಂ ಮನೆಯಿಂದ ಅಯ್ಯನಕೆರೆಗೆ ಹೋಗುವ ರಸ್ತೆಯ ಸಂಪರ್ಕ ಟಾರ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ೮ ಕೋಟಿ ರೂ.ಗಳ ಕಾಮಗಾರಿಯನ್ನು ಈಗಾಗಲೇ ಕ್ಷೇತ್ರದ ಎಲ್ಲಾ ಭಾಗಗಳಲ್ಲೂ ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ರಸ್ತೆ ಮಾಡುವಾಗ ಗುಣಮಟ್ಟವನ್ನು ಗಮನಿಸುತ್ತಿರಬೇಕು.

ಸರಕಾರ ಈಗಾಗಲೇ ನಾಲ್ಕು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಮಾತಿನಂತೆ ನಡೆದುಕೊಂಡಿದೆ. ನಾನೂ ಸಹಿತ ಈ ಭಾಗಕ್ಕೆ ನೀರಾವರಿಗೆ ಮತ್ತುಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕಂಕಣ ಬದ್ಧನಾಗಿದ್ದೇನೆ. ಇದರಿಂದ ರೈತರಿಗೆ, ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಅನುಕೂಲವಾಗುತ್ತದೆ.

ನನ್ನ ಕನಸಾದ ಗಾರ್ಮೆಂಟ್ಸ್ ಮತ್ತು ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲಿನ ಒಕ್ಕೂಟವನ್ನುಸಖರಾಯಪಟ್ಟಣದಲ್ಲಿ ಮಾಡಲು ವಿಧಾನ ಸಭೆಯಲ್ಲಿ ಚರ್ಚೆ ಮಾಡಿದ್ದೇನೆ. ಇದಕ್ಕೆ ಪ್ರಯತ್ನಗಳು ನಡೆಯುತ್ತಿದೆ ಎಂದರು.

ಗ್ರಾಪಂ.ಅಧ್ಯಕ್ಷೆ ರಾಜಮ್ಮ ಮಾತನಾಡಿ, ನಮಗೆ ಕಸ ವಿಲೇವಾರಿ ಘಟಕ ಸ್ಥಾಪಿಸಲು ಜಾಗವನ್ನು ತೋರಿಸುತ್ತಿಲ್ಲ. ಕಸ ಹಾಕಲು ತುಂಬಾ ತೊಂದರೆಯಾಗುತತಿದೆ. ಅಧಿಕಾರಿಗಳಿಗೆ ಹೇಳಿ ಘಟಕ ನಿರ್ಮಾಣ ಮಾಡಲು ಸ್ಥಳಾವಕಾಶಕ್ಕೆ ಸಹಕರಿಸಿ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಅಣ್ಣಯ್ಯ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ,ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಂದರ್ಯ, ರತ್ನಾಕರ್, ಮಂಜಣ್ಣ, ನಿಂಗಣ್ಣ, ಗ್ರಾಪಂ.ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.

Guddali Puja for the construction of tar road connecting the road to Ayyanakere

About Author

Leave a Reply

Your email address will not be published. Required fields are marked *