September 20, 2024

ಸಂಜೀವಿನಿ ಶಾಲೆ ಸಮಗ್ರ ಪ್ರಶಸ್ತಿ

0
ನಗರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಅತಿಥೇಯ ಸಂಜೀವಿನಿ ಶಾಲೆ ಸಮಗ್ರ ಪ್ರಶಸ್ತಿ

ನಗರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಅತಿಥೇಯ ಸಂಜೀವಿನಿ ಶಾಲೆ ಸಮಗ್ರ ಪ್ರಶಸ್ತಿ

ಚಿಕ್ಕಮಗಳೂರು:  ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ಯವರ ಸ್ಮರಣಾರ್ಥ ಇಲ್ಲಿನ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ನಗರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಅತಿಥೇಯ ಸಂಜೀವಿನಿ ಶಾಲೆ ಸಮಗ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಬೆಳಗಿನಿಂದ ಮಧ್ಯಾಹ್ನದವರೆಗೆ ನಡೆದ ಎಲ್ಲಾ ಸ್ಪರ್ಧೆಗಳಲ್ಲೂ ಸತತ ಗೆಲುವು ಸಾಧಿಸುವ ಮೂಲಕ ಸಂಜೀವಿನಿ ಶಾಲೆ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಪ್ರಬಂಧ ಸ್ಪರ್ಧೆಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಾಸವಿ ವಿದ್ಯಾಲ ಯದ ವಿದ್ಯಾರ್ಥಿ ನಿಶ್ಚಿತ್ ಪ್ರಥಮ, ಸಂಜೀವಿನಿ ಶಾಲೆಯ ಎಸ್.ಎನ್.ಪುಣ್ಯಶ್ರೀ ದ್ವಿತೀಯ, ಜೆವಿಎಸ್ ಶಾಲೆಯ ಸಾನ್ವಿಕ ತೃತೀಯ ಸ್ಥಾನ ಗಳಿಸಿದರು.

ಪ್ರೌಢಶಾಲಾ ವಿಭಾಗದಲ್ಲಿ ಯುನೈಟೆಡ್ ಶಾಲೆಯ ಸಾರಾ ಫಾತಿಮಾ ಪ್ರಥಮ, ಸಂಜೀವಿನಿಯ ಎಂ.ಅನಂತಶ್ರೀ ದ್ವಿತೀಯ, ವಾಸವಿ ಶಾಲೆಯ ಕವನ ತೃತೀಯ ಸ್ಥಾನ ಪಡೆದರು.

ಚಿತ್ರಕಲಾ ಸ್ಪರ್ಧೆಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ಎಂ.ನಿರೀಕ್ಷ ಪ್ರಥಮ, ಮೌಂಟೇನ್ ಫ್ಯೂ ಶಾಲೆಯ ಸಿ.ಎಸ್.ಲೋಹಿತ್ ದ್ವಿತೀಯ, ನರ್ಚರ್ ಶಾಲೆಯ ಮೇಘ ತೃತೀಯ ಸ್ಥಾನ ಪಡೆದರು.

ಪ್ರೌಢಶಾಲಾ ವಿಭಾಗದಲ್ಲಿ ಸೇಂಟ್ ಮೇರಿ ಶಾಲೆಯ ಎಸ್.ಭಾರ್ಗವಿ ಪ್ರಥಮ, ಸಂಜೀವಿನಿಯ ಎಂ.ಅನಂತಶ್ರೀ ದ್ವಿತೀಯ, ಯುನೈಟೆಡ್ ಶಾಲೆಯ ಉಮ್ಮೆ ಹಬೀಬಾ ತೃತಿಯ ಸ್ಥಾನ ಪಡೆದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಶಾಲೆಯ ತಂಡ ಪ್ರಥಮ, ಬಿಜಿಎಸ್ ಮಂಜುನಾಥೇಶ್ವರ ಶಾಲೆಯ ತಂಡ ದ್ವಿತೀಯ, ಸೈಂಟ್ ಜೇವಿಯರ್ ಶಾಲೆಯ ತಂಡ ತೃತೀಯ ಸ್ಥಾನ ಗಳಿಸಿತು.

ನಗರದ ೨೦ಶಾಲೆಗಳ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವ ಹಿಸಿದ್ದರು. ತೀರ್ಪುಗಾರರಾಗಿ ಶಿಕ್ಷಕ ವಿಜಯಕುಮಾರ್, ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ, ಸಂಪತ್, ಸತ್ಯಪ್ರಕಾಶ್, ನಾಮದೇವ್ ಕಾರ್ಯನಿರ್ವಹಿಸಿದರು.

ಸಂಜೀವಿನಿ ವಿದ್ಯಾ ಸಂಸ್ಥೆಯ ಸದಸ್ಯ ಎಂ.ಗೋಪಿನಾಥ್ ಬೆಳಿಗ್ಗೆ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್, ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜೀವಿನಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಎಸ್. ಶಾಂತಕುಮಾರಿ ಸ್ಪರ್ಧೆಗಳ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಸಂಜೀವಿನಿ ವಿದ್ಯಾಸಂಸ್ಥೆಯ ಖಜಾಂಚಿ ಎಂ.ಪಿ.ಉಡುಪ, ಕಾರ್ಯಕಾರಿ ಸಮಿತಿ ಸದಸ್ಯ ನಾರಾಯಣಮಲ್ಯ, ಪ್ರಾಂಶುಪಾಲ ಪವನ್‌ಕುಮಾರ್, ಉಪ ಪ್ರಾಂಶುಪಾಲೆ ಕುಮುದಾ ಕಿಣಿ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಶ್ರೀವತ್ಸ ಉಪಸ್ಥಿತರಿದ್ದರು.

Sanjeevini School Comprehensive Award

About Author

Leave a Reply

Your email address will not be published. Required fields are marked *