September 20, 2024

ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಸಿದ್ದವಾದ ಸ್ಥಳ

0
ಏರ್ ಸ್ಟ್ರಿಪ್ ಅಭಿವೃದ್ಧಿ ಪಡಿಸುವ ಸಭೆ

ಏರ್ ಸ್ಟ್ರಿಪ್ ಅಭಿವೃದ್ಧಿ ಪಡಿಸುವ ಸಭೆ

ಚಿಕ್ಕಮಗಳೂರು:  ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಪ್ರಸಿದ್ದವಾದ ಪ್ರೇಕ್ಷಣೀಯ ಮತ್ತು ಪುಣ್ಯ ಕ್ಷೇತ್ರಗಳಿದ್ದು, ಪ್ರತಿ ವರ್ಷ ಹೊರ ರಾಜ್ಯದ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುವುರಿಂದ ಕಿರು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್. ರವಿ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಏರ್ ಸ್ಟ್ರಿಪ್ ಅಭಿವೃದ್ಧಿ ಪಡಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡುತ್ತಿದ್ದ ಅವರು ಜಿಲ್ಲೆಯಲ್ಲಿ ನಗರದ ಅಂಬಲೆ ಕೈಗಾರಿಕ ಪ್ರದೇಶದ ಸಮೀಪ ಗುರುತಿಸಲಾಗಿರುವ ಸುಮಾರು ೧೦೫ ಎಕರೆ ಸರ್ಕಾರಿ ಜಮೀನು ಈಗಾಗಲೇ ಗುರುತಿಸಲಾಗಿದ್ದು ಪಕ್ಕದ ಸುಮಾರು ೧೯ ಎಕರೆ ಜಮೀನು ಖಾಸಗಿಯಾಗಿದ್ದು ಇದನ್ನು ಭೂಸ್ವಾಧೀನ ಪ್ರಕ್ರೀಯೆ ಪೂರ್ಣಗೊಳಿಸುವ ಹಂತದಲ್ಲಿದ್ದು ಶೀರ್ಘವಾಗಿ ಭೂಸ್ವಾಧೀನ ಪ್ರಕ್ರೀಯೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಅವರು ನೇರವಾಗಿ ರೈತರಿಂದ ಖರೀದಿಸಲಾಗುವುದು ಎಂದರು.

ಕಿರು ವಿಮಾನ ನಿಲ್ದಾಣಕ್ಕೆ ಸರ್ಕಾರ ೨೦೧೮ರಲ್ಲಿ ಅನುಮತಿ ನೀಡಿದ್ದು ಕಾರ್ಯ ಸಾಧ್ಯತೆ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಸೇರ್ಪಡೆಯಾಗಿದೆ ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮದಂತೆ ಅಭಿವೃದ್ಧಿ ಪಡಿಸಲು ಕೆಎಸ್‌ಐಐಡಿಸಿಗೆ ವಹಿಸಲಾಗಿದ್ದು ೧೦ ಕೋಟಿ ರೂ.ಗಳು ಮಂಜೂರಾಗಿದ್ದು ಈಗಾಗಲೇ ೭ ಕೋಟಿ ರೂ.ಗಳು ಬಿಡುಗಡೆಯಾಗಿದೆ ಹೆಲಿ ಪೋರ್ಟ್ ಹಾಗೂ ಕಿರು ವಿಮಾನ ಈವೆರಡನ್ನು ಅವಲಂಬಿಸಿ ೨೦೨೨-೨೩ ರಲ್ಲಿ ಚಿಕ್ಕಮಗಳೂರು, ರಾಯಚೂರು ಹಾಗೂ ಹಂಪಿಯಲ್ಲಿ ನಿರ್ವಹಿಸಲು ಸರ್ಕಾರ ಆದೇಶ ನೀಡಿ ಹಾಗೂ ಮಂಜೂರು ಮಾಡಿದೆ ಎಂದರು.

೨೦೨೩-೨೪ ಆಯವ್ಯಯದಲ್ಲಿ ಜಿಲ್ಲೆಯಲ್ಲಿ ಏರ್ ಸ್ಟ್ರಿಪ್ ಅಭಿವೃದ್ಧಿ ಪಡಿಸಲು ೧೨೦-೨೨ ಎಕರೆ ಏರ್ ಸ್ಟ್ರಿಪ್‌ಗಾಗಿ ಕಾಯ್ದಿರಿಸಲಾಗಿದ್ದು ೧೨೦೦ ಮೀಟರ್ ರನ್ ವೇಗೆ ಅಗತ್ಯವಿರುವ ಭೂಮಿಯನ್ನು ಸ್ವಾಧಿನಪಡಿಕೊಳ್ಳಲಾಗಿದೆ ಇದರ ಡಿಪಿಆರ್ ನ್ನು ಸಿದ್ದಪಡಿಸಲು ಮೆ|| ಪವನ್ ಹನ್ಸ್. ಲಿ. ಸಂಸ್ಥೆಯನ್ನು ನೇಮಿಸಲಾಗಿದೆ ಮುಂದಿನ ೧೮ ರಿಂದ ೨೦ ತಿಂಗಳಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳಿಸಲು ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಕಿರು ವಿಮಾನ ನಿಲ್ದಾಣ ಹೆಲಿ ಪೋರ್ಟ್ ತುಂಬ ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್. ಸಿ.ಎನ್ ಅವರು ಸರ್ಕಾರಿ ಜಮೀನು ಬಿಟ್ಟು ಉಳಿದ ಖಾಸಗಿ ಜಮೀನುಗಳಲ್ಲಿ ಭೂಸ್ವಾಧಿನ ಪಡಿಸಿಕೊಳ್ಳಲು ವಿವಿಧ ಬೆಳೆಗಳಿದ್ದು ಇತರೆ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದ ಅವರು ರೈತರ ಜಮೀನು, ಬೆಳೆಗಳ ದರ ನಿಗದಿಪಡಿಸಲು ಕ್ರಮಕೈಗೊಳ್ಳಲಾಗಿದೆ ಜಿಲ್ಲೆಗೆ ಆದಷ್ಟು ಬೇಗ ಹೆಲಿ ಪೋರ್ಟ್, ಕಿರು ವಿಮಾನ ನಿಲ್ದಾಣ ಪ್ರಾರಂಭಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಸಭೆಗೂ ಮುನ್ನ ಅಧಿಕಾರಿಗಳ ತಂಡ ಹಾಗೂ ತಂತ್ರಜ್ಞಾನ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಾನಿರ್ವಾಹಕ ಅಧಿಕಾರಿ ಪ್ರಕಾಶ್, ಉಪವಿಭಾಗಾಧಿಕಾರಿ ರಾಜೇಶ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ದರಾಜು, ರವಿಪ್ರಸಾದ್, ತಹಶೀಲ್ದಾರ್ ಡಾ|| ಸುಮಂತ್ ಹಾಗೂ ಅನುಷ್ಠನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದು.

air strip development meeting

About Author

Leave a Reply

Your email address will not be published. Required fields are marked *