September 20, 2024

ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಲಭಿಸುತ್ತದೆ

0
Taluk Level Second Sports Meet

Taluk Level Second Sports Meet

ಚಿಕ್ಕಮಗಳೂರು: ವಿದ್ಯೆ ಎಷ್ಟು ಮುಖ್ಯವೋ ಕ್ರೀಡೆ ಅಷ್ಟೆ ಮುಖ್ಯ. ಆರೋಗ್ಯಕ್ಕೆ ಆಹಾರ ಅತಿ ಮುಖ್ಯ. ದೈಹಿಕ ಸಾಮರ್ಥ್ಯ ಕ್ರೀಡೆಯಿಂದ ಲಭಿಸುತ್ತದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹಾರೈಸಿದರು.

ಅವರು ಇಂದು ನೇತಾಜಿ ಸುಭಾ? ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ೨೦೨೩-೨೪ ನ್ನು ಉದ್ಘಾಟಿಸಿ ಮಾತನಾಡಿದರು.

ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಹೆಮ್ಮೆ. ಇದರಲ್ಲಿ ಗೆಲುವು, ಸೋಲು ಮುಖ್ಯವಲ್ಲ ಕ್ರೀಡಾಸಕ್ತಿಯಿಂದ ಭಾಗವಹಿಸುವುದು ಮುಖ್ಯ. ಜೀವನದಲ್ಲಿ ಮುಂದೆ ಬರಬೇಕಾದರೆ ವಿದ್ಯೆ ಎ? ಮುಖ್ಯವೋ ಕ್ರೀಡೆ ಅ? ಮುಖ್ಯ. ಆರೋಗ್ಯಕ್ಕೆ ಆಹಾರ ಅತಿ ಮುಖ್ಯ. ದೈಹಿಕ ಸಾಮರ್ಥ್ಯ ಕ್ರೀಡೆಯಿಂದ ಲಭಿಸುತ್ತದೆ ಎಂದರು.

ಭಾರತ ದೇಶ, ಸಮಾಜ ನಮಗೇನು ಕೊಟ್ಟಿದೆ ಎಂಬುದಾಗಿ ಪ್ರಶ್ನಿಸುವುದಕ್ಕಿಂತ ನಾವು ಸಮಾಜಕ್ಕೇನು ಕೊಡುಗೆ ಕೊಟ್ಟಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಮುಖ್ಯ. ಕ್ರೀಡಾ ದಿನಾಚರಣೆ ಹಾಗೂ ಕ್ರೀಡಾಪಟು ಧ್ಯಾನ್‌ಚಂದ್ ಸಾಧನೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಈ ಕ್ರೀಡೆಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳಿಗೆ ನಿಷ್ಪಕ್ಷಪಾತವಾದ ತೀರ್ಪನ್ನು ನೀಡಬೇಕೆಂದು ತೀರ್ಪುಗಾರರಲ್ಲಿ ಮನವಿ ಮಾಡಿದ ತಮ್ಮಯ್ಯ ಕ್ರೀಡಾ ಕೌಶಲ್ಯಗಳಿಗೆ ತಕ್ಕಂತೆ ಅವರಿಗೆ ಪ್ರೋತ್ಸಾಹಿಸಿ ಗೌರವಿಸಬೇಕೆಂದು ಸಲಹೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಮಂಜುಳ ಹುಲ್ಲಹಳ್ಳಿ ಸ್ವಾಗತಿಸಿ ಮಾತನಾಡಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಜಿಲ್ಲೆ, ವಿಭಾಗಮಟ್ಟ, ರಾಜ್ಯಮಟ್ಟಕ್ಕೆ ಹೋಗಿ ತಮ್ಮ ಕೀರ್ತಿ ಹೆಚ್ಚಿಸಿಕೊಂಡಿರುವ ನಿದರ್ಶನಗಳಿವೆ ಎಂದು ಶ್ಲಾಘಿಸಿದರು.

ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕ್ರೀಡೆಯ ಮಹತ್ವವನ್ನು ಹೆಚ್ಚಿಸುವಂತೆ ಶುಭ ಹಾರೈಸಿದರು.ಸಮಾರಂಭದಲ್ಲಿ ವಾಲಿಬಾಲ್ ತರಬೇತುದಾರರಾದ ವಿನುತ, ಕ್ರೀಡಾಪಟು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಶಿವು, ತರಬೇತಿದಾರರು, ತೀರ್ಪುಗಾರರು ಭಾಗವಹಿಸಿದ್ದರು.

Taluk Level Second Sports Meet

About Author

Leave a Reply

Your email address will not be published. Required fields are marked *