September 20, 2024

ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿ ದೇಶದ ಯಾವುದೇ ಖಾಸಗಿ ಮೆಡಿಕಲ್ ಕಾಲೇಜಿಗೆ ಕಡಿಮೆ ಇಲ್ಲ

0
ಮೆಡಿಕಲ್ ಕಾಲೇಜು ಮುಖ್ಯಸ್ಥರಿಗೆ ಬಸ್‌ನ ಕೀಲಿ ಹಸ್ತಾಂತರ

ಮೆಡಿಕಲ್ ಕಾಲೇಜು ಮುಖ್ಯಸ್ಥರಿಗೆ ಬಸ್‌ನ ಕೀಲಿ ಹಸ್ತಾಂತರ

ಚಿಕ್ಕಮಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ನೂತನ ಬಸ್‌ವೊಂದನ್ನು ಕೊಡುಗೆಯಾಗಿ ನೀಡಿದೆ.

ಸೋಮವಾರ ಬ್ಯಾಂಕ್‌ನ ವಿಭಾಗೀಯ ಮಹಾ ವ್ಯವಸ್ಥಾಪಕ ಜೋಬಿ ಜೋಸ್ ಅವರು ಮೆಡಿಕಲ್ ಕಾಲೇಜು ಮುಖ್ಯಸ್ಥರಿಗೆ ಬಸ್‌ನ ಕೀಲಿಯನ್ನು ಹಸ್ತಾಂತರಿಸಿದರು.

ಇ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಎಸ್‌ಬಿಐನ ಬಸ್ ಸೇರಿ ಕಾಲೇಜಿಗೆ ಒಟ್ಟು ೩ ಬಸ್‌ಗಳು ಖಾಸಗಿಯವರಿಂದ ಕೊಡುಗೆಯಾಗಿ ಬಂದಿದೆ. ಇಡೀ ರಾಜ್ಯದಲ್ಲಿ ಇದೇ ಮೊದಲಾಗಿದೆ. ಸರ್ಕಾರಿ ಕಾಲೇಜಿಗಳಲ್ಲಿ ಕಲಿಯುವ ಮಕ್ಕಳಿಗೆ ಅನುಕೂಲವಾಗಲಿ ಎನ್ನುವುದು ಬ್ಯಾಂಕ್‌ನ ಉದ್ದೇಶವಾಗಿದೆ. ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿ ದೇಶದ ಯಾವುದೇ ಖಾಸಗಿ ಮೆಡಿಕಲ್ ಕಾಲೇಜಿಗೆ ಕಡಿಮೆ ಇಲ್ಲ. ಅತ್ಯುತ್ತಮ ಪರಿಸರ ಇಲ್ಲಿಯದ್ದಾಗಿದೆ. ಜೀವನದಲ್ಲಿ ನೆನಪಿಡುವ ಜಾಗ ಇದಾಗಿದೆ ಎಂದರು.

ವ್ಯದ್ಯಕೀಯ ಮತ್ತು ನರ್ಸಿಂಗ್ ಪದವಿ ಪಡೆಯುವುದರ ಜೊತೆಗೆ ಸೇವೆಯಲ್ಲೂ ಉತ್ತಮ ಸಾಧನೆ ಮಾಡಬೇಕು. ಕೇವಲ ವ್ಯಾವಹಾರಿಕವಾಗಿ ಯೋಚಿಸದೆ. ಬಡವರಿಗೆ, ರೈತರಿಗೆ ಸೇವಾ ಮನೋಭಾವದಿಂದ ನೆರವು ನೀಡಬೇಕು ಎಂದು ಕರೆ ನೀಡಿದರು.

ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಬರುವವರೆಲ್ಲರೂ ಸಾಮಾನ್ಯವಾಗಿ ಬಡ ರೋಗಿಗಳಾಗಿರುತ್ತಾರೆ. ಅವರಿಗೆ ಉತ್ತಮ ಸೇವೆಯನ್ನು ಒದಗಿಸಬೇಕು. ಬಸ್‌ನ ಕೊಡುಗೆ ನೀಡಿದ ಎಸ್‌ಬಿಐಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಸರಿಯಾಗಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಇನ್ನೆರಡು ತಿಂಗಳಲ್ಲಿ ಹಾಸ್ಟೆಲ್ ಕಟ್ಟಡವನ್ನು ವಿದ್ಯಾರ್ಥಿಗಳ ಬಳಕೆಗೆ ಬಿಟ್ಟುಕೊಡಬೇಕು ಎಂದು ಇಂಜಿನೀಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಎಸ್.ಬಿ.ಐ ಬ್ಯಾಂಕ್‌ನ ಉಪಪ್ರದಾನ ವ್ಯವಸ್ಥಾಪಕರಾದ ಜೋಬಿ ಜೋಸ್ ಮಾತನಾಡಿ ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಅಭಿವೃದ್ಧಿಯಲ್ಲಿ ಬ್ಯಾಂಕ್ ಕೈಜೋಡಿಸುತ್ತಿರುವುದಕ್ಕೆ ಹೆಮ್ಮೆ ಇದೆ. ಚಿಕ್ಕಮಗಳೂರು ಸುತ್ತಮುತ್ತಲಿನ ಜನರಿಗೆ ಮೆಡಿಕಲ್ ಕಾಲೇಜಿನಿಂದ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದೇಶದ ಬಹುದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿದ್ದು, ಒಟ್ಟು ೭೮ ಲಕ್ಷ ಕೋಟಿ ರೂ.ನಷ್ಟು ಆರ್ಥಿಕ ವ್ಯವಹಾರವನ್ನು ನಡೆಸುತ್ತಿದೆ. ಇದರ ನಡುವೆ ಸಾರ್ವಜನಿಕ ಉದ್ದೇಶಗಳಿಗೆ ಬಸ್‌ಗಳು, ಆಂಬುಲೆನ್ಸ್‌ಗಳು ಇನ್ನಿತರೆ ರೂಪದಲ್ಲಿ ನೆರವುಗಳನ್ನು ನೀಡುತ್ತಾ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದೆ ಎಂದರು.

ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಮತ್ತು ಬ್ಯಾಂಕ್‌ನ ನಡುವೆ ಗಟ್ಟಿಯಾದ ಬಾಂಧವ್ಯ ಮುಂದುವರಿಯಲಿದೆ. ಇದು ಬ್ಯಾಂಕ್ ಮತ್ತು ಕಾಲೇಜು ಎರಡರ ಅಭಿವೃದ್ಧಿ ದೃಷ್ಠಿಯಿಂದ ತುಂಬಾ ಮಹತ್ವದ್ದಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಅನುಕೂಲತೆ ದೃಷ್ಠಿಯಿಂದ ಬಸ್ ನೀಡುರುವುದು ಸಹಕಾರಿ ಎಂದು ತಿಳಿಸಿದರು.

ಎಸ್‌ಬಿಐನ ಎಜಿಎಂ ಕನ್ನಯ್ಯಲಾಲ್ ಗೋಪಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶ್ವತ್ ಬಾಬು ಇತರರು ಹಾಜರಿದ್ದರು.

Handing over the key of the bus to the principal of the medical college

About Author

Leave a Reply

Your email address will not be published. Required fields are marked *